ದರೋಡೆಗೆ ಸಂಚು: ಮೂವರು ಯುವತಿಯರ ಸೆರೆ
Team Udayavani, Nov 15, 2018, 9:24 AM IST
ಉಪ್ಪಿನಂಗಡಿ: ಒಂಟಿ ಪುರುಷರ ಮನೆಗೆ ನುಗ್ಗಿ ಅವರನ್ನು ಯಾಮಾರಿಸಿ ನಗ ನಗದನ್ನು ದೋಚುವ ಮೂವರು ಮಹಿಳೆಯರ ತಂಡದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಮಂಗಳೂರಿನ ಬಜಾಲಿನಲ್ಲಿ ದೋಚಿದ್ದ 156 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಹಡಗಲಿ ಬೌವನೂರು ಗ್ರಾಮದ ನಿವಾಸಿ ಪವನ್ ರಾಜ್‌ನ ಪತ್ನಿ ದೇವಮ್ಮ (19), ಅದೇ ಗ್ರಾಮದ ಸಿದ್ದಣ್ಣ ಗೌಡರ ಮಗಳು ನಾಗಮ್ಮ ಅಲಿಯಾಸ್ ರೂಪಾ (18) ಮತ್ತು ಪ್ರಕಾಶ್ ಅಲಿಯಾಸ್ ಇಮ್ರಾನ್‌ನ ಪತ್ನಿ ಗೀತಾ (24) ಬಂಧಿತರು.
ಇವರು ಅಲೆಮಾರಿ ಜನಾಂಗದವರಾಗಿದ್ದು, ಬೇರೆ ಬೇರೆ ಕಡೆ ಭಿಕ್ಷೆ ಎತ್ತುವುದು, ಮನೆ, ತೋಟದ ಕೆಲಸಕ್ಕೆ ಹಾಜರಾಗುವುದು, ಈ ಸಂದರ್ಭದಲ್ಲಿ ತಮ್ಮತ್ತ ಆಕರ್ಷಿತರಾಗುವ ವ್ಯಕ್ತಿಗಳ ಮನೆಗೆ ಪ್ರವೇಶಿಸಿ ಅವರನ್ನು ದೋಚುವುದು ಇವರ ಕಸುಬು.
ಉಪ್ಪಿನಂಗಡಿ ದೇಗುಲದ ಪರಿಸರದಲ್ಲಿ ಇವರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆದು ಅವರಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಚಿನ್ನದ ರೋಪ್ ಚೈನ್, 4 ಚಿನ್ನದ ಉಂಗುರಗಳು, 3 ಚಿನ್ನದ ಕಡಗಗಳು, 2 ಮೊಬೈಲ್, 3 ಬ್ಯಾಗ್ ಹಾಗೂ ಬಟ್ಟೆ ಬರೆಗಳು ಪತ್ತೆಯಾಗಿವೆ. ತನಿಖೆ ನಡೆಸಿದಾಗ, ಪತ್ತೆಯಾದ ವಸ್ತುಗಳನ್ನು ಮಂಗಳೂರಿನ ಬಜಾಲಿನ ರಿಕ್ಷಾ ಚಾಲಕರೊಬ್ಬರಿಂದ ಲೂಟಿ ಮಾಡಿದ್ದೆಂದು ಒಪ್ಪಿಕೊಂಡರು.
ಉಪ್ಪಿನಂಗಡಿಯಲ್ಲಿ ಕಲಿತವಳು
ಗುಂಪಿನಲ್ಲಿದ್ದ ಅವಿವಾಹಿತ ಯುವತಿ ತನ್ನ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿಯ ಸರಕಾರಿ ಶಾಲೆಯಲ್ಲಿ ಪೂರೈಸಿದ್ದು, ಇಲ್ಲಿನ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಒಂಟಿ ಪುರುಷರಿರುವ ಶ್ರೀಮಂತ ಮನೆಯೊಂದರ ಮೇಲೆ ನಿಗಾ ಇರಿಸಿದ್ದರೆನ್ನಲಾಗಿದೆ.
ಎಸ್.ಐ. ನಂದ ಕುಮಾರ್ ಅವರೊಂದಿಗೆ ಸಿಬಂದಿ ವರ್ಗದ ದೇವದಾಸ್, ಸಂಗಯ್ಯ ಕಾಳೆ, ಹರಿಶ್ಚಂದ್ರ, ಗಣೇಶ್, ಚೋಮ, ಪ್ರತಾಪ್, ಜಗದೀಶ್, ಶ್ರೀಧರ, ಮನೋಹರ ಪಿ. ಸಿ., ಇರ್ಷಾದ್, ಸಚಿನ್, ನಾರಾಯಣ ಗೌಡ, ಯಶೋದಾ, ರೇಣುಕಾ, ನಿವೇದಿತಾ, ಪ್ರೀತಿದೀಪಾ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.