ಮೊದಲ ಸಂಬಳದ ಸಂಭ್ರಮ


Team Udayavani, Nov 16, 2018, 6:00 AM IST

19.jpg

ಇತ್ತೀಚೆಗಿನ ಪ್ರಯಾಣದ ಹೊತ್ತಿನಲ್ಲಿ ಆಪ್ತ ಗೆಳತಿಯೊಬ್ಬಳು ಸಿಕ್ಕಿಬಿಟ್ಟಳು. ಮುಖದಲ್ಲಿ ಹೊಸ ಚೈತನ್ಯದ ಹುರುಪು ಹೊತ್ತುಕೊಂಡು ಬಂದ ಆಕೆ ಪಕ್ಕದಲ್ಲೇ ಕೂತುಬಿಟ್ಟಳು. ನಾವು ಜೊತೆಗೆ ಕಳೆದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತ ಮಾತಿಗಿಳಿದೆವು. ಮಾತನಾಡುತ್ತ ಅವಳು ಹಂಚಿಕೊಂಡ ಮೊದಲ ಸಂಬಳದ ಸಂಭ್ರಮ ನನ್ನನ್ನು ಈ ಲೇಖನಕ್ಕೆ ಲೇಖನಿ ಹಿಡಿಯುವಂತೆ ಮಾಡಿತು. ಮಹಿಳೆಯರ ಕಲ್ಪನಾಲೋಕದೊಳಗೆ ನಾಳಿನ ಸುಂದರ ಬದುಕಿನ ಕನಸುಗಳು ವಿಹರಿಸುತ್ತಿರುತ್ತದೆ. ಇಂತಹ ಭವಿಷ್ಯದ ಕನಸೇ ಇಂದಿನ ನಮ್ಮ ಕೆಲಸಗಳಿಗೆ ಸ್ಫೂರ್ತಿಯಾಗುತ್ತದೆ. ಹೌದು, ನನ್ನ ಗೆಳತಿ ಈ ರೀತಿ ಸ್ವಾಭಿಮಾನಿಯಾಗುವ ಕನಸು ಕಂಡವಳು. “ಮದುವೆಯಾಗಿ ಹೋಗುವ ಹುಡುಗಿಗೇಕೆ ವಿದ್ಯಾಭ್ಯಾಸ’ ಎಂದು ಲೇವಡಿ ಮಾಡುತ್ತಿದ್ದ ಹಳ್ಳಿ ಜನರ ಎದುರಲ್ಲೇ ವಿದ್ಯಾಭ್ಯಾಸ ಪಡೆದವಳು. ಹೀಗೆ ಮಾತನಾಡುತ್ತ, ವೃತ್ತಿ ಜೀವನಕ್ಕೆ ಕಾಲಿಟ್ಟು ಅವಳು ಪಡೆದ ಮೊದಲ ಸಂಬಳದ ಹಂಚಿಕೆಯ ಲೆಕ್ಕಾಚಾರ ನನಗೆ ಮತ್ತಷ್ಟು ಖುಷಿ ನೀಡಿತು. ಅಲ್ಪ ಸಂಬಳವನ್ನು ಆಪ್ತರಿಗೆಲ್ಲ ಹಂಚಿ ಅವರ ಸಂತಸದಲ್ಲಿ ತನ್ನ ಖುಷಿಯನ್ನು ಕಂಡವಳು. ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿದ ಅಪ್ಪ-ಅಮ್ಮನಿಗೆ ಒಂದಿಷ್ಟು ಪಾಲು, ಮೊಮ್ಮಗಳ ಏಳಿಗೆಯನ್ನೇ ಬಯಸುವ ಅಜ್ಜಿಯ ಆರೋಗ್ಯಕ್ಕೆ ಒಂದಿಷ್ಟು ಪಾಲು, ಜೀವನದುದ್ದಕ್ಕೂ ಉತ್ತಮ ಒಡನಾಡಿಗಳಾಗಿರುವ ಒಡಹುಟ್ಟಿದವರಿಗೆ ಒಂದಿಷ್ಟು ಪಾಲು, ಹತ್ತಿರವೇ ಒಬ್ಬಂಟಿಯಾಗಿ ವಾಸಿಸುವ ಬಡ ಅಜ್ಜಿಗೆ ಒಂದಿಷ್ಟು ಪಾಲು ಕೊಟ್ಟೆ ಎಂದಳು. ಇದನ್ನೆಲ್ಲ ಕೇಳುತ್ತ ಆಪ್ತ ಗೆಳತಿ ಮತ್ತಷ್ಟು ಆಪ್ತವಾಗಿಬಿಟ್ಟಳು. ಬಡತನದಲ್ಲಿ ಬೆಳೆದು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕೆ ಸೇರಿದ ನನ್ನ ಗೆಳತಿಯ ಸಂಬಳದ ಸಂಭ್ರಮದಲ್ಲಿ ನನಗೂ ಟಿಕೇಟಿನ ಪಾಲು ಸಿಕ್ಕಿತು. ಸ್ವಾಭಿಮಾನಿ ಗೆಳತಿಯ ಸಂಬಳದ ಸಂಭ್ರಮವನ್ನು ಸವಿಯುತ್ತಿದ್ದಂತೆ ಬದಲಾಗುತ್ತಿರುವ ಸಮಾಜದ ಚಿತ್ರಣ ಕಣ್ಮುಂದೆ ಬಂತು. 

ಹಿಂದೆ ಹೆಣ್ಣಿಗೊಂದು ಒಳ್ಳೆಯ ಮನೆತನದ ಹುಡುಗ ಸಿಕ್ಕಿದರೆ ಸಾಕು ಎಂಬ ಆಶಯ ಮನೆಯವರಲ್ಲಿತ್ತು. ಉತ್ತಮವಾಗಿ ಸಂಸಾರ ನಿಭಾಯಿಸಿಕೊಂಡು ಹೋದರೆ ಸಾಕು ಎಂಬ ಆಕಾಂಕ್ಷೆ ಅಷ್ಟೇ ಇತ್ತು. ಆದರೆ, ಇಂದು ಸ್ವಾಭಿಮಾನಿ ಹೆಣ್ಣುಮಗಳಿಗೆ ಸ್ವಾತಂತ್ರ್ಯವೇ ಶಕ್ತಿ. ಇದನ್ನು ಪಡೆಯಲು ವೃತ್ತಿಯ ಕನಸು ಕಾಣುತ್ತಾರೆ. ಯಾಕೆಂದರೆ, ಸ್ವಾಭಿಮಾನದ ಬದುಕು ಕೊಡುವ ಸಂಭ್ರಮ ತುಂಬಾ ಹಿತವಾಗಿರುತ್ತದೆ. ಇದಕ್ಕೆ ಹೆಚ್ಚುತ್ತಿರುವ ದುಡಿಯುವ ಮಹಿಳೆಯರ ಸಂಖ್ಯೆಯೇ ನಿದರ್ಶನ. ಮನೆಕೆಲಸಕ್ಕಷ್ಟೇ ಸೀಮಿತವಾಗಿರುವ ಮಹಿಳೆಯರು ಮತ್ತು ಕುಟುಂಬಕ್ಕಾಗಿ ಹೊರಗಡೆ ದುಡಿಯುವ ಪುರುಷರು ಎಂಬ ಭಿನ್ನತೆಯ ಅಡ್ಡಗೆರೆ ಅಳಿಸುತ್ತಿರುವ ಇಪ್ಪತ್ತೂಂದನೆ ಶತಮಾನ ಇದು. ಸಂಸಾರ ಮತ್ತು ಸಂಬಳದ ದುಡಿಮೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ನಿಜವಾಗಿಯೂ ಸಾಧಕಿಯರೆನಿಸಿಕೊಂಡಿರುವ ನಮ್ಮ ಹೆಂಗಳೆಯರ ಕಾಲ ಇದು. ಸ್ವಾವಲಂಬನೆಯ ಸಿಹಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸವಿಯುತ್ತಿರುವ ಮಹಿಳೆಯರಿರುವ ಜಮಾನವಿದು. ಇಲ್ಲಿ ಹಣ ಸಂಪಾದನೆಯೇ ಮಹಿಳೆಯ ಮುಖ್ಯ ಗುರಿಯಲ್ಲ. ಸಂಪಾದನೆಯ ಮುಖಾಂತರ ಸ್ವತಂತ್ರ್ಯಳಾಗಿ ಬದುಕುವುದು, ಸ್ವಾಭಿಮಾನಿಯಾಗುವುದು ಅವಳಿಚ್ಛೆಯಾಗಿರುತ್ತದೆ. ಅದು ಮಾನಸಿಕ ಸ್ಥೈರ್ಯವನ್ನು ನೀಡುತ್ತದೆ. ಅಪ್ಪನೆದುರು ಅಥವಾ ಗಂಡನೆದುರು ಹಣಕ್ಕಾಗಿ ಕೈ ಚಾಚುವುದನ್ನು ಬಿಟ್ಟು ತನ್ನ ಖರ್ಚನ್ನು ತಾನೇ ಹೊಂದಿಸಿಕೊಂಡು ಹೋದಾಗ, ಪೋಷಕರು ಹೊತ್ತುಕೊಂಡ ಮದುವೆ ಖರ್ಚನ್ನು ತನ್ನ ಮೇಲೆ ಹೊರಿಸಿಕೊಂಡಾಗ, ಸಮಾಜಭಾಂದವರ ಕಷ್ಟಕ್ಕೆ ಸ್ಪಂದನೆಯಾದಾಗ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಲ್ಪ ಸಹಾಯವಾದಾಗ, ಅನಾಥಶ್ರಮ, ವೃದ್ಧಾಶ್ರಮಕ್ಕೆ ತನ್ನಿಂದಾದ ಸಹಾಯ ಮಾಡಿದಾಗ ಎಲ್ಲಕ್ಕಿಂತ ಹೆಚ್ಚಾಗಿ ಸ್ವಾಭಿಮಾನ, ಸ್ವಾತಂತ್ರ್ಯದ ಆತ್ಮವಿಶ್ವಾಸವನ್ನು ಹೊಂದಿದಾಗ ಸಿಗುವ ಸಂಭ್ರಮ ಅನುಭವಿಸುವ ಮಹಿಳೆಯರಿಗಷ್ಟೇ ಗೊತ್ತು. ವಿದ್ಯೆ, ಉದ್ಯೋಗ, ಸಂಬಳ, ಸ್ವಾತಂತ್ರ್ಯ ಹಾಗೂ ಮಾನಸಿಕ ಸದೃಢತೆ ಇದು ಮಹಿಳೆಯರ ಭವ್ಯ ಭವಿಷ್ಯಕ್ಕೆ ಹಾದಿ ತೋರುತ್ತದೆ.

ರಶ್ಮಿತಾ ವಾಮದಪದವು
ಜ್ಞಾನಸುಧಾ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.