ಪಾಕ್ ವಿರುದ್ಧದ 1971ರ ಲೋಂಗೇವಾಲಾ ಸಮರದ ಹೀರೋ ವಿಧಿವಶ
Team Udayavani, Nov 17, 2018, 5:12 PM IST
ಚಂಡೀಗಢ : 1971ರಲ್ಲಿ ಪಾಕಿಸ್ಥಾನದ ವಿರುದ್ಧ ನಡೆದಿದ್ದ ಲೋಂಗೇವಾಲಾ ಸಮರದಲ್ಲಿ ಎಂಟೆದೆಯ ಹೀರೋ ಆಗಿ ಮೂಡಿ ಬಂದಿದ್ದ ಬ್ರಿಗೇಡಿಯರ್ (ನಿವೃತ್ತ) ಕುಲದೀಪ್ ಸಿ,ಗ್ ಚಾಂದ್‌ಪುರಿ ಅವರು ತಮ್ಮ 78ರ ಹರೆಯದಲ್ಲಿ ಇಂದು ಶನಿವಾರ ನಿಧನ ಹೊಂದಿದರು.
ಕ್ಯಾನ್ಸರ್ ಪೀಡಿತರಾಗಿದ್ದ ಬ್ರಿಗೇಡಿಯರ್ ಚಾಂದ್‌ಪುರಿ ಅವರು ಇಂದು ನಸುಕಿನ ವೇಳೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.
ಬ್ರಿಗೇಡಿಯರ್ ಚಾಂದ್‌ಪುರಿ ಅವರು 1962ರಲ್ಲಿ ಭಾರತೀಯ ಸೇನೆಯನ್ನು ಸೇರಿಕೊಂಡಿದ್ದರು. ಅವರನ್ನು ಪಂಜಾಬ್ ರೆಜಿಮೆಂಟ್‌ನ 23ನೇ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು. ವಿಶ್ವಸಂಸ್ಥೆಯ ಹಲವಾರು ಶಾಂತಿ ಪಡೆ ಅಭಿಯಾನದಲ್ಲಿ ದುಡಿದಿದ್ದ ಅವರು 1971ರಲ್ಲಿ ನಡೆದಿದ್ದ ಪಾಕ್ ವಿರುದ್ಧದ ಸಮರದಲ್ಲಿ ಲೋಂಗೇವಾಲಾ ಠಾಣೆಯನ್ನು ಎಂಟೆದೆಯ ಸಾಹಸದ ಹೋರಾಟದಲ್ಲಿ ಬೃಹತ್ ಸಂಖ್ಯೆಯಲ್ಲಿದ್ದ ಶತ್ರುಗಳ ವಶವಾಗದಂತೆ ಯಶಸ್ವಿಯಾಗಿ ರಕ್ಷಿಸಿದ್ದರು.
ಇವರ ಅಪ್ರತಿಮ ಹೋರಾಟದ ಕಥೆಯನ್ನು ಆಧರಿಸಿ “ಬಾರ್ಡರ್’ ಹಿಂದಿ ಸಿನೇಮಾ ಮಾಡಲಾಗಿತ್ತು. ಅದರಲ್ಲಿ ಸನ್ನಿ ದೇವಲ್ ಅವರು ಬ್ರಿಗೇಡಿಯರ್ ಚಾಂದ್‌ಪುರಿ ಪಾತ್ರವನ್ನು ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.