ಉಗ್ರರಿಂದ ಮಹಿಳಾ ಅಸ್ತ್ರ
Team Udayavani, Nov 17, 2018, 6:59 AM IST
ಶ್ರೀನಗರ: ದಶಕಗಳ ಹಿಂದೆ ಉಗ್ರವಾದದ ಹೆಸರಿನಲ್ಲಿ ನಡೆಯುತ್ತಿದ್ದ ರಕ್ತಪಾತಕ್ಕೆ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ ಉಗ್ರವಾದಿಗಳ ಹೇಯಕೃತ್ಯ ಕಣಿವೆ ನಾಡಿನಲ್ಲಿ ಮರುಕಳಿಸಿದೆ. ಅದಕ್ಕೆ ಸಾಕ್ಷ್ಯವೆಂಬಂತೆ, ಇಲ್ಲಿನ ಲವಾಯೊರಾ ಪ್ರಾಂತ್ಯದ ಹೆದ್ದಾರಿಯೊಂದರಲ್ಲಿ ಸೈಮಾ ಎಂಬ ಮಹಿಳೆಯೊಬ್ಬರು ತಾವಿದ್ದ ವಾಹನದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದ್ದುದು
ಪತ್ತೆಯಾಗಿದೆ.
ಮಹಿಳೆಯರನ್ನು “ಶಸ್ತ್ರಾಸ್ತ್ರ, ಸ್ಫೋಟಕ ಸಾಗಣೆದಾರ’ರನ್ನಾಗಿ ಬಳಸುವ ತಂತ್ರಕ್ಕೆ ಈಗ ಉಗ್ರರು ಮೊರೆಹೋಗಿರುವುದು ಭದ್ರತಾ
ಪಡೆಗಳಿಗೆ ತಲೆನೋವು ಉಂಟುಮಾಡಿದೆ. ಮಂಗಳವಾರ ಮಧ್ಯಾಹ್ನ, ತನಗಿರುವ ಚರ್ಮದ ಸೋಂಕನ್ನು ವೈದ್ಯರಿಗೆ ತೋರಿಸಿ ಔಷಧಿ
ತರುವುದಾಗಿ ಹೇಳಿ ಮನೆಯಿಂದ ತೆರಳಿದ್ದ 29ರ ಪ್ರಾಯದ ಸೈಮಾ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳೊಂದಿಗೆ ಸಿಕ್ಕಿ ಹಾಕಿ ಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಇಬ್ಬರು ಸಹೋದರರೂ ಪೊಲೀಸ್ ಅತಿಥಿಗಳಾಗಿರುವುದು ಆ ಕುಟುಂಬಕ್ಕೆ ಮತ್ತೂಂದು ಶಾಕ್ ನೀಡಿದೆ.
ಸೈಮಾ ಬಳಿಯಿಂದ 20 ಗ್ರೆನೇಡ್‌ಗಳು, 365 ಬುಲೆಟ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಡಿ
ನಿಯಂತ್ರಣ ರೇಖೆಯ ಮೂಲಕ ಆಗಮಿಸಿದ ಶಸ್ತ್ರಾಸ್ತ್ರಗಳನ್ನು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಸಾಗಿಸಲು ಮಹಿಳೆಯರನ್ನು ಬಳಸಿಕೊಳ್ಳು ತ್ತಿರುವುದು ಇದರಿಂದ ಬೆಳಕಿಗೆ ಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇವರು ಹಿಜ್ಬುಲ್ ಕಮಾಂಡರ್‌ನ ಮಕ್ಕಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.