ಮನಸ್ಸಲ್ಲಿರೋದನ್ನು ತಿಳಿಸುವ ಟೆಲಿಪತಿ ವಿದ್ಯೆ
Team Udayavani, Nov 15, 2018, 6:00 AM IST
ಯಾರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವ ಹಾಗಿದ್ದಿದ್ದರೆ ಚೆನ್ನಾಗಿತ್ತಲ್ವಾ! ವಾಸ್ತವದಲ್ಲಿ ಅದು ಕಂಡು ಹಿಡಿಯುವುದು ಬಲು ಕಷ್ಟ. ಆದರೆ ಮ್ಯಾಜಿಕ್ ಮೂಲಕ ಅದನ್ನು ಕಂಡುಹಿಡಿಯಬಹುದು ಗೊತ್ತಾ? ಈ ಮ್ಯಾಜಿಕ್ ಕಲಿತರೆ ಪ್ರೇಕ್ಷಕ ಮುಚ್ಚಿಟ್ಟ ನಾಣ್ಯ ಎಲ್ಲಿದೆ ಅಂತ ನಿಖರವಾಗಿ ಹೇಳಬಹುದು.
ಪ್ರದರ್ಶನ:
ನೀರಿನ ಬಾಟಲಿಯ ಮೂರು ಕ್ಯಾಪ್ ಗಳ ಕೆಳಗೆ ಒಂದು ಕಾಯಿನ್ ಅನ್ನು ಪ್ರೇಕ್ಷಕರಿಗೆ ಬಚ್ಚಿಡಲು ಹೇಳಿ, ಜಾದೂಗಾರ ಕಣ್ಣು ಮುಚ್ಚಿಕೊಳ್ಳುತ್ತಾನೆ. ನಂತರ ಕಾಯಿನ್‌ಇಟ್ಟ ಕ್ಯಾಪಿನ ಜಾಗವನ್ನು ಅದಲು ಬದಲು ಮಾಡಲು ಹೇಳುತ್ತಾನೆ. ಅವರು ರೆಡಿ ಎಂದು ಹೇಳಿದ ಮೇಲೆ ಕಣ್ಣು ಬಿಟ್ಟ ಜಾದೂಗಾರ ಯಾವ ಕ್ಯಾಪಿನ ಅಡಿಯಲ್ಲಿ ಕಾಯಿನ್ ಇದೆಎಂದು ಥಟ್ ಅಂತ ಒಂದೇ ಬಾರಿಗೆ ತೋರಿಸಿ ಬಿಡುತ್ತಾನೆ.ಇದು ಹೇಗೆ ಸಾಧ್ಯ?
ಬೇಕಾಗುವ ಪರಿಕರಗಳು:
ಒಂದು ನಾಣ್ಯ, ಮೂರು ಕ್ಯಾಪ್‌ಗ್ಳು, ಒಂದು ಎರಡಿಂಚಿನಷ್ಟು ಉದ್ದದ ಕೂದಲು, ಅಂಟಿಸಲು ಸೆಲ್ಲೋ ಟೇಪ್ ಅಥವಾ ಫೆವಿ ಕ್ವಿಕ್
ಮಾಡುವ ವಿಧಾನ:
ಪ್ರದರ್ಶನಕ್ಕೂ ಮೊದಲೇ ನಾಣ್ಯದ ಹಿಂಬಾಗಕ್ಕೆ ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ಕೂದಲನ್ನು ಒಂದು ಸೆಲ್ಲೋ ಟೇಪ್ ಅಥವಾ ಫೆವಿಕ್ವಿಕ್ ಸಹಾಯದಿಂದ ಅಂಟಿಸಿಡಿ. ಕಾಯಿನ್ ನ ಇಟ್ಟು ಅವರು ರೆಡಿ ಅಂದ ಮೇಲೆ ಕಣ್ಣು ಬಿಟ್ಟು ಯಾವ ಕ್ಯಾಪಿನ ಅಡಿಯಿಂದ ಕೂದಲು ಈಚೆಗೆ ಕಾಣಿಸುತ್ತಿದೆ ಎಂದು ಗಮನಿಸಿ,ಆ ಕ್ಯಾಪನ್ನು ಥಟ್ ಅಂತ ತೋರಿಸಿ ಬಿಡಿ. ಕೂದಲು ಅಂಟಿಸಿರುವುದು ಗಮನಕ್ಕೆ ಬಾರದೇಯಿರುವುದರಿಂದ ಪ್ರೇಕ್ಷಕ ಚಕಿತಗೊಳ್ಳುವುದರಲ್ಲಿ ಅನುಮಾನವೇಯಿಲ್ಲ. ಚೆನ್ನಾಗಿದೆಯಲ್ಲಾ? ಸರಿ ಉದಯ್ ಜಾದೂಗಾರರ ಜಾದು ನೀವೂ ಮಾಡಿ ನಿಮ್ಮ ಸ್ನೇಹಿತರಿಂದ ಚಪ್ಪಾಳೆ ಗಿಟ್ಟಿಸಿ.
ವಿಡಿಯೋ ಲಿಂಕ್: goo.gl/Ry7Qmh
ಉದಯ್ ಜಾದೂಗಾರ್
ನಿರೂಪಣೆ- ಗಾಯತ್ರಿ ಯತಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.