ಪ್ರವಾಸಿಗರನ್ನುಸೆಳೆವ ಕೋಡಿಬೀಚ್‌ನಲ್ಲಿಮೂಲಸೌಕರ್ಯಅಭಿವೃದ್ಧಿಗೆ ಬೇಡಿಕೆ


Team Udayavani, Nov 15, 2018, 3:52 PM IST

15-november-13.gif

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿರುವ ಕೋಡಿ ಬೀಚ್‌ನಲ್ಲಿ ಬ್ರೇಕ್‌ವಾಟರ್‌ ಕಾಮಗಾರಿಯನ್ನು ಸೀ ವಾಕ್‌ ಮಾಡಲು ಯೋಜನೆ ರೂಪಿಸಿದಂತೆಯೇ ಇನ್ನೊಂದಷ್ಟು ಕಾಮಗಾರಿಯ ಮೂಲಕ ಪ್ರವಾಸಿಗರಿಗೆ ಹತ್ತಿರವಾಗುವಂತೆ ಮಾಡಬೇಕಿದೆ.

ವಿಸ್ತಾರದ ಬೀಚ್‌ಗೆ ಹೆಚ್ಚಿದ ಜನ
ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದೇ ಆದಲ್ಲಿ ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್‌ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್‌ ಪಾತ್ರವಾಗಲಿದೆ. ಏಕೆಂದರೆ ಸರಿಸುಮಾರು 3.5 ಕಿಮೀ. ದೂರದಲ್ಲಿ ಬೀಚ್‌ ವ್ಯಾಪಿಸಿಕೊಂಡಿದೆ. ಆದ್ದರಿಂದ ಯಾವುದೇ ಪ್ರದೇಶದಲ್ಲೂ ಸಮುದ್ರವಿಹಾರ ನಡೆಸಬಹುದಾಗಿದೆ. ಇದರೊಂದಿಗೆ ಇಲ್ಲಿ ಬ್ರೇಕ್‌ ವಾಟರ್‌ ಕಾಮಗಾರಿ ನಡೆದಂತೆಯೇ ಇಲ್ಲಿಗೆ ಸಂಜೆ ವೇಳೆಗೆ ಸೂರ್ಯಾಸ್ತ ವೀಕ್ಷಣೆಗೆ ಜನ ಬರಲಾರಂಭಿಸಿದ್ದಾರೆ. ವಾರಾಂತ್ಯವೂ ಇಲ್ಲಿ ಜನಸಂದಣಿ ಹೆಚ್ಚಿದೆ. ಸಂಸಾರ ಸಹಿತರಾಗಿ, ಮಕ್ಕಳು ಸ್ನೇಹಿತರ ಜತೆಗೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ
ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಏರುತ್ತಿರುವಂತೆಯೇ ಹೋಟೆಲ್‌, ಅಂಗಡಿ, ಮಳಿಗೆ ಮೊದಲಾದವುಗಳು ಸ್ಥಾಪನೆಯಗಾಲು ಅವಕಾಶ ಇದೆ. ಜತೆಗೆ ರಿಕ್ಷಾ ಹಾಗೂ ಇತರ ಪ್ರವಾಸಿ ವಾಹನಗಳಿಗೂ ಬಾಡಿಗೆ ದೊರೆಯಲಿದೆ.

ಪುರಸಭೆಯಿಂದ ಕ್ರಮ
ಪ್ರವಾಸೋದ್ಯಮ ಇಲಾಖೆ ಜತೆಗೆ ಪುರಸಭೆ ಮುತುವರ್ಜಿ ವಹಿಸಿದ್ದು ಇಲ್ಲೊಂದು ಪ್ರವಾಸೋದ್ಯಮ ತಾಣದ ಸೃಷ್ಟಿಗೆ ಪ್ರಯತ್ನಿಸುತ್ತಿದೆ. ಬ್ರೇಕ್‌ವಾಟರ್‌ ಕಾಮಗಾರಿಯನ್ನೇ ಸೀವಾಕ್‌ ಮಾದರಿಯಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದರೆ ಇಲಾಖೆಯಿಂದ ಇನ್ನಷ್ಟು ಸೌಕರ್ಯ, ಅನುದಾನ ಇಲ್ಲಿಗೆ ತಂದರೆ ಪುರಸಭೆ ವ್ಯಾಪ್ತಿಯ ಆದಾಯ ವೃದ್ಧಿ ಮಾಡಿಕೊಳ್ಳಲು ನೆರವಾಗಲಿದೆ ಎಂದು ಪುರಸಭೆ ಚಿಂತನೆ ನಡೆಸಿದೆ.

ಸೌಕರ್ಯ ಬೇಕಿದೆ
ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕಾದ ಅಗತ್ಯವಿದೆ. ವಿಶ್ರಾಂತಿಗೆ ಕುಳಿತುಕೊಳ್ಳುವ ಬೆಂಚ್‌ಗಳ ವ್ಯವಸ್ಥೆ, ಬಟ್ಟೆ ಬದಲಾಯಿಸಲು, ಸಮುದ್ರ ಸ್ನಾನದ ಬಳಿಕ ಸ್ನಾನದ ವ್ಯವಸ್ಥೆ ಮಾಡಲು, ವಾಹನ ನಿಲುಗಡೆಗೆ, ಬೆಳಕಿಗೆ ದೀಪ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಬೇಕಿದೆ.

ಕಸದ ರಾಶಿ
ಮಳೆಗಾಲದಲ್ಲಿ ಸಮುದ್ರದ ಮೂಲಕ ಬಂದ ಕಸದ ರಾಶಿ ಕಡಲತಡಿಯಲ್ಲಿ ರಾಶಿ ರಾಶಿ ಸಂಗ್ರಹವಾಗಿದೆ. ಇದನ್ನು ತೆಗೆಸಿದರೆ ಅತ್ಯಂತ ಸುಂದರ ಬೀಚ್‌ ಆಗಿ ಇದು ಪರಿವರ್ತನೆಯಾಗಲಿದೆ. ಇಲ್ಲಿ ರಾಶಿ ಹಾಕಿರುವ ಲೋಡುಗಟ್ಟಲೆ ಮರಳನ್ನು ಖಾಲಿ ಮಾಡುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಅದು ತ್ವರಿತವಾಗಿ ಆಗಬೇಕಿದೆ.

ಮಾತುಕತೆ ನಡೆದಿದೆ
ಬೀಚ್‌ ಸ್ವತ್ಛಗೊಳಿಸಲು ಮಲ್ಪೆಯಿಂದ ಯಂತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. ಬ್ರೇಕ್‌ ವಾಟರ್‌ ಕಾಮಗಾರಿಗೆ ಅಲ್ಲಲ್ಲಿ ಪ್ರವೇಶಾವಕಾಶ ನೀಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ ಪ್ರವಾಸಿಗರ ಆಕರ್ಷಣೆಗೆ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆ ಇದೆ.
– ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.