ರೂಟ್ ಶತಕ; ಇಂಗ್ಲೆಂಡ್ ಚೇತರಿಕೆ
Team Udayavani, Nov 17, 2018, 6:10 AM IST
ಕ್ಯಾಂಡಿ: ನಾಯಕ ಜೋ ರೂಟ್ ಬಾರಿಸಿದ 15ನೇ ಶತಕದ ನೆರವಿನಿಂದ ಕ್ಯಾಂಡಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಚೇತರಿಕೆ ಕಂಡಿದೆ. 3ನೇ ದಿನದಾಟದ ಅಂತ್ಯಕ್ಕೆ 9 ವಿಕೆಟಿಗೆ 324 ರನ್ ಗಳಿಸಿದ್ದು, ಒಟ್ಟು 278 ರನ್ನುಗಳ ಮುನ್ನಡೆಯಲ್ಲಿದೆ.
ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದು, ಸ್ಪಷ್ಟ ಫಲಿತಾಂಶ ಖಚಿತಗೊಂಡಿದೆ. ಆದರೆ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಈ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಸರಣಿ ಉಳಿಸಿಕೊಳ್ಳಲು ಭಾರೀ ಸಾಹಸ ಮಾಡಬೇಕಾಗುವುದರಲ್ಲಿ ಅನುಮಾನವಿಲ್ಲ.
ಬೌಲರ್‌ಗಳ ಮೇಲಾಟದ ನಡುವೆಯೂ ಜೋ ರೂಟ್ ಶತಕ ಬಾರಿಸಿ ಅಸಾಮಾನ್ಯ ಸಾಹಸವೊಂದಕ್ಕೆ ಸಾಕ್ಷಿಯಾದರು. ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ ಇಂಗ್ಲೆಂಡ್ ಕಪ್ತಾನ, 146 ಎಸೆತಗಳಿಂದ 124 ರನ್ ಹೊಡೆದರು. ಸಿಡಿಸಿದ್ದು 10 ಬೌಂಡರಿ ಮತ್ತು 2 ಸಿಕ್ಸರ್. ಕೀಪರ್ ಬೆನ್ ಫೋಕ್ಸ್ 51 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಶ್ರೀಲಂಕಾದ ಆಫ್ಸ್ಪಿನ್ನರ್ ಅಖೀಲ ಧನಂಜಯ 106 ರನ್ನಿಗೆ 6 ವಿಕೆಟ್ ಕಿತ್ತು ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-290 ಮತ್ತು 9 ವಿಕೆಟಿಗೆ 324 (ರೂಟ್ 124, ಬರ್ನ್ಸ್ 59, ಫೋಕ್ಸ್ ಬ್ಯಾಟಿಂಗ್ 51, ಧನಂಜಯ 106ಕ್ಕೆ 6, ಪೆರೆರ 87ಕ್ಕೆ 2). ಶ್ರೀಲಂಕಾ-336.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.