ಬಿ.ಸಿ. ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿ ಸ್ಥಗಿತದಿಂದ ತೊಂದರೆ
Team Udayavani, Nov 16, 2018, 11:38 AM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ. ರೋಡ್ ಅಡ್ಡಹೊಳೆ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಅಪಾಯ ಎದುರಾಗಿದೆ. ಚತುಷ್ಪಥ ರಸ್ತೆಯಾಗಿ ವಿಸ್ತರ ಣೆಯಲ್ಲಿ ಗುತ್ತಿಗೆದಾರ ಕಂಪನಿ ಹಾಗೂ ಇಲಾಖೆಯ ನಡುವೆ ಭಿನ್ನಭಿಪ್ರಾಯ ಇರುವ ಕಾರಣ ಈ ಸ್ಥಿತಿ ಒದಗಿ ಬಂದಿದೆ. ಹೆದ್ದಾರಿ ವಿಸ್ತರಣೆಗೆ ಮುನ್ನ ಹಲ ವಾರು ಅಪಘಾತಗಳು ನಡೆದಿತ್ತು. ಇದನ್ನು ಮನಗಂಡ ಸ್ಥಳೀಯ ಪಂಚಾಯತ್ ಹೆದ್ದಾರಿ ಇಲಾಖೆಗೆ ಮನವಿ ಮಾಡಿ ವಾಸ್ತವಾಂಶವನ್ನು ತಿಳಿಸಿತ್ತು. ತತ್ ಕ್ಷಣವೇ ಎಚ್ಚೆತ್ತ ಹೆದ್ದಾರಿ ಇಲಾಖೆ ವಾಹನ ಚಾಲಕರಿಗೆ ಸಹ ಕಾರಿಯಾಗುವಂತೆ ಡಿವೈ ಡರ್ ಅನ್ನು ರಚಿಸಿತ್ತು.
ಹೆದ್ದಾರಿಯ ಚತುಷ್ಪಥ ಕಾಮಗಾರಿ ಹಮ್ಮಿಕೊಂಡಿದ್ದ ಗುತ್ತಿಗೆದಾರರು ಈ ಡಿವೈಡರ್‌ನ್ನು ಅನ್ನು ಕಿತ್ತ ಬೆನ್ನಲ್ಲೇ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಉಪ್ಪಿನಂಗಡಿ ಪ್ರವೇಶ ದ್ವಾರದಲ್ಲಿ ಯಾವ ವಾಹನ ಎತ್ತ ಚಲಿಸುತ್ತದೆ ಎನ್ನುವುದು ಗೊತ್ತಾಗುತ್ತಿಲ್ಲ. ಮಾಣಿ ಪೆರ್ನೆ ಕರುವೇಲು ಬಜತ್ತೂರು ನೆಲ್ಯಾಡಿ ಅಡ್ಡಹೊಳೆ ಹೆದ್ದಾರಿಯ ಅಗೆದು ಹಾಕಿದ್ದು, ಘನ ವಾಹನಗಳಾದ ಲಾರಿ, ಟ್ರೈಲರ್ ಸಂಚಾರ ಆರಂಭವಾಗಿದ್ದು, ಇತರ ಲಘು ವಾಹನಗಳ ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
ಸ್ಥಗಿತಕ್ಕೆ ಸ್ಪಷ್ಟನೆ ನೀಡಿಲ್ಲ
ಹೆದ್ದಾರಿ ವಿಸ್ತರಣೆ ಕಾಮಗಾರಿ ಅಭಿವೃದ್ಧಿಯಾಗಬೇಕಿದೆ. ಗುತ್ತಿಗೆದಾರರು ಕಾಮಗಾರಿ ಸ್ಥಗಿತಗೊಳಿಸಿದ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಿಲ್ಲ. ಘನ ವಾಹನಗಳ ಸಂಚಾರಕ್ಕೆ ಅವಕಾಶಗಳ ನೀಡಲಾಗಿದ್ದು, ಇತರ ವಾಹನ ಹಾಗೂ ಹೆದ್ದಾರಿ ಪಕ್ಕದಲ್ಲಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳ ಪಾಡೇನು ಎಂದು ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
-ಸುರೇಶ ಅತ್ರಮಜಲು,
ಗ್ರಾ.ಪಂ. ಸದಸ್ಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.