ಆಂಧ್ರಕ್ಕೆ ಸಿಬಿಐ ಪ್ರವೇಶ ನಿಷೇಧ!
Team Udayavani, Nov 17, 2018, 6:45 AM IST
ಹೊಸದಿಲ್ಲಿ/ಕೋಲ್ಕತಾ: ಸಿಬಿಐ ಮುಖ್ಯಸ್ಥರ ನಡುವಿನ ತಿಕ್ಕಾಟ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ಸರಕಾರಗಳು ಸಿಬಿಐ ಅಧಿಕಾರಿಗಳನ್ನು ರಾಜ್ಯಕ್ಕೆ ಪ್ರವೇಶಿಸದಂತೆ ನಿಷೇಧಿಸಿವೆ. ಅಂದರೆ, ಈ ಎರಡೂ ರಾಜ್ಯಗಳಲ್ಲಿ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ದಾಳಿ ನಡೆಸಲು ಸಾಧ್ಯವಿಲ್ಲ. ಸಿಬಿಐಯಲ್ಲಿ ನಡೆಯುತ್ತಿರುವ ಒಳಜಗಳಗಳಿಂದಾಗಿ ನಾವು ತನಿಖಾ ಸಂಸ್ಥೆಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇವೆ. ಹೀಗಾಗಿ ಅನುಮತಿಯನ್ನು ಹಿಂಪಡೆದು ಕೊಂಡಿದ್ದೇವೆ ಎಂದು ನಾಯ್ಡು ಹೇಳಿದ್ದಾರೆ. ಇದು ಬಿಜೆಯೇತರ ಮೈತ್ರಿಯೊಂದನ್ನು ರಚಿಸುವ ಪ್ರಯತ್ನದಲ್ಲಿರುವ ನಾಯ್ಡು ಕೇಂದ್ರದ ವಿರುದ್ಧ ಆರಂಭಿ ಸಿರುವ ಸಮರ ಎಂದೇ ಹೇಳಲಾಗುತ್ತಿದೆ.
ವಿಶೇಷವೆಂದರೆ ನಾಯ್ಡು ಅವರ ಈ ನಿರ್ಧಾರಕ್ಕೆ ಬೆಂಬಲ ನೀಡಿರುವ ಪ. ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದಾಳಿ ನಡೆಸುವ ಮತ್ತು ತನಿಖೆ ನಡೆಸುವ ಸಾಮಾನ್ಯ ಅನುಮತಿಯನ್ನು ವಾಪಸ್ ಪಡೆದಿದ್ದಾರೆ. ಈ ಹಿಂದೆ ಸಿಬಿಐ ಬಳಸಿ ಆಂಧ್ರದಲ್ಲಿ ಸರಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ನಾಯ್ಡು ಆರೋಪಿಸಿದ್ದರು. ವಿಪಕ್ಷ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಜತೆ ಸೇರಿಕೊಂಡು ಬಿಜೆಪಿ ಟಿಡಿಪಿ ವಿರುದ್ಧ ಕುಕೃತ್ಯಗಳನ್ನು ನಡೆಸುತ್ತಿದೆ. ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಆಂಧ್ರ ಸರಕಾರದ ಈ ಕ್ರಮವನ್ನು ವಿರೋಧಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಬಿಜೆಪಿ ಕೂಡ ನಾಯ್ಡು ಅವರ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದೆ.
ಸದ್ಯ ವಿವಾದಕ್ಕೀಡಾಗಿರುವ ಮಾಂಸ ರಫ್ತುದಾರ ಮೊಯೀನ್ ಖುರೇಶಿ ಹಾಗೂ ಉದ್ಯಮಿ ಸನಾ ಸತೀಶ್ ಬಾಬು ಪ್ರಕರಣಗಳು ದಿಲ್ಲಿಯಲ್ಲಿ ದಾಖಲಾಗಿವೆ. ಅವರು ಆಂಧ್ರದವರೇ ಆಗಿದ್ದರೂ ಪ್ರಕರಣ ದಿಲ್ಲಿಯಲ್ಲಿ ದಾಖಲಾಗಿರುವುದರಿಂದ ಸಿಬಿಐ ತನಿಖೆ ಮುಂದುವರಿಸಲು ಯಾವುದೇ ಸಮಸ್ಯೆಯಿಲ್ಲ. ಸದ್ಯ ಆಂಧ್ರದಲ್ಲಿ ಯಾವುದೇ ಪ್ರಮುಖ ಪ್ರಕರಣಗಳು ನಡೆಯುತ್ತಿಲ್ಲ. ಹೀಗಾಗಿ ಸಿಬಿಐಗೆ ಸದ್ಯಕ್ಕೆ ಈ ಅನುಮತಿ ಹಿಂಪಡೆಯುವಿಕೆಯಿಂದ ಸಮಸ್ಯೆಯಿಲ್ಲ.
ಏನಿದು ಅನುಮತಿ?
ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ಕಾಯ್ದೆ 1946 ಅಡಿಯಲ್ಲಿ ಸಿಬಿಐ ಕಾರ್ಯನಿರ್ವಹಿಸುತ್ತದೆ. ರಾಜ್ಯಗಳಿಗೆ ತೆರಳಿ ತನಿಖೆ ನಡೆಸಲು ಆ ರಾಜ್ಯಗಳು ಸಿಬಿಐಗೆ ಲಿಖೀತ ಅನುಮತಿ ನೀಡಬೇಕು. ಕಳೆದ ಆ.3ರಂದು ಇದೇ ರೀತಿ ಆಂಧ್ರದ ಸರಕಾರವು ಈ ಅನುಮತಿಯನ್ನು ನವೀಕರಿಸಿತ್ತು. ಆದರೆ ಈಗ ಈ ಅನುಮತಿಯನ್ನು ಆಂಧ್ರ ಸರಕಾರ ಹಿಂಪಡೆದಿದೆ. ಇದರಿಂದಾಗಿ ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ತನಿಖೆಗಾಗಿ ತೆರಳುವಾಗ ಆಂಧ್ರ ಸರಕಾರದ ಅನುಮತಿ ಕೋರಬೇಕಾಗುತ್ತದೆ. ಈ ಹಿಂದೆ ಒಟ್ಟಾರೆ ಅನುಮತಿ ನೀಡಿದ್ದರಿಂದ, ಪ್ರತಿ ಬಾರಿ ಸಿಬಿಐ ಅಧಿಕಾರಿ ಆಂಧ್ರಕ್ಕೆ ಕಾಲಿಡುವ ಮುನ್ನ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿರುತ್ತಿರಲಿಲ್ಲ. ಅಷ್ಟೇ ಅಲ್ಲ, ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ಕಾಯ್ದೆ 1946ರ ಪರಿಚ್ಛೇದ 6ರಲ್ಲೂ ರಾಜ್ಯಗಳ ಅನುಮತಿ ಇಲ್ಲದೇ ಕೇಂದ್ರೀಯ ತನಿಖಾ ಸಂಸ್ಥೆ ರಾಜ್ಯವನ್ನು ಪ್ರವೇಶಿಸುವಂತಿಲ್ಲ ಎಂದು ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.