ಅವ್ಯವಸ್ಥೆ ಆಗರವಾದ ವಸತಿ ನಿಲಯ
Team Udayavani, Nov 16, 2018, 3:37 PM IST
ಬಸವಕಲ್ಯಾಣ: ಕಿಟ್ಟಾ ಗ್ರಾಮದ ಹೊರವಲಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ಪೂರ್ವ ಬಾಲಕರ ಡಿ.ದೇವರಾಜ್ ಅರಸು ವಸತಿ ನಿಲಯ ಹೊರಗಿನ ಆವರಣ ಹಸಿರು ತೋರಣಗಳಿಂದ ಕಂಗೊಳಿಸುತ್ತಿದ್ದರೆ, ಒಳಗಡೆ ಮಾತ್ರ ಅಸ್ವತ್ಛತೆ ಹಾಗೂ ಹಲವು ಸಮಸ್ಯೆಗಳ ಮೂಲವಾಗಿದೆ. ಈ ವಸತಿ ನಿಲಯದಲ್ಲಿ ಸುಮಾರು 50 ಜನ ಪ್ರವೇಶ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗಿದೆ.
ಆದರೆ ಅಧಿ ಕಾರಿಗಳ ನಿರ್ಲಕ್ಷ್ಯವೋ ಅಥವಾ ಸಿಬ್ಬಂದಿಗಳು ನಿರ್ಲಕ್ಷ್ಯವೋ, ವಿದ್ಯಾರ್ಥಿಗಳು ಮಾತ್ರ ಸೌಕರ್ಯಗಳಿಂದ ಚಿತರಾಗಿದ್ದಾರೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಅಸ್ವತ್ಛತೆಯಿಂದ ಎನ್1ಎಚ್1 ಸೋಂಕು ತಗುಲಿ ಈಚೆಗೆ ಗ್ರಾಮದಲ್ಲಿ ವ್ಯಕ್ತಿ ಮೃತ್ತಪಟ್ಟಿರುವ ಘಟನೆ ನಡೆದಿದೆ. ಆದರೂ ಸಂಬಂಧಪಟ್ಟವರು ಸರ್ಕಾರದಿಂದ ಮಂಜೂರಾದ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಆರೋಗ್ಯಯುತ ವಾತವರಣ ನಿರ್ಮಾಣ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ವಸತಿ ನಿಲಯದ ಆವರಣವನ್ನು ಮಾತ್ರ ಹಸಿರು ಕಾಣುವಂತೆ ಮಾಡಲಾಗಿದೆ ವಿನಃ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬೇಕಾಗುವ
ಸೌಕರ್ಯಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಅಡುಗೆ ಕೋಣೆ ಅನೈರ್ಮಲ್ಯದ ತಾಣವಾಗಿದೆ. ನೀರಿನ ಟ್ಯಾಂಕ್ ಮೇಲೆ
ಯಾವುದೇ ಮುಚ್ಚಳ ಅಳವಡಿಸಲಿಲ್ಲ. ಹೀಗಾಗಿ ನೀರಿನಲ್ಲಿ ಕಸಕಡ್ಡಿ ಬಿದ್ದು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾದರೂ ಅದನ್ನೇ ನಿತ್ಯ ಬಳಕೆ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ವಾಟರ್ ಹೀಟರ್ ಹಾಳು: ವಸತಿ ನಿಲಯದ ಮೇಲೆ ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾಗಿದ್ದ, ವಾಟರ್ ಹೀಟರ್ ಯಂತ್ರ ಉಪಯೋಗಕ್ಕೆ ಬಾರದಂತಾಗಿದೆ. ಆದರೂ ಈವರೆಗೆ ಅದನ್ನು ದುರಸ್ಥಿ ಮಾಡುವುದು ಅಥವಾ ಬೇರೆ ವ್ಯವಸ್ಥೆ ಮಾಡಲು ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಚಳಿಗಾಲದಲ್ಲೂ ತಣ್ಣೀರು ಸ್ನಾನ ಮಾಡಿ ಶಾಲೆ ಹೋಗುವ ಸ್ಥಿತಿ ಇದೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ವಸತಿ ನಿಲಯದಲ್ಲಿ ವಾಟರ್ μಲ್ಟರ್ ಯಂತ್ರ ನೀಡಲಾಗಿದೆ. ಇದು ಮಕ್ಕಳಿಗೆ ಉಪಯೋಗಕ್ಕೆ ಬಾರದೇ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ. ಆದರೂ ಸಂಬಂಧ ಪಟ್ಟವರು ದುರಸ್ಥಿ ಮಾಡಲು ಮುಂದಾಗಿಲ್ಲ.
ಹೀಗಾಗಿ ಇಟ್ಟ ಸ್ಥಳದಲ್ಲೆ ಧೂಳು ತಿನ್ನುತ್ತಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಸತಿ ನಿಲಯದಲ್ಲಿ ಅಳವಡಿಸಲಾದ ವಿದ್ಯುತ್ ಬ್ಯಾಟರಿ ಹಾಗೂ ಸೋಲಾರ್ ಆಧಾರದಲ್ಲಿ ಆವರಣದಲ್ಲಿ ಅಳವಡಿಸಲಾಗಿದ್ದ ದೀಪಕೂಡ ಹಾಳಾಗಿದ್ದರೂ ದುರಸ್ಥಿ ಮಾಡುವ ಕೆಲಸ ನಡೆದಿಲ್ಲ. ಹೀಗಾಗಿ ರಾತ್ರಿ ವಿದ್ಯುತ್ ಕೈ ಕೊಟ್ಟರೆ ದೇವರ ಬಲ್ಲ ಎಂಬಂತಾಗಿದೆ ಇಲ್ಲಿ ಸ್ಥಿತಿ.
ಅಡುಗೆ ಕೋಣೆ ಅವ್ಯವಸ್ಥೆ ತಾಣ: ಅಡುಗೆ ಮಾಡುವ ಕೋಣೆ ಅವ್ಯವಸ್ಥೆಯ ತಾಣವಾಗಿದೆ. ಒಳಗಡೆ ಹೋದರೆ ಸಾಕು ಪಾತ್ರೆಗಳು ಹಾಗೂ ಊಟ ಮಾಡುವ ತಟ್ಟೆ ಅಲ್ಲಲ್ಲಿ ಬಿದ್ದಿವೆ. ನೀರಿನ ಟ್ಯಾಂಕ್ ಮೇಲೆ ಯಾವುದೇ ಮುಚ್ಚಳ ಅಳವಡಿಸದೇ ಎಲ್ಲಾ ಕೆಲಸಕ್ಕೂ ಇಲ್ಲಿನ ನೀರನ್ನೇ ಬಳಸಲಾಗುತ್ತ¨
ವೀರಾರೆಡ್ಡಿ ಆರ್.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.