ಪಾರದರ್ಶಕ ಆಡಳಿತಕ್ಕೆ ಮಾಹಿತಿ ಹಕ್ಕು ಅಧಿ ನಿಯಮ ಸಹಕಾರಿ


Team Udayavani, Nov 17, 2018, 3:40 PM IST

vij-2.jpg

ವಿಜಯಪುರ: ಆಡಳಿತದಲ್ಲಿ ಪಾರದರ್ಶಕತೆ, ಅಧಿಕಾರಿಗಳಿಗೆ ಹೊಣೆಗಾರಿಕೆ ತರುವ ಸದಾಶಯದಿಂದ ಜಾರಿಗೆ ತಂದಿರುವ ಮಾಹಿತಿ ಹಕ್ಕು ಅಧಿನಿಯಮ, ಆಡಳಿತದಲ್ಲಿ ದಕ್ಷತೆ ತರಲಿದೆ. ಪ್ರಾಮಾಣಿಕತೆ ಹಾಗೂ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುವಲ್ಲಿ ಅಧಿಕಾರಿಗಳಿಗೆ ನೆರವಾಗಲಿದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಎಸ್‌.ಎಲ್‌. ಪಾಟೀಲ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಅಧಿನಿಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯೇ ಮಾಹಿತಿ ಹಕ್ಕು ಅಧಿನಿಯಮದ ಮೂಲ ಸತ್ವ ಹಾಗೂ ಆಶಯ. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಈ ದಿಸೆಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಮಾಹಿತಿ ಕೋರುವ ನೆಪದಲ್ಲಿ ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆಗೆ ಮಾಡಿಕೊಳ್ಳಬಾರದು. ಪ್ರಾಮಾಣಿಕ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವಿಲ್ಲದೇ, ಸೇಡಿನ ಉದ್ದೇಶದಿಂದ ಮತ್ತು ವೈಯಕ್ತಿಕ ದ್ವೇಷದಿಂದ ಮಾಹಿತಿ ಕೇಳುವುದು ಮಾಹಿತಿ ಹಕ್ಕು ಅಧಿನಿಯಮದ ದುರ್ಬಳಕೆ ಆಗಲಿದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ ವೈಯಕ್ತಿಕ ಮಾಹಿತಿ ಕೋರಿ ದುರಾಲೋಚನೆ, ಉಪದ್ರವಕಾರಿ ಅರ್ಜಿ ಸಲ್ಲಿಸುವುದಕ್ಕೆ ಪರವಾನಿಗೆ ನೀಡಲಾಗಿದೆ ಎಂಬಂತೆ ವರ್ತಿಸಬಾದರು. ಇದರಿಂದ ನ್ಯಾಯದಾನವನ್ನು ದುರ್ಬಳಕೆ ಮಾಡಿಕೊಂಡಂತೆ ಆಗಲಿದೆ. ಹೀಗಾಗಿ ಸಾರ್ವಜನಿಕರು ಸಾಂವಿಧಾನಿಕ ಹಕ್ಕಾದ ಮಾಹಿತಿ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ತರಲು ಸಹಕರಿಸಬೇಕು ಎಂದು ಮಾಹಿತಿ ಆಯುಕ್ತರು ಕಿವಿಮಾತು ಹೇಳಿದರು. ಸರ್ಕಾರಿ ಇಲಾಖೆಗಳ ವಿವಿಧ ಕಚೇರಿಗಳಲ್ಲಿ ಸಾರ್ವಜನಿಕರಿಂದ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದ ಅವರು, ದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಶ್ಲಾಘಿಸಿದರು. ಅದರಂತೆ ಅದಕ್ಷತೆಯಿಂದ ಹಾಗೂ ಬೇಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ವಿರುದ್ಧ ಸೂಕ್ತ
ಕ್ರಮ ಸಹ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಯಾವುದೇ ಸರ್ಕಾರಿ ಇಲಾಖೆಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ಅನುಷ್ಠಾನದಲ್ಲಿ ಸರಳ ಹಾಗೂ ಸುಲಭ ರೀತಿಯಲ್ಲಿ ಅರ್ಥವಾಗುವಂತೆ ರಚಿಸಲಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳು ಅನಗತ್ಯವಾಗಿ ನಿರ್ಲಕ್ಷ್ಯಾ ತೋರಿದಲ್ಲಿ ಶಿಸ್ತು ಕ್ರಮದ ಜೊತೆಗೆ, ಇಲಾಖೆಗಳಿಗೆ ಸೂಕ್ತ ಪರಿಹಾರ ಒದಗಿಸಲು ನಿರ್ದೇಶಿಸಬಹುದಾಗಿದೆ. ಹೀಗಾಗಿ ಸಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ಪೂರೈಸುವ
ಮೂಲಕ ದಂಡ ಮತ್ತು ಇತರೆ ಕ್ರಮಕ್ಕೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಸರ್ಕಾರಿ ಇಲಾಖೆಗಳು ಸ್ವಯಂ ಪ್ರೇರಿತವಾಗಿ ತಮ್ಮ ಕಚೇರಿಗೆ ಸಂಬಂಧಿತ ಮಾಹಿತಿಯನ್ನು ಕಚೇರಿಯ ಅಂತರ್ಜಾಲ, ಸಮೂಹ ಮಾಧ್ಯಮ ಹಾಗೂ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು. ಅಧಿಕಾರಿಗಳು ಕೂಡ ತಮ್ಮ ಕಚೇರಿ ವ್ಯವಸ್ಥೆಯಲ್ಲಿ ಕಂಪ್ಯೂಟರೀಕರಣ ಇನ್ನಷ್ಟು ಚುರುಕುಗೊಳಿಸಿದರೆ ಪಾರದರ್ಶಕ ಆಡಳಿತದ ಜೊತೆಗೆ ಸಾರ್ವಜನಿಕರಿಗೆ ಸಕಾಲಕ್ಕೆ ಮಾಹಿತಿ ಪೂರೈಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದ್ದಲಿ ಸೂಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಅಧಿಕಾರಿಗಳೂ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು. ಕಡತ ಲಭ್ಯವಿಲ್ಲ ಎಂಬ ಕಾರಣ ನೀಡಿ ಅರ್ಜಿದಾರರಿಗೆ ಮಾಹಿತಿ ಹಕ್ಕಿನಿಂದ ಅವಕಾಶ ವಂಚಿತರನ್ನಾಗಿ ಮಾಡಬಾರದು ಎಂದು ಸೂಚನೆ ನೀಡಿದರು.
 
ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ, ಎಸ್ಪಿ ಪ್ರಕಾಶ ನಿಕ್ಕಂ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ| ಸಬಿಹಾ ಭೂಮಿಗೌಡ, ಜಿಪಂ ಉಪ ಕಾರ್ಯದರ್ಶಿ ದುಗೇಶ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು. 

ಟಾಪ್ ನ್ಯೂಸ್

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.