ಸಾಲ ಕಟ್ಟದಿದ್ದರೆ ಜಮೀನು ಹರಾಜು
Team Udayavani, Nov 15, 2018, 6:15 AM IST
ಸಿದ್ದಾಪುರ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ರೈತ ಕಾಂತಪ್ಪ ಬಡಿಗೇರ ಅವರಿಗೆ ಗಂಗಾವತಿಯ ಕೆನರಾ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಸುವಂತೆ ಕೋರ್ಟ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಇಲ್ಲದಿದ್ದರೆ ಜಮೀನು ಹರಾಜು ಹಾಕುವುದಾಗಿ ಎಚ್ಚರಿಸಿದ್ದಾರೆ.
ರೈತ ಕಾಂತಪ್ಪ ಬಡಿಗೇರ ಈ ಹಿಂದೆ ಗಂಗಾವತಿಯ ಕೆನರಾ ಬ್ಯಾಂಕಿನಲ್ಲಿ 4 ಲಕ್ಷ ರೂ. ಬೆಳೆಸಾಲ ಪಡೆದಿದ್ದರು. ಬೆಳೆ ಬಂದಾಗಲೆಲ್ಲಾ ಅಸಲು, ಬಡ್ಡಿ, ಸೇರಿ ಒಟ್ಟು 2.15 ಲಕ್ಷ ರೂ. ಬ್ಯಾಂಕಿಗೆ ಕಟ್ಟಿದ್ದಾರೆ. ಆದರೆ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಮಳೆಯಾಗದೆ ಬೆಳೆ ಬಾರದಿದ್ದರಿಂದ ಬ್ಯಾಂಕಿಗೆ ಹಣ ಪಾವತಿಸಿಲ್ಲ. ಈಗ ಬ್ಯಾಂಕ್ನಲ್ಲಿ ಸಾಲ ಮತ್ತು ಬಡ್ಡಿ ಸೇರಿ 8 ಲಕ್ಷ ರೂ. ಬೆಳದಿದೆ. ಕಾಂತಪ್ಪ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಬ್ಯಾಂಕಿನ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಆದರೆ, ಬ್ಯಾಂಕ್ ಅಧಿಕಾರಿಗಳು ನ್ಯಾಯಾಲಯದ ಮೋರೆ ಹೋಗಿ ರೈತನಿಗೆ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿ ನೋಟಿಸ್ ಅಂಟಿಸಿದ್ದಾರೆ. ಸಾಲ ಪವಾತಿಸದಿದ್ದರೆ ಜಮೀನು ಹರಾಜು ಹಾಕುತ್ತಾರೆಂದು ಕಾಂತಪ್ಪ ಕಂಗಾಲಾಗಿದ್ದಾನೆ.
ಡೀಸಿಗೆ ಮೊರೆ ಹೋಗುವ ನಿರ್ಧಾರ: ಕೆನರಾ ಬ್ಯಾಂಕಿನಿಂದ 4 ಲಕ್ಷ ಬೆಳೆ ಸಾಲ ಪಡೆದಿದ್ದೆ. ಬೆಳೆ ಬಂದಾಗ 2.15 ಲಕ್ಷ ರೂ. ಕಟ್ಟಿದ್ದೇನೆ. ಈಗ ಬ್ಯಾಂಕಿನವರು 8 ಲಕ್ಷ ರೂ. ಕಟ್ಟಬೇಕು. ಇಲ್ಲದಿದ್ದರೆ ಜಮೀನು ಹರಾಜು ಹಾಕುವುದಾಗಿ ನೋಟಿಸ್ನಲ್ಲಿ ಕಳುಹಿದ್ದಾರೆ. ಗ್ರಾಮದಲ್ಲಿ ನೋಟಿಸ್ ಅಂಟಿಸಿದ್ದಾರೆ. ಈ ಬಗ್ಗೆ ಕುಟುಂಬ ಸಮೇತರಾಗಿ ಜಿಲ್ಲಾಧಿ ಕಾರಿಗಳನ್ನು ಭೇಟಿಯಾಗಿ ನಮ್ಮ ಸಮಸ್ಯೆ ತಿಳಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ರೈತ ಕಾಂತಪ್ಪ ಬಡಿಗೇರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.