ಪ್ರವಾಸದ ಅನುಭವ ನೀಡುವ ಪೆರುವಿನ ಪವಿತ್ರ ಕಣಿವೆ
Team Udayavani, Nov 14, 2018, 3:41 PM IST
ಉದ್ಯೋಗ, ಮನೆ, ಮಕ್ಕಳು ಇರುವ ಸಾಂಪ್ರದಾಯಿಕ ಭಾರತೀಯ ಮಹಿಳೆಯರೂ ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಧೈರ್ಯದಿಂದ ಪಯಣಿಸಬಹುದು ಎಂಬುದನ್ನು ಕಲಿಸಿಕೊಡುವ ಪ್ರವಾಸ ಕಥನ ನೇಮಿಚಂದ್ರ ಅವರ ಪೆರುವಿನ ಪವಿತ್ರ ಕಣಿವೆ. ಲೇಖಕಿ ತಮ್ಮ ಸಹೋದ್ಯೋಗಿ ಮಾಲತಿ ಜತೆ ದಕ್ಷಿಣ ಅಮೆರಿಕ ಖಂಡದ ಪೆರುವಿಗೆ ಹೋದ ಅನುಭವ ಮತ್ತು ಪೆರುವಿನ ಇತಿಹಾಸದ ಸಂಪೂರ್ಣ ಚಿತ್ರಣ ಈ ಪುಸ್ತಕದಲ್ಲಿದೆ.
ಘಟನೆ 1
ನಾಸ್ಕಾದ ಮರುಭೂಮಿಯಲ್ಲಿ ಅಡ್ಡಾಡಿದ ಅಪರೂಪದ ಪ್ರಯಾಣಿಕರಿಗೆ ನೆಲದ ಮಟ್ಟದಿಂದ ಈ ಗೆರೆಗಳಿಗೆ ಯಾವ ಅರ್ಥವೂ ಗೋಚರಿಸುತ್ತಿರಲಿಲ್ಲ. ಇಲ್ಲಿ ವಿಮಾನಗಳು ಹಾರಲು ಆರಂಭಿಸಿದ ಮೇಲೆ ಪ್ರಯಾಣಿಕರಿಗೆ ಈ ನೆಲದಲ್ಲಿನ ಬೃಹತ್ ಚಿತ್ರಗಳು ಗೋಚರಿಸತೊಡಗಿದವು. ವಿಮಾನದಿಂದ ತೆಗೆದ ಛಾಯಾಚಿತ್ರಗಳು ಅತ್ಯದ್ಭುತ ರೇಖಾ ಚಿತ್ರಗಳು ಗೋಚರಿಸಿದವು. ಮನುಷ್ಯ ಆಕಾಶದಲ್ಲಿ ಹಾರುವುದನ್ನು ಕಲಿತು ಕೇವಲ ನೂರು ವರ್ಷಗಳಾಗಿವೆ. ಈ ಚಿತ್ರಗಳು ಏನಿಲ್ಲವೆಂದರೂ 1,500 ವರ್ಷಗಳಷ್ಟು ಹಳೆಯವು. ಇದೇ ಇಲ್ಲಿನ ವಿಸ್ಮಯ.
ಘಟನೆ 2
ರೈಲಿನಲ್ಲಿ ಸಿಕ್ಕ ಕ್ಯಾಲಿಫೋರ್ನಿಯಾದ ಮಹಿಳೆ ನೇಮಿಚಂದ್ರ ಮತ್ತು ಮಾಲತಿಯವರ ಪರಿಚಯ ಕೇಳಿ ಆಶ್ಚರ್ಯಪಟ್ಟಳು. ಭಾರತದ ಇಬ್ಬರು ಮಹಿಳೆಯರು ಗಂಡ, ಮನೆ, ಮಕ್ಕಳನ್ನು ಬಿಟ್ಟು ಸ್ವತಂತ್ರವಾಗಿ ದೇಶ-ವಿದೇಶ ಸುತ್ತಲು ಹೊರಟಿರುವುದು ಆಕೆಗೆ ಅದ್ಭುತವಾಗಿ ಕಂಡಿತು. ಭಾರತದ ಬರೀ ನಕರಾತ್ಮಕ ಚಿತ್ರಗಳನ್ನೇ ಕಂಡು ಕೇಳಿದ ಆಕೆಗೆ ಭಾರತದ ಸಂಸ್ಕೃತಿಯ ಮತ್ತೊಂದು ಪರಿಚಯವನ್ನು ಮಾಡಿಸಿಕೊಟ್ಟರು.
ಘಟನೆ 3
ಅಮೆಜಾನ್ ನದಿಯ ಮೇಲೆ ಕನಸಿನ ಪಯಣ ಹೊರಟ ಲೇಖಕಿಗೆ ಬೋಟಿನಲ್ಲಿ ಮಿನಿ ಭಾರತವೇ ಕಂಡಿತು. ಬೋಟಿನವ ತಿನ್ನುತ್ತಿದ್ದ ಚಾಕಲೇಟನ್ನು ಎಲ್ಲರಿಗೂ ಹಂಚಿದ, ದಂಪತಿಯೋರ್ವರು ಬಿಸ್ಕೆಟ್‌ನ್ನು ದೋಣಿಯ ತುಂಬಾ ಹಂಚಿದರು. ಈ ಹಂಚಿ ತಿನ್ನುವ, ಎದುರಿಗಿರುವವರನ್ನು ಕೇಳುವ ಭಾರತೀಯ ಸಂಪ್ರದಾಯ ಮೈಲುಗಳಾಚೆಗಿನ ಪೆರುವಿನಲ್ಲಿ ಕಂಡು ಬಂತು.
ಸುಶ್ಮಿತಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಉಡುಗೊರೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.