ಜನಮನ ರಂಜಿಸಿದ ನೃತ್ಯ ಗಾನ ಸಂಭ್ರಮ
Team Udayavani, Nov 16, 2018, 6:00 AM IST
ಸಂಗೀತ, ನೃತ್ಯಗಳ ಪ್ರದರ್ಶನ ಶಿಕ್ಷಣದ ಅವಿಭಾಜ್ಯ ಅಂಗ ವಾಗಿದ್ದು ಕಲೆಗಳ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಾಶೀಲರನ್ನಾಗಿಸುತ್ತದೆ .ಅಂತಹ ಕಾರ್ಯಕ್ರಮ ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಇತ್ತೀಚೆಗೆ ಮೂಡಿಬಂತು. ಇನಿದನಿ ಕಲಾ ಬಳಗ ವಿಟ್ಲ 10 ಜನ ನೃತ್ಯ ಕಲಾವಿದರು, ಇಷ್ಟೇ ಜನ ಹಾಡುಗಾರರು ಪ್ರಸ್ತುತಪಡಿಸಿದ ಸಮೂಹ ನೃತ್ಯ ಸುಂದರವಾಗಿ ಮೂಡಿಬಂತು. ವಿಘ್ನ ವಿನಾಶಕ ಗಣೇಶ ಸ್ತುತಿಯೊಂದಿಗೆ ಪ್ರಾರಂಭಗೊಂಡು ಹೂವಲ್ಲಿ ಜೇನು ಗಟ್ಟದೇನು, ನಾಟ್ಯಂ ಟೆಲಿ ಫಿಲ್ಮ…ನಿಂದ ಆಯ್ದ ಈ ಕುಚುಪುಡಿ ನೃತ್ಯ ಮೆಚ್ಚುಗೆ ಪಡೆಯಿತು. ಶೇಪ್ ಆಫ್ ಯು ಇಂಗ್ಲಿಷ್ ಪದ್ಯಕ್ಕೆ ನರ್ತಿಸಿ, ತುಜೆ ಯಾದ್ ಕರ್‌ಲಿಯಾ ಹೈ ಹಿಂದಿ ಹಾಡಿಗೂ ನರ್ತಿಸಿದರು, ಗೂರ್ಮ ಗೂರ್ಮಗಿ ರಾಜಸ್ಥಾನಿ ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು, ದಿತಿರೆ ದಿತಿರೆ ತೈ ಸಿನಿಮಾ ಹಾಡಿಗೂ ಕುಣಿದರು. ದುರ್ಗಾ ತರಂಗ್ ದೇವಿಯ ವರ್ಣಿಕೆಯ ಕೂಚುಪುಡಿ ನೃತ್ಯದಲ್ಲಿ ಕು| ಸಿಂಚನಾ ಲಕ್ಷ್ಮೀ ಕೋಡಂದೂರು ಮತ್ತು ಪ್ರಜ್ಞಾ ಮಾದೆಕಟ್ಟೆ ಮಿಂಚಿದರು. ಈ ಹಸಿರು ಸಿರಿಯಲಿ, ಕಣ್ಣಂಚಿನ ಈ ಮಾತಲಿ, ಭಾವದಲೆಯಲಿ, ಎಲ್ಲೆಲ್ಲೂ ಸಂಗೀತವೇ, ರೆಕ್ಕೆ ಇದ್ದರೆ ಸಾಕೆ, ಶಿಲೆಗಳು ಸಂಗೀತವೇ, ಯಾಕೆ ಬಡಿದಾಡುತ್ತಿ, ಕಣ ಕಣವೆ ಶಾರದೆ ಹಾಡುಗಳನ್ನು ಹಾಡಿ ರಂಜಿಸಿದರು.
ವೈಷ್ಣವಿ ಕಾಶಿಮs…, ಮೇಧಾ ನಾಯಕ್, ಪ್ರಣಮ್ಯಾ ಮಾದೆಕಟ್ಟೆ, ವಸುಂಧರಾ ವಿಟ್ಲ, ಧನ್ಯಾ ಶ್ರೀ ಚಣಿಲ, ಅನುಶ್ರೀ ಕನ್ಯಾನ, ಮಹಿಮಾ ಕುಳಮರ್ವ, ಸಿಂಚನಾ ವಿಟ್ಲ, ರಚನಾ ವಿಟ್ಲ ನೃತ್ಯ ವೈವಿಧ್ಯ ನೀಡಿದರು. ಲಹರಿ ವಿಟ್ಲ, ಸುಧಾ ವಿಟ್ಲ, ದೀಪ್ತಿ ವಿಟ್ಲ, ಅನುಶಾ ದಂಬೆ, ಪ್ರತೀಕ್ಷಾ, ಅಭಿಲಾಶ್ ವಿಟ್ಲ, ಮನಸ್ವಿ ಕುಳಮರ್ವ, ರಮ್ಯಾ ಕೆ., ಭವ್ಯ ಜ್ಯೋತಿ, ಅಶ್ವಿನಿ, ಸುಶ್ಮಿತಾ ನಾಯಕ್, ಶ್ರೀನಂದನ್ ಪುತ್ತೂರು, ಜಯಲಕ್ಷ್ಮೀ ಜಿ.ಎಂ. ವಿಟ್ಲ ಇವರ ನಿರ್ದೇಶನದಲ್ಲಿ ಮೂಡಿಬಂತು. ಮೋಹನ ಕಲ್ಯಾಣಿ ,ತಿಲ್ಲಾನ ನೃತ್ಯ, ಭವತು ಭಾರತಂ ನೃತ್ಯ ಭಾರತ ದೇಶದ ಭಕ್ತಿ ಗೀತೆಗೆ ನೃತ್ಯ ವೈವಿಧ್ಯ ಎಲ್ಲರ ಮನಸೂರೆಗೊಂಡಿತು.
ಕುಮಾರ್ ಪೆರ್ನಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.