ಪ್ರಶಸ್ತಿ ಶತಕದ ಅಂಚಿನಲ್ಲಿ ರೋಜರ್ ಫೆಡರರ್
Team Udayavani, Nov 17, 2018, 3:25 AM IST
ಶತಕದ ಸಂಚಲನವೇ ಅಂತಹದು. ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಶತಕಗಳನ್ನು ಹೊಡೆದ ಆಟಗಾರ ಕೂಡ 51ನೇ ಶತಕವನ್ನು ಬಾರಿಸುವಾಗ ನಿರುಮ್ಮಳನಾಗಿರುವುದಿಲ್ಲ. 90ರ ನಂತರದ ಪ್ರತಿ ರನ್ ಕೂಡ ಆತನಿಗೆ ಒತ್ತಡವನ್ನು ಉಂಟುಮಾಡುತ್ತದೆ. ಇಂತಹ ಮನಃಸ್ಥಿತಿ ಸಾಮಾನ್ಯವಾಗಿರುವುದರಿಂದಲೇ “ನರ್ವಸ್ ನೈಂಟಿ ಎಂಬ ಪದಪುಂಜ ಹುಟ್ಟಿದ್ದು! ಮನುಷ್ಯನ ಜೀವಿತಾವಧಿ ನೋಡಿದರೂ ಬಹುಸಂಖ್ಯಾತರು ತಮ್ಮ ಆಯುರಾರೋಗ್ಯವನ್ನು 90ರವರೆಗೆ ಕಾಪಾಡಿಕೊಂಡಿದ್ದರೂ ನರ್ವಸ್ ನೈಂಟಿಗೆ ಬಲಿಯಾಗುತ್ತಾರೆ. ಈ ಮೂರಂಕಿಯನ್ನು ಮುಟ್ಟುವ ತವಕ ಕ್ರಿಕೆಟನ್ನು ಹೊರತುಪಡಿಸಿ ಬೇರೆ ಬೇರೆ ಆಟಗಳಲ್ಲಿ ತುಸು ಅಪರೂಪ. ಹಾಗಿದ್ದೂ ಟೆನಿಸ್ ಆಟವಾಡುತ್ತಿರುವ ದಂತಕಥೆ ಸ್ವಿಜರೆಲಂಡ್‌ನ ರೋಜರ್ ಫೆಡರರ್ ಕೂಡ ಶತಕದ ಅಂಚಿನಲ್ಲಿದ್ದಾರೆ!
ಮಾರು ದೂರದಲ್ಲಿ ನೂರು!
ಟೆನಿಸ್ ಪಂದ್ಯಗಳ ಅಂಕಪದ್ಧತಿ ಭಿನ್ನವಾಗಿರುತ್ತದೆ. ಇಲ್ಲಿ ಗೇಮ್, ಸೆಟ್ ಮೂಲಕ ಪಂದ್ಯ ನಿರ್ಧರಿಸಲಾಗುತ್ತದೆ. ಪಂದ್ಯದ ವೇಳೆ ಇಲ್ಲಿ ಮೂರಂಕಿಯ ಪ್ರಶ್ನೆಯೇ ಬರುವುದಿಲ್ಲ. ಆದರೆ ವಿಶ್ವದ ಮಾಜಿ ನಂ.1 ಆಟಗಾರ ಫೆಡರರ್ ಈಗ 100ನೇ ಎಟಿಪಿ ಸಿಂಗಲ್ಸ್ ಪ್ರಶಸ್ತಿಗಳ ಸನಿಹದಲ್ಲಿದ್ದಾರೆ. ಇನ್ನು ಒಂದೇ ಒಂದು ಪ್ರಶಸ್ತಿ ಗೆದ್ದರೆ, 100 ಎಟಿಪಿ ಪ್ರಶಸ್ತಿ ಗಳಿಸಿದ ವಿಶ್ವದ ಎರಡನೇ ಸಾಧಕ ಎಂದು ಇತಿಹಾಸ ನಮೂದಿಸಿಕೊಳ್ಳುತ್ತದೆ. ವರ್ಷದ ಅತ್ಯುತ್ತಮ ಪ್ರದರ್ಶನ ತೋರಿದ ಎಂಟು ಜನ ಆಟಗಾರರನ್ನು ಒಳಗೊಂಡ ಎಟಿಪಿ ಫೈನಲ್ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈಗ ಲಂಡನ್‌ನಲ್ಲಿ ನಡೆದಿರುವ ಈ ಟೂರ್ನಿಯಲ್ಲಿಯೇ ರೋಜರ್ ಫೆಡರರ್ ತಮ್ಮ ನೂರನೇ ಪ್ರಶಸ್ತಿ ಪಡೆದರೆ ಅದಕ್ಕೊಂದು ಮಾಂತ್ರಿಕ ಸ್ಪರ್ಶ ಸಿಕ್ಕಂತಾಗುತ್ತದೆ.
ಮಹಿಳಾ ಸಿಂಗಲ್ಸ್ ಟೆನಿಸ್‌ನಲ್ಲಿ ಹಲವು ಆಟಗಾರ್ತಿಯರು ಮ್ಯಾಜಿಕ್ 100 ಪ್ರಶಸ್ತಿಗಳನ್ನು ದಾಟಿದ್ದರೂ ಪುರುಷರಲ್ಲಿ ಕೇವಲ ಜಿಮ್ಮಿ ಕಾನರ್ ಮೂರಂಕಿಯ ಸಾಧಕರು. ಅವರು ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ 109 ಪ್ರಶಸ್ತಿ ಸಂಪಾದಿಸಿದ್ದಾರೆ. ರೋಜರ್ ಬಿಟ್ಟರೆ ಇವಾನ್‌ಲೆಂಡ್ಲ್ 94 ಎಟಿಪಿ ಹಾಗೂ ಈಗಲೂ ಕಣದಲ್ಲಿರುವ ರಫಾಯೆಲ್ ನಡಾಲ್ 80 ಪ್ರಶಸ್ತಿ ಪಡೆದಿದ್ದಾರೆ. ದಾಖಲೆಗಳಿಗಾಗಿ ನೆನಪಿಸಿಕೊಳ್ಳುವುದಾದರೆ, ಮಾರ್ಟಿನಾ ನವ್ರಾಟಿಲೋವಾ 18 ಗ್ರ್ಯಾನ್‌ಸ್ಲಾéಂ ಸೇರಿ 167 ಡಬ್ಲ್ಯುಟಿಎ ಪ್ರಶಸ್ತಿ ಪಡೆದಿದ್ದಾರೆ. ಅವರದ್ದು 177 ಡಬಲ್ಸ್ ಸಾಧನೆ ಬೋನಸ್. ಕ್ರಿಸ್ ಎವರ್ಟ್ 7 ಫ್ರೆಂಚ್ ಓಪನ್ ಸೇರಿದ 18 ಸ್ಲಾಂ ಜೊತೆ 157 ಸಿಂಗಲ್ಸ್ ಪ್ರಶಸ್ತಿಗಳು. ಸ್ಟೆಫಿ ಗ್ರಾಫ್ 107 ಪ್ರಶಸ್ತಿ. ಇದೇ ಸ್ಟೆಫಿ ಒಂದೇ ವರ್ಷದಲ್ಲಿ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾéಂ ಗೆದ್ದಿದ್ದಲ್ಲದೆ ಆ ವರ್ಷ ನಡೆದ ಒಲಂಪಿಕ್ಸ್ ಚಿನ್ನವನ್ನೂ ಗೆದ್ದಿರುವುದು ಕೂಡ ನೆನಪಾಗುತ್ತದೆ.
ಫಾರಂ, ಫಿಟ್‌ನೆಸ್ ಮಾತ್ರ ಪ್ರಶ್ನೆ!
ಫೆಡರರ್‌ರ ಸಾಮರ್ಥ್ಯ ಪ್ರಶ್ನಾತೀತವಾದುದು. ಅಷ್ಟಕ್ಕೂ 99 ಪ್ರಶಸ್ತಿ ಪಡೆದವನ ಸಾಮರ್ಥ್ಯದ ಮಾತೇ ಹಾಸ್ಯಾಸ್ಪದ. ಆಟಗಾರರ ದೈಹಿಕ ತಾಕತ್ತು ಸದಾ ಮಸೂರದಲ್ಲಿ ಹಿಡಿದು ನೋಡುವಂತಹದ್ದು. ಮೊನ್ನೆ ಆಗಸ್ಟ್‌ನಲ್ಲಿ 37ನೇ ಹುಟ್ಟುಹಬ್ಬ ಆಚರಿಸಿದ ಫೆಡರರ್‌ಗೆ ಪ್ರತಿಭೆ ಕೈಕೊಡುವುದಿಲ್ಲ. ಫಾರಂ ಕೈಬಿಡಬೇಕು ಇಲ್ಲವೇ ದೈಹಿಕ ಫಿಟ್‌ನೆಸ್. ತಮ್ಮ ದೈಹಿಕ ಸಾಮರ್ಥ್ಯವನ್ನು ಫೆಡರರ್ ಈ ವರ್ಷ 20ನೇ ಗ್ರ್ಯಾನ್‌ಸ್ಲಾéಂ ಗೆಲ್ಲುವ ಮೂಲಕ ತೋರಿದ್ದಾರೆ. ಸ್ಲಾéಮ್ ಜೊತೆಗೆ ತಮ್ಮ 36 ವರ್ಷ 10 ತಿಂಗಳ ಪ್ರಾಯದಲ್ಲಿ ವಿಶ್ವದ ಅಗ್ರಪಟ್ಟ ಏರುವ ಮೂಲಕ ರೋಜರ್ ವಿಶ್ವದ ಅತ್ಯಂತ ಹಿರಿಯ ಅಗ್ರಕ್ರಮಾಂಕಿತ ಎಂಬ ಬಿರುದನ್ನೂ ತಮ್ಮದಾಗಿಸಿಕೊಂಡರು.
ಟೆನಿಸ್ ಋತುವಿನ ಕೊನೆಯ ಹಂತದಲ್ಲಿದ್ದೇವೆ. ಎಟಿಪಿ ಫೈನಲ್ಸ್ ನಂತರ ಟೆನಿಸ್ ಮಾಸ್ಟರ್ನ ಯಾವುದೇ ಟೂರ್ನಿಗಳು ನಡೆಯುವುದಿಲ್ಲ. ಆದರೆ ರೋಜರ್ ಮಾತ್ರ ಹೀಗೊಂದು 100ರ ದಾಖಲೆಗಾಗಿ ಆಡುವುದು ತನ್ನ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆ ನೋಡಿದರೆ, ರೋಜರ್‌ರ ವೃತ್ತಿಜೀವನದಲ್ಲಿ ವಾರ್ಷಿಕ ಸರಾಸರಿ 5.1ರ ಸರಾಸರಿಯಲ್ಲಿ ಎಟಿಪಿ ಪ್ರಶಸ್ತಿಗಳು ಸಂದಿವೆ. ಆಸ್ಟ್ರೇಲಿಯನ್ ಓಪನ್ ನಂತರ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಎದುರು ಎರಡು ಸೆಟ್ ಹಾಗೂ ಮ್ಯಾಚ್ ಪಾಯಿಂಟ್ ಘಟ್ಟದಿಂದ ಸೋತಿದ್ದು, ಶಾಂNç ಮಾಸ್ಟರ್ನ ಉಪಾಂತ್ಯದಲ್ಲಿ ಪರಾಭವಗೊಂಡಿದ್ದು, ಪ್ಯಾರಿಸ್ ಮಾಸ್ಟರ್ನ ಉಪಾಂತ್ಯದಲ್ಲಿ ಜೊಕೊವಿಚ್ ಎದುರು ಮಣಿದಿದ್ದು 100ರ ಕನಸನ್ನು ಸ್ವಲ್ಪ ತಡ ಮಾಡಿದೆ. ಆದರೆ ಅವರನ್ನು ತಡೆಯುವುದಂತೂ ಅಸಾಧ್ಯ.
ಶತಕ ಹೊಸದಲ್ಲ!
ಸಿಂಗಲ್ಸ್, ಡಬಲ್ಸ್ ಎಲ್ಲ ಲೆಕ್ಕಾಚಾರಗಳನ್ನು ಪರಿಗಣಿಸಿದರೆ ಈಗಾಗಲೇ ರೋಜರ್ ಫೆಡರರ್ ಶತಕ ಬಾರಿಸಿದ್ದಾರೆ. 8 ಡಬಲ್ಸ್ ಪ್ರಶಸ್ತಿ ಕಾರಣ ಫೆಡರರ್‌ರ ಮೊತ್ತ 107ಕ್ಕೆ ಏರುತ್ತದೆ. ಹೀಗೆಯೇ ನೋಡಿದರೆ ಮಾರ್ಟಿನಾ ನವ್ರಾಟಿಲೋವಾರ 354, ಬಿಲ್ಲಿ ಜೀನ್ ಕಿಂಗ್ ಹಾಗೂ ಕ್ರಿಸ್ ಎವರ್ಟ್‌ರ 175, ಮೆಕೆನ್ರೊàರ 156, ಮಾರ್ಗರೆಟ್ ಕೋರ್ಟ್‌ರ 147, ಪಾಮ್ ]ವರ್‌ರ 128, ರೋಸ್‌ಮೇರಿ ಕ್ಯಾಸಲ್‌ರ 126, ಕಾನರ್ ಹಾಗೂ ಮೈಕ್ ಬ್ರಿಯಾನ್‌ರ 124, ಬಾಬ್ ಬ್ರಿಯಾನ್‌ರ 123 ಸಾಧನೆಗಳನ್ನು ಇಲ್ಲಿ ಉಲ್ಲೇಖೀಸಬಹುದು. ಮೈಕ್ ಬ್ರಿಯಾನ್‌ರ 124ರಲ್ಲಿ ಒಂದೇ ಒಂದು ಸಿಂಗಲ್ಸ್ ಪ್ರಶಸ್ತಿ ಇಲ್ಲ!
ಕೊನೆಮಾತು
ಎಟಿಪಿ ಫೈನಲ್ಸ್‌ನಲ್ಲಿ ಫೆಡರರ್ ಆ್ಯಂಡರ್ಸನ್, ಡೊಮಿನಿಕ್ ಥೀಮ್ ಹಾಗೂ ಕೀ ನಿಶಿಕೋರಿ ಅವರ ಗುಂಪಿನಲ್ಲಿದ್ದಾರೆ. ಆ್ಯಂಡರ್ಸನ್ ವಿರುದ್ಧದ ವಿಂಬಲ್ಡನ್ ಸೋಲು ನೆನಪಲ್ಲಿದೆ. ನಿಶಿಕೋರಿ ವಿರುದ್ಧದ ಮೊದಲ ಪಂದ್ಯದಲ್ಲಿ ಫೆಡರರ್ ಸೋತೂ ಆಗಿದೆ. ರೌಂಡ್ ರಾಬಿನ್ ಮಾದರಿಯ ಟೂರ್ನಿಯಲ್ಲಿನ ರೋಜರ್ ಭವಿಷ್ಯ ಈ ಲೇಖನ ಓದುವ ವೇಳೆಗೆ ನಿಮಗೆ ನಿಚ್ಚಳಗೊಂಡಿರುತ್ತದೆ. ಫೆಡರರ್ ಕೂಡ ನರ್ವಸ್ ನೈಂಟಿಗೆ ಸಿಲುಕಿದ್ದಾರೆಯೇ ಎಂಬ ಪ್ರಶ್ನೆ ತಲೆಯಲ್ಲಿ ಸುಳಿದಾಡುತ್ತದೆ!
ಮಾ.ವೆಂ.ಸ.ಪ್ರಸಾದ್, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.