16ನೇ ಶತಮಾನದ ಶಿಲಾಶಾಸನ ಪತ್ತೆ 

Team Udayavani, Nov 14, 2018, 4:31 PM IST

14-november-17.gif

ಹಾವೇರಿ: ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ 16ನೇ ಶತಮಾನಕ್ಕೆ ಸೇರಿದ ‘ವಿಜಯನಗರೋತ್ತರ’ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇತಿಹಾಸ ಸಂಶೋಧಕ ಪ್ರಮೋದ ನಲವಾಗಲ ಮತ್ತು ಡಾ| ರಮೇಶ ಎನ್‌. ತೆವರಿ ಈ ಶಾಸನ ಪತ್ತೆ ಹಚ್ಚಿದ್ದಾರೆ. ಈ ಶಾಸನವು ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ಅಪ್ರಕಟಿತ ಶಾಸನವಾಗಿದ್ದು, ಗ್ರಾಮದ ಕೋಟೆ ಭಾಗದಲ್ಲಿರುವ ಚಂದ್ರಗುತ್ತೆಮ್ಮ ದೇವಸ್ಥಾನದ ಪಕ್ಕದಲ್ಲಿ ಕಂಡುಬಂದಿದೆ.

ಶಿಲಾಶಾಸನವು ಚಂದ್ರಗುತ್ತೆಮ್ಮ ದೇವಸ್ಥಾನವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಸಾಹಿತಿ ಮಾರುತಿ ತಳವಾರ ಸಂಶೋಧಕರಿಗೆ ತಿಳಿಸಿದ್ದಾರೆ. ‘ಮೆಡಿಲೇರಿಯ ತಾಳವಾರಿಕೆ ಜೋನಿನಾಯಕಗೆ ಯರಡು ಪಾಲು ಕರಿಯ ಅಂಣನ ಮಗ ತಿರಿಕಿ ನಾಯಕನ ವಾರಿಗೆವೊಂದು ಪಾಲು’ ಎಂಬ ವಿಷಯವು ಈ ಶಾಸನದಲ್ಲಿದ್ದು, ಶಿಲಾಶಾಸನದಲ್ಲಿ ಅಕ್ಷರಗಳನ್ನು ಆರು ಸಾಲುಗಳಿಂದ ಖಂಡರಿಸಲಾಗಿದೆ.

ಶಿಲಾಶಾಸನದಲ್ಲಿರುವ ವಿಷಯವನ್ನು ವಿಶ್ಲೇಷಿಸಿದಾಗ ಈಗ ಕರೆಯಲ್ಪಡುವ ಮೆಡ್ಲೇರಿ ಗ್ರಾಮ ಈ ಹಿಂದೆ ಮೆಡಿಲೇರಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಮಾಹಿತಿ ಸ್ಪಷ್ಟವಾಗುತ್ತದೆ. ಮೆಡಿಲೇರಿ ಕಾಲಾಂತರದಲ್ಲಿ ಮೆಡ್ಲೇರಿ ಆಗಿದೆ. ಗ್ರಾಮದಲ್ಲಿ ತಳವಾರಿಕೆ ಪರಂಪರೆ ಇತ್ತು ಎಂಬುದಕ್ಕೆ ಶಾಸನದಲ್ಲಿ ಕಂಡುಬರುವ ತಾಳವಾರಿಕೆ ಪದವೇ ನಿದರ್ಶನವಾಗಿದೆ. ಜೋನಿನಾಯಕ ಕರಿಯಅಂಣ ಈತನ ಮಗ ತಿರಿಕಿನಾಯಕ, ಇವರು ತಾಳವಾರಿಕೆ ವೃತ್ತಿಯನ್ನು ಈ ಗ್ರಾಮದಲ್ಲಿ ಕೈಗೊಂಡಿದ್ದ ಉಲ್ಲೇಖವನ್ನು ತಿಳಿಸುತ್ತದೆ. ಬಹುಶಃ ಹಿಂದೆ ಈ ಪ್ರದೇಶವನ್ನು ಒಬ್ಬ ರಾಜ ಅಥವಾ ಅಧಿಕಾರಿ ಆಳುತ್ತಿದ್ದು, ತಳವಾರ ಜೋನಿನಾಯಕ, ಕರಿಯ ಅಂಣನ ಮಗ ತಿರಿಕಿ ನಾಯಕ ಇವರುಗಳಿಗೆ ಗ್ರಾಮ ಸಂರಕ್ಷಣೆಯ ಜವಾಬ್ದಾರಿ ನೀಡಿರುವ ಮಾಹಿತಿ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಜೋನಿನಾಯಕ, ತಿರಿಕಿ ನಾಯಕ ಇವರು ನಿಷ್ಠೆ, ಪ್ರಾಮಾಣಿಕತೆಯಿಂದ ಗ್ರಾಮ ಸಂರಕ್ಷಣೆ ಮಾಡುತ್ತಿದ್ದ ಪ್ರಯುಕ್ತ ರಾಜ ಅಥವಾ ಅಧಿಕಾರಿ ಇವರಿಗೆ ಭೂದಾನ ಮಾಡಿರಬಹುದಾಗಿದ್ದು, ಅದನ್ನು ಅವರು ಎರಡು ಪಾಲು, ಒಂದು ಪಾಲಿನಂತೆ ಹಂಚಿಕೊಂಡಿರಬಹುದೆಂದು ಹಾಗೂ ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದು ‘ತಾಳವಾರಿಕೆ’ ಪರಂಪರೆಯನ್ನು ತಿಳಿಸುವ ಮಹತ್ವದ ಶಾಸನವಾಗಿದೆ ಎಂದು ಸಂಶೋಧಕ ಡಾ| ದೇವರಕೊಂಡ ರೆಡ್ಡಿ ವಿಶ್ಲೇಷಿಸಿದ್ದಾರೆ. ‘ತಾಳವಾರಿಕೆ’ಗೆ ಪುಷ್ಠಿಕೊಡುವಂತೆ ಈಗಲೂ ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ‘ತಳವಾರ’ ಹೆಸರಿನ ಮನೆತನಗಳು ಮೇಲಿನ ನಾಯಕರ ವಂಶಸ್ಥರಿಗೆ ಸಂಬಂಧಪಟ್ಟವುಗಳಾಗಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ.

ಮಾಸ್ತೆಮ್ಮ (ಮಹಾಸತಿ) ಗುಡಿಯ ಪಕ್ಕದಲ್ಲಿ ತೃಟಿತ ಶಾಸನವಿದ್ದು ಹಾಗೂ ತುಂಗಭದ್ರಾ ನದಿಯ ದಂಡೆಯ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನದ ಮುಂದೆ ಶಿವಲಿಂಗ ಹಾಗೂ ನಂದಿಯ ವಿಗ್ರಹಗಳು ಬಿದ್ದಿದ್ದು ಇಂತಹ ಸ್ಥಳದಲ್ಲಿ ಪುರಾತತ್ವ ಇಲಾಖೆಯವರು ಉತ್ಖನನ ಕೈಗೊಂಡಲ್ಲಿ ಕೆಲವು ಮಹತ್ವದ ಐತಿಹಾಸಿಕ ಪುರಾವೆಗಳು ಲಭಿಸಬಹುದೆಂದು ಸ್ಥಳೀಯ ಸಾಹಿತಿ ಮಾರುತಿ ತಳವಾರ ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

1-bbb

Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ

ajjamper-Qadri

Adi Jambava Samavesha: ಅಂಬೇಡ್ಕರ್‌ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Maharashtra: ಉದ್ದವ್‌ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.