ಖಚಿತತೆಯನ್ನು ಕಾಣಿಸಿದ ನೃತ್ಯಾರ್ಪಣ


Team Udayavani, Nov 16, 2018, 6:00 AM IST

14.jpg

ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಸಹೋದರಿಯರಲ್ಲಿ ಕಿರಿಯವರಾದ ವಿ| ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರಸ್ತುತಿ “ನೃತ್ಯಾರ್ಪಣ’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದರ್ಶನ ಕಂಡಿತು. ನಿಖರ ತಾಳಜ್ಞಾನ, ಖಚಿತ ನೃತ್ತ ಮತ್ತು ಭಾವಾಭಿನಯಕ್ಕಾಗಿ ಹೆಸರಾಗಿರುವ ಅಯನಾ ಒಂದೂವರೆ ಗಂಟೆ ನೀಡಿದ ಚೈತನ್ಯಪೂರ್ಣ ಪ್ರದರ್ಶನದಲ್ಲಿ ನೃತ್ಯ ಕ್ಷೇತ್ರದ ಬಗೆಗಿನ ಬದ್ಧತೆಯನ್ನು ತೋರ್ಪಡಿಸುವಲ್ಲಿ ಯಶಸ್ವಿಯಾದರು. 

ಆರಂಭದಲ್ಲಿ ಅಲರಿಪುವನ್ನು ಬೆರೆಸಿದ “ಶ್ರೀವಿಘ್ನರಾಜಮ್‌ ಭಜೆ…’ ಎಂಬ ಗಂಭೀರನಾಟ್ಟ ರಾಗದ ಖಂಡಛಾಪು ತಾಳದಲ್ಲಿರುವ ಗಣಪತಿ ಸ್ತುತಿಯೊಂದಿಗೆ ನೃತ್ಯವನ್ನು ಆರಂಭಿಸಿ ತುಂಬ ಭಿನ್ನವಾಗಿ ಅಭಿನಯಿಸಿದರು. ಅರೆಮಂಡಿ ಅಡವಿನಲ್ಲಿ ವಿಶೇಷವಾಗಿ ಗಮನ ಸೆಳೆಯುವ ಈ ಕಲಾವಿದೆ ಗಣಪತಿಯ ವಿವಿಧ ಭಾವಭಂಗಿಗಳನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು. ವಿ| ಶಾರದಾ ಮಣಿಯವರು ಇದಕ್ಕೆ ಕೊರಿಯೊಗ್ರಫಿ ಮಾಡಿದ್ದಾರೆ.  

ಅನಂತರ ಅಯನಾ ಅಭಿನಯಿಸಿದ ಪದವರ್ಣವು ವಿಶೇಷವಾದುದಾಗಿತ್ತು. ಭೈರವಿ ರಾಗದಲ್ಲಿರುವ “ನಂದಗೋಪಾಲನೇ…’ ಎಂಬ ಸಾಹಿತ್ಯವಿರುವ ಈ ವರ್ಣವು ಭೈರವಿ ರಾಗದಲ್ಲಿದ್ದು, ಆದಿತಾಳದಲ್ಲಿ ನಿಬದ್ಧವಾಗಿದೆ. ದೀರ್ಘ‌ವಾಗಿರುವ, ಯೋಗದ ವಿವಿಧ ಭಾವಭಂಗಿಗಳಿಂದ ಸಂಯೋಜಿತವಾದ ನೃತ್ಯವನ್ನು ಚೇತೋಹಾರಿಯಾಗಿ ,ಚೈತನ್ಯಪೂರ್ಣವಾಗಿ ಅಭಿನಯಿಸಿ ದರು. 
ಅನಂತರ ಮುತ್ತುಸ್ವಾಮಿ ದೀಕ್ಷಿತರ ರಚನೆಯಾದ ಕೇದಾರ ರಾಗದ ಮಿಶ್ರಛಾಪು ತಾಳದ “ಆನಂದನಟನ ಪ್ರಕಾಶಮ…’ ಎಂಬ ಸಾಹಿತ್ಯವನ್ನು ಅಭಿನಯಿಸಿದರು. ನೃತ್ತ ಮತ್ತು ನೃತ್ಯ ಎರಡರಲ್ಲೂ ಗಮನ ಸೆಳೆಯುವ ಅಯನಾ ಭರವಸೆಯ ಕಲಾವಿದೆ ಎಂಬುದನ್ನು ಈ ಅಭಿನಯವು ತೋರಿಸಿಕೊಟ್ಟಿತು.ಅನಂತರ “ನಯತವ ಬಾಲಮಿಮಂ’ ಎಂಬ ಗಣಪಯ್ಯ ಹೊಳ್ಳ ಅವರ ರಚನೆಯನ್ನು ಕೈಗೆತ್ತಿಕೊಂಡರು. ಇದು ಹಂಸವಿನೋದಿನಿ ರಾಗದಲ್ಲಿದ್ದು ಆದಿ ತಾಳಕ್ಕೆ ನಿಬದ್ಧವಾದ ರಚನೆಯಾಗಿದೆ. ಕೃಷ್ಣನ ಬಾಲಲೀಲೆಗಳನ್ನು ಗೋಪಿಕೆ ಅಭಿನಯಿಸಿ, ರಮಿಸಿ ಸುಖಪಡುವ ಭಾಗವನ್ನು ಸುಂದರವಾಗಿ ನಿರೂಪಿಸಲಾಗಿದೆ. ಅತಿಸೂಕ್ಷ್ಮ ಭಾವಗಳನ್ನು, ವಿವರಗಳನ್ನು ನೈಜವಾಗಿ ಬಿಂಬಿಸಿರುವುದು ಈ ಅಭಿನಯದಲ್ಲಿನ ವೈಶಿಷ್ಟ್ಯವಾಗಿ ಕಂಡಿತು. 

ಮಧುವಂತಿ ರಾಗದ ಆದಿತಾಳದಲ್ಲಿರುವ ತಿಲ್ಲಾನವು ಉಲ್ಲೇಖಕ್ಕೆ ಅರ್ಹವಾದದ್ದು. ಲಾಲ್‌ಗ‌ುಡಿ ಜಯರಾಮನ್‌ ರಚನೆಗೆ ನೃತ್ಯಪಟು ರಮಾ ವೈದ್ಯನಾಥನ್‌ ಕೊರಿಯೊಗ್ರಫಿ ಮಾಡಿದ್ದಾರೆ. ನೃತ್ತದ ಹಲವು ಭಾವಭಂಗಿಗಳಿಗೆ ಈಗಾಗಲೇ ಹೆಸರಾಗಿರುವ ಅಯನಾ ತಿಲ್ಲಾನವನ್ನು ಮನೋಜ್ಞವಾಗಿ ಅಭಿನಯಿಸಿದರು. ನಟುವಾಂಗದಲ್ಲಿ ವಿ| ಶಾರದಾಮಣಿ ಶೇಖರ್‌ ಸಹಕರಿಸಿದರು. ಕುಮಾರಿ ರಜನಿ ಚಿಪ್ಳೂಣ್‌ಕರ್‌ ನೃತ್ಯದ ಹಾಡುಗಾರಿಕೆಗೆ ಹೊಸಬರಾದರೂ ಒಳ್ಳೆಯ ಕಂಠ ಇರುವುದರಿಂದ ಯಾವುದೇ ತೊಡಕುಗಳಿಲ್ಲದೆ ಉತ್ತಮ ನಿರ್ವಹಣೆ ನೀಡಿದರು. ವಿ| ರಾಜನ್‌ ಪಯ್ಯನ್ನೂರ್‌ ಅವರ ಮೃದಂಗ ಸಹಕಾರ ಉತ್ತಮವಾಗಿತ್ತು. ಕೊಳಲಿನಲ್ಲಿ ಅಭಿಷೇಕ್‌ ಸಹಕಾರ ನೀಡಿದರು.

 ನಾರಾಯಣ ರೈ ಕುಕ್ಕುವಳ್ಳಿ 

ಟಾಪ್ ನ್ಯೂಸ್

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.