ಪಶ್ಚಿಮ ಸಮುದ್ರ ಕೊಕ್ಕರೆ 


Team Udayavani, Nov 17, 2018, 11:23 AM IST

406.jpg

ಪಶ್ಚಿಮ ಸಮುದ್ರ ಕೊಕ್ಕರೆಯ ಊರು ಕೋಳಿಯಷ್ಟು ದೊಡ್ಡ ಗಾತ್ರವಿದೆ.Western reef  Heron/Egret ((Egretta gularis)  RM- Village Hen+ ಪಶ್ಚಿಮ ಕರಾವಳಿಯ ಕಾಂಡ್ಲಾ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಕ್ಕಿ ಕಡಿಮೆ ನೀರಿರುವ ಜಾಗದಲ್ಲಿ ಕಾದು ಕುಳಿತು, ಮೀನುಗಳನ್ನು ಬೇಟಿಮಾಡುತ್ತದೆ. 

 ಕಪ್ಪು ಕೊಕ್ಕರೆ, ಸಮುದ್ರ ಕೊಕ್ಕರೆ, ಸಮುದ್ರಬಿಳಿ, ಬೂದು ಕೊಕ್ಕರೆ- ಹೀಗೆ ಅನೇಕ ಹೆಸರುಗಳಿವೆ ಈ ಹಕ್ಕಿಗೆ.  ಚಿಕ್ಕ, ದೊಡ್ಡ ಕೊಕ್ಕಿನ ಹಕ್ಕಿಯ ಆಕಾರ ಮತ್ತು ಬಣ್ಣದಲ್ಲಿ ತುಂಬಾ ಹೋಲಿಕೆ ಇರುವ  ನೀರಹಕ್ಕಿ.  ಇದು ಊರ ಕೋಳಿಯಷ್ಟು ದೊಡ್ಡದು. ಸುಮಾರು 63 ಸೆಂ.ಮೀ. ಉದ್ದ ಇರುತ್ತದೆ. ದಕ್ಷಿಣ ಯುರೋಪ್‌, ಏಷಿಯಾ, ಆಫ್ರಿಕಾಗಳಲ್ಲೂ ಇದು ಕಾಣಸಿಗುತ್ತದೆ.  

 ಚಿಕ್ಕ ಕೊಕ್ಕರೆ ಹಾಗೂ ಬಿಳಿ ಛಾಯೆಯ ಪಶ್ಚಿಮ ಸಮುದ್ರದ ಹಕ್ಕಿಗೆ ತುಂಬಾ ಹೋಲಿಕೆ ಇದೆ. ಚಿಕ್ಕ ಕೊಕ್ಕರೆಯ ಚುಂಚು, ಕಪ್ಪು ಮಿಶ್ರಿತ ಬೂದು ಬಣ್ಣ. ಕಾಲು ಸಹ ಕಪ್ಪಾಗಿದೆ.  ಆದರೆ ಪಶ್ಚಿಮ ರೀಪ್‌ ಕೊಕ್ಕರೆಯ ಬೆರಳು, ಚುಂಚು ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿರುತ್ತದೆ. 

ಈ ಕೊಕ್ಕರೆಯ ಇರುನೆಲೆ ಸಮುದ್ರ ತೀರ. ಬೂದು ಬಣ್ಣದ ಕೊಕ್ಕರೆಯು ಕಡಿಮೆ ನೀರಿರುವ ಜಾಗದಲ್ಲಿ ಕಾದು ಕುಳಿತು -ಇಲ್ಲವೇ ಓಡಾಡುತ್ತಾ ಬೇಟೆಯಾಡಿ, ತನ್ನ ಆಹಾರ ಗಿಟ್ಟಿಸಿಕೊಳ್ಳುತ್ತದೆ.  ಸಾಮಾನ್ಯವಾಗಿ ಬಿಳೀ ಕೊಕ್ಕರೆ, ಬೂದು ಬಣ್ಣದ ಕೊಕ್ಕರೆ ಹಳದಿ ಚುಂಚಿನ ಕೊಕ್ಕರೆಗಳು ಒಂದೇರೀತಿ ಕಾಣಬಹುದು. ಇವೆಲ್ಲಾ ಸಿಹಿನೀರಿನ ಕೊಳ -ಸರೋವರ ನದಿ ಪ್ರದೇಶದಲ್ಲಿ ವಾಸಿಸುತ್ತವೆ.  ಅಪರೂಪಕ್ಕೆ ಸಮುದ್ರ ತೀರಕ್ಕೆ ಹೋಗುತ್ತವೆ. 

ಆದರೆ ಪಶ್ಚಿಮ ಸಮುದ್ರ ತೀರದ ರೀಪ್‌ ಕೊಕ್ಕರೆ,  ದಡದಲ್ಲಿರುವ ಉಪ್ಪು ನೀರಿನ ಜಾಗದಲ್ಲೇ ಹೆಚ್ಚು ಸಮಯ ತನ್ನ ಸಮಯ ಕಳೆಯುತ್ತದೆ. ಸಮುದ್ರ ರೀಪ್‌ ಕೊಕ್ಕರೆಯು ಬೇಟೆಯಾಡುವಾಗ ತನ್ನ ದೊಡ್ಡ ರೆಕ್ಕೆಯನ್ನು ಕೊಡೆಯಂತೆ ಅಗಲಿಸಿ,  ನೀರಿನಲ್ಲಿ ಸ್ವಲ್ಪ ಬಡಿದಂತೆ ಮಾಡಿ ಮೀನು ತನ್ನ ಮುಂಭಾಗಕ್ಕೆ ಬರುವಂತೆ ಮಾಡುತ್ತದೆ.   ಇಂಥ ವರ್ತನೆ ಕೇವಲ ಪಶ್ಚಿಮ ಸಮುದ್ರ ದಂಡೆಯ ರೀಪ್‌ ಕೊಕ್ಕರೆಗೆ ಮಾತ್ರ ಸೀಮಿತ. 

ಪ್ರಾಯಕ್ಕನುಗುಣವಾಗಿ ಈ ಹಕ್ಕಿ ಬೇರೆ ಬೇರೆ ಬಣ್ಣಗಳಿಗೆ ಈ ಹಕ್ಕಿ ಬದಲಾಗುತ್ತದೆ. ಈ ಪ್ರಬೇಧದ ಬಿಳಿ ಛಾಯೆಯ ಹಕ್ಕಿಯ ಚುಂಚಿನ ಬುಡದಲ್ಲಿ ಬೂದು,  ಮಧ್ಯದಲ್ಲಿ ಕೇಸರಿ, ತುದಿಯಲ್ಲಿ ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಮೈಎಲ್ಲಾ ಬಿಳಿಬಣ್ಣ, ಕಣ್ಣು ಹಳದಿ ಕಾಲಿನ ಬುಡದಲ್ಲಿ ತಿಳಿ ಹಳದಿ ಬಣ್ಣ ಇದ್ದು,  ತುದಿ ಬೆರಳು ತಿಳಿ ಲಿಂಬುವಿನ ಹಳದಿ ಬಣ್ಣದ್ದಾಗಿರುತ್ತದೆ. ಮರಿಮಾಡುವ ಸಮಯದಲ್ಲಿ ಈ ಹಕ್ಕಿಯ ತಲೆಯಲ್ಲಿರುವ ರೋಮದಂತಿರುವ ಜುಟ್ಟು ಮತ್ತು ಬಾಲದಲ್ಲಿ ಮೂಡುವ ಗರಿಯ ಗುಚ್ಚ ಸ್ನೇಕ್‌ ಬರ್ಡ್‌ ಅನ್ನು ನೆನಪಿಸುತ್ತದೆ. 

ಪಶ್ಚಿಮ ಕರಾವಳಿಯ ಕಾಂಡ್ಲಾ ಕಾಡು ಇದಕ್ಕೆ ಪ್ರಿಯವಾದ ಸ್ಥಳ.  ಇತರ ಕೊಕ್ಕರೆಗಳಂತೆ ಮರದ ತುಂಡನ್ನು ಸೇರಿಸಿ ಗೂಡು ಕಟ್ಟುವುದು ಇದರ ವಿಶೇಷತೆ. ಸಾಮಾನ್ಯವಾಗಿ ಇದು 5-10ಮೀ. ಎತ್ತರದಲ್ಲಿ ಗೂಡನ್ನು ನಿರ್ಮಿಸುತ್ತದೆ. ಅತಿ ಕಡಿಮೆ ಎಂದರೆ 0.6 ಮೀ. ಎತ್ತರದಲ್ಲಿ ಗೂಡು ಮಾಡಿದ ಉದಾಹರಣೆಯೂ ಇದೆ. 3-4 ತಿಳಿ ಸಮುದ್ರ ನೀಲಿ ಬಣ್ಣದ ಮೊಟ್ಟೆ ಇಡುವುದು.  ಸಾಮಾನ್ಯವಾಗಿ ಕಾಂಡ್ಲಾ ಗಿಡದ ಕೋಲನ್ನು ಗೂಡಿನ ಅಟ್ಟಣಿಗೆ ನಿರ್ಮಿಸಲು ಉಪಯೋಗಿಸುತ್ತದೆ. ಮೊದಲಿನ ಮೊಟ್ಟೆ ಇಟ್ಟ ಕೂಡಲೇ ಮೊಟ್ಟೆಗೆ ಕಾವು ಕೊಡುವುದು ಗಂಡು ಹೆಣ್ಣು ಎರಡೂ ಕಾವುಕೊಡುವ ಕಾರ್ಯ ನಿರ್ವಹಿಸುತ್ತದೆ. 

ಎತ್ತರದ ಜಾಗದಲ್ಲಿ ಗೂಡು ಕಟ್ಟುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ಆ ಅಟ್ಟಣಿಗೆಯಿಂದ ಕೆಳಗೆ ಬಿದ್ದು ಚಿಕ್ಕಮರಿ ಸಾಯುತ್ತದೆ. ಒಂದು ತಿಂಗಳವರೆಗೆ ತಂದೆ ತಾಯಿಯ ರಕ್ಷಣೆಯಲ್ಲಿ ಮರಿ ಬೆಳೆಯುವುದು. ಸಮುದ್ರ ತೀರದಲ್ಲಿರುವ ಸುಣ್ಣದ ಕಲ್ಲಿನಲ್ಲಿರುವ ಹುಳು, ಕಪ್ಪೆ ಚಿಪ್ಪು, ಕಲ್ಲು ಮಾಂಸ, ಮೃದ್ವಂಗಿ ಹಾಗೂ ಸಮುದ್ರತೀರದಲ್ಲಿರುವ ಚಿಕ್ಕ ಜಲಚರ, ಮೀನು ಏಡಿ ಇದರ ಮುಖ್ಯ ಆಹಾರ. ಸಮುದ್ರ ತೀರದ ಮಾಲಿನ್ಯ ತಡೆದರೆ ಈ ಹಕ್ಕಿಗಳು ಉಳಿದಾವು.  

ಟಾಪ್ ನ್ಯೂಸ್

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.