ಮದುವೆ ಮೂಡ್ನಲ್ಲಿ ಧ್ರುವ ಸರ್ಜಾ
Team Udayavani, Nov 17, 2018, 12:07 PM IST
ಕಳೆದ ತಿಂಗಳು ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ತಮ್ಮ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದರು. “ನನಗೆ ಲವ್ ಮ್ಯಾರೇಜ್ ಆಗೋಕೆ ಇಷ್ಟ’ ಎಂಬರ್ಥದಲ್ಲಿ ಮಾತನಾಡಿ, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದ್ದರು. ಹಾಗೆ ಹೇಳಿದ ಒಂದೂವರೆ ತಿಂಗಳಲ್ಲೇ ಧ್ರುವ ಮದುವೆ ಸುದ್ದಿ ಹೊರಬಿದ್ದಿದೆ. ಹೌದು, ಧ್ರುವ ಸರ್ಜಾ ಈಗ ಮದುವೆ ಮೂಡ್ನಲ್ಲಿದ್ದಾರೆ. ತಾವು ಇಷ್ಟಪಟ್ಟ ಹುಡುಗಿಯನ್ನೇ ಧ್ರುವ ಮದುವೆಯಾಗುತ್ತಿದ್ದಾರೆ.
ಅದು ತಮ್ಮ ಏರಿಯಾದ, ಪಕ್ಕದ್ಮನೆಯ ಹುಡುಗಿ ಎಂಬುದು ವಿಶೇಷ. ಪ್ರೇರಣಾ ಶಂಕರ್ ಎನ್ನುವವರನ್ನು ಧ್ರುವ ಸರ್ಜಾ ವಿವಾಹವಾಗಲಿದ್ದು, ಮುಂದಿನ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಓಡಾಡುತ್ತಿದೆ. ಪ್ರೇರಣಾ ಶಂಕರ್ ಹಾಗೂ ಧ್ರುವ ಸರ್ಜಾ ಹಲವು ವರ್ಷಗಳ ಸ್ನೇಹಿತರಾಗಿದ್ದು, ಒಂದೇ ಏರಿಯಾದಲ್ಲಿ ಇಬ್ಬರು ವಾಸಿಸುತ್ತಿದ್ದಾರೆ.
ಈಗ ಸ್ನೇಹ, ಪ್ರೇಮಕ್ಕೆ ತಿರುಗಿ ಎರಡೂ ಮನೆಯವರ ಸಮ್ಮತಿಯೊಂದಿಗೆ ಬಾಳಿನುದ್ದಕ್ಕೂ ಒಂದಾಗಿರಲು ನಿರ್ಧರಿಸಿದ್ದಾರೆನ್ನಲಾಗಿದೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರ ನಿಶ್ಚಿತಾರ್ಥ ಡಿಸೆಂಬರ್ 9 ರಂದು ಬನಶಂಕರಿಯಲ್ಲಿ ನಡೆಯಲಿದೆಯಂತೆ. ಸದ್ಯ ಧ್ರುವ ಸರ್ಜಾ “ಪೊಗರು’ ಚಿತ್ರದಲ್ಲಿ ಬಿಝಿಯಾಗಿದ್ದು, ಈ ಚಿತ್ರದಲ್ಲಿ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Bengaluru Premier League: ಡಿಸೆಂಬರ್ 12ರಿಂದ ಬಿಪಿಎಲ್ ಟೂರ್ನಿ
Actor Arrested: ಸ್ಯಾಂಡಲ್ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
MUST WATCH
ಹೊಸ ಸೇರ್ಪಡೆ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Mahaveera Hanuma: ಆಲ್ಬಂನಲ್ಲಿ ಹನುಮ ಗಾನ
Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ
Naxal: ಸರ್ಕಾರಿ ಬಸ್ ಅಡ್ಡ ಹಾಕಿ ಬೆಂಕಿ ಹಚ್ಚಿ ಕರಪತ್ರ ಹಂಚಿದ್ದ ವಿಕ್ರಂಗೌಡ ಮತ್ತು ತಂಡ!
Wine Merchants: ನಾಳೆಯ ಮದ್ಯ ಮಾರಾಟ ಬಂದ್ ನಿರ್ಧಾರ ವಾಪಸ್ ಪಡೆದ ಅಸೋಸಿಯೇಷನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.