ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿಗೆ ರಮೇಶಾಚಾರ್ಯ
Team Udayavani, Nov 16, 2018, 6:00 AM IST
ಸಾಸ್ತಾನ ಪಂಜುರ್ಲಿ ಗರಡಿ ಪಾತ್ರಿಯಾಗಿದ್ದ ಮತ್ತು ಗೋಳಿಗರಡಿ ಮೇಳದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸಾಸ್ತಾನ ಚಂದು ಪೂಜಾರಿ ಯವರ ನೆನಪಿಗಾಗಿ ನೀಡುವ ಪ್ರಶಸ್ತಿಗೆ ಈ ಬಾರಿ ತೆಂಕು ಬಡಗುತಿಟ್ಟುಗಳ ಸ್ತ್ರೀವೇಷದಾರಿ, ಪ್ರಸಂಗಕರ್ತ,ಅರ್ಥದಾರಿ, ಚೌಕಿಯ ಗುರು ಎಂ.ಕೆ. ರಮೇಶಾಚಾರ್ಯ ಆಯ್ಕೆಯಾಗಿದ್ದಾರೆ. ನ.20 ರಂದು ಗೋಳಿಗರಡಿ ಮೇಳದ ಪ್ರಥಮ ಸೇವೆ ಆಟದಂದು ಪ್ರಶಸ್ತಿ ಪ್ರದಾನಿಸಲಾಗುವುದು.
ತೀರ್ಹಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಗ್ರಾಮದವರಾದ ಆಚಾರ್ಯರು ತಂದೆ ಸ್ಥಾಪಿಸಿದ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯಲ್ಲಿ ವೇಷ ಮಾಡ ತೊಡಗಿದರು. ಬಚ್ಚನಕೊಡಗೆ ನರಸಿಂಹ ಆಚಾರ್ಯರಿಂದ ತಾಳ ಲಯದ ಅಭ್ಯಾಸಮಾಡಿ ಪೂರ್ಣ ಪ್ರಮಾಣದ ಕಲಾವಿದರಾಗಿ ರೂಪುಗೊಂಡರು.ಬಳಿಕ ಬಡಗುತಿಟ್ಟಿನ ಗುರು ವೀರಭದ್ರ ನಾಯ್ಕರಿಂದ ಹೆಚ್ಚಿನ ಅಭ್ಯಾಸ ಪಡೆದು ಮಂದಾರ್ತಿ ಮೇಳಕ್ಕೆ ಪೂರ್ಣಾವಧಿಯ ಕಲಾವಿದರಾಗಿ ಸೇರ್ಪಡೆಗೊಂಡರು. ಕುರಿಯ ವಿಠಲ ಶಾಸ್ತ್ರಿಗಳ ಪ್ರೇರಣೆಯಂತೆ ಧರ್ಮಸ್ಥಳ ಮೇಳ ಸೇರಿದ ಅವರು ತೆಂಕುತಿಟ್ಟಿನ ಮೇರು ಕಲಾವಿದರಾಗಿ ಮೂಡಿ ಬಂದರು. 20 ವರ್ಷ ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿದ್ದಾರೆ. ಶೇಣಿ, ಸಾಮಗರೊಂದಿಗೆ ಕುಳಿತು ಅರ್ಥ ಹೇಳುವಷ್ಟು ತಾಳಮದ್ದಳೆಯ ಅರ್ಥದಾರಿಯಾಗಿ ರೂಪುಗೊಂಡರು. ಶನೀಶ್ವರ ಮಹಾತ್ಮೆ,ಬಪ್ಪನಾಡು ಕ್ಷೇತ್ರ ಮಹಾತ್ಮೆ,ಪಾಪಣ್ಣ ವಿಜಯ-ಗುಣಸುಂದರಿ, ನಳ ದಮಯಂತಿ ಮುಂತಾದ ಪ್ರಸಂಗಗಳಲ್ಲಿ ಇವರ ದಮಯಂತಿ, ಸೀತೆ, ಚಂದ್ರಮತಿ, ದಾಕ್ಷಾಯಣಿ ಮುಂತಾದ ಪಾತ್ರಗಳು ಮೆಚ್ಚುಗೆ ಗಳಿಸಿದ್ದವು. ಶೃಂಗ ಸಾರಂಗ, ಸಿಂಧು ಭೈರವಿ, ಸಮರಸಿಂಹ ಶಿವರಂಜಿನಿ , ನಾಗಮಚ್ಚೆ ಮುಂತಾದ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.ಪ್ರಸ್ತುತ ತೆಂಕಿನ ಹನುಮಗಿರಿ ಮೇಳದ ಪ್ರಧಾನ ಕಲಾವಿದರಾಗಿ ತಿರುಗಾಟ ನಡೆಸುತಿದ್ದಾರೆ.
ತಾಳಮದ್ದಳೆಯಲ್ಲಿಯೂ ಅವರಿಗೆ ಸ್ತ್ರೀ ಪಾತ್ರ ಅರ್ಥಗಾರಿಕೆ ಹುಡುಕಿ ಕೊಂಡು ಬರುತಿತ್ತು. ಶ್ರೇಣಿಯವರ ವಾಲಿಗೆ-ತಾರೆ,ಭೀಮನಿಗೆ-ದ್ರೌಪದಿ, ರಾವಣನಿಗೆ-ಮಂಡೋದರಿ ಹೀಗೆ ಶೇಣಿಯವರೇ ತನ್ನನ್ನು ತಿದ್ದಿ ತೀಡಿದವರು ಎಂದು ಸೌಜನ್ಯದಿಂದ ಹೇಳುತ್ತಾರೆ.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.