ಕೇರಳದ ಲೇಬರ್ ಪಬ್ಲಿಕ್ ಶಾಲೆಗೆ ಸಮಗ್ರ ಪ್ರಶಸ್ತಿ ಗರಿ
Team Udayavani, Nov 17, 2018, 5:13 PM IST
ದಾವಣಗೆರೆ: ತೋಳಹುಣಸೆ (ದಾವಣಗೆರೆ ತಾಲೂಕು) ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿಯುತ ಶಾಲಾ ಮೈದಾನದಲ್ಲಿ ಶುಕ್ರವಾರ ಮುಕ್ತಾಯ ಗೊಂಡ 23ನೇ ರಾಷ್ಟ್ರ ಮಟ್ಟದ ಸಿಬಿಎಸ್‌ಇ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೇರಳದ ಮುರುಗನಾಥಪಲ್ಲಿಯ ಲೇಬರ್ ಪಬ್ಲಿಕ್ ಶಾಲೆ ಒಟ್ಟಾರೆ 51 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿದೆ.
ಮೈಸೂರಿನ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯ ಎಚ್.ಎಸ್. ಹರ್ಷಿತಾ 14 ವರ್ಷದೊಳಗಿನ ಬಾಲಕಿಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 100 ಮೀಟರ್ ವಿಭಾಗದಲ್ಲಿ ಹರ್ಷಿತಾ ತೃತೀಯ ಸ್ಥಾನ ಪಡೆದರು.
19 ವರ್ಷದ ಬಾಲಕಿಯರ ವಿಭಾಗದ ಶಾಟ್ ಪುಟ್‌ನಲ್ಲಿ ಜೆಮ್‌ಷೆಡ್‌ಪುರದ ಪಬ್ಲಿಕ್ ಶಾಲೆಯ ವಿ .ರಾವಲ್, 14 ವರ್ಷದ ಬಾಲಕರ ವಿಭಾಗ ಶಾಟ್‌ಪುಟ್‌ನಲ್ಲಿ ಸೋನಾಪತ್‌ನ ಪ್ರತಾಪ್ ಮೆಮೋರಿಯಲ್ ಶಾಲೆಯ ನಿಖೀಲೇಶ್, 17 ವರ್ಷದ ಬಾಲಕರ ವಿಭಾಗದಲ್ಲಿ ಯಮುನಾ ನಗರದ ಡಿ.ಎ.ವಿ. ಸಧುರಾ ಯಮುನಾ ನಗರ ಶಾಲೆಯ ಅರ್ಜುನ್ ಪ್ರಥಮ ಸ್ಥಾನ ಪಡೆದಿದ್ದಾರೆ.
19 ವರ್ಷದ ಬಾಲಕರ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಶ್ರೀ ಗುರುಹರಿಕೃಷ್ಣನ್ ಪಬ್ಲಿಕ್ ಶಾಲೆಯ ಜೇಸ್‌ಕರಣ್ ಸುರತ್‌ಸಿಂಗ್ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. 14 ವರ್ಷದ ಬಾಲಕಿಯರ ವಿಭಾಗದಲ್ಲಿ ಚೈನ್ನೈನ ಪಿಎಸ್‌ಬಿಬಿ ಸೀನಿಯರ್ ಸೆಕೆಂಡರಿ ಸ್ಕೂಲ್ 24 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿದೆ. 17 ವರ್ಷದ ಬಾಲಕಿಯರ ವಿಭಾಗದಲ್ಲಿ ಕೇರಳದ ಭವಾನಸ್ ವಿದ್ಯಾಮಂದಿರ್(20 ಅಂಕ), 19 ವರ್ಷದ ಬಾಲಕಿಯರ ವಿಭಾಗದಲ್ಲಿ ರಾಜಸ್ಥಾನದ ಭಿವಾಂಡಿಯ ಮಾರ್ಡನ್ ಪಬ್ಲಿಕ್ ಶಾಲೆ (38 ಅಂಕ), 14 ವರ್ಷದ ಬಾಲಕರ ವಿಭಾಗದಲ್ಲಿ ಜಾರ್ಖಂಡ್‌ನ ರಾಂಚಿಯ ಡಿ.ಎ.ವಿ. ನಂದರಾಜ ಪಬ್ಲಿಕ್ ಶಾಲೆ (21 ಅಂಕ), 17 ವರ್ಷದ ಬಾಲಕರ ವಿಭಾಗದಲ್ಲಿ ಉತ್ತರಖಾಂಡ್‌ನ ಮೇರಿಪಿರಿ ಖಾಲ್ಸಾ ಎಸಿಎ ಸ್ಕೂಲ್ (16 ಅಂಕ), 19 ವರ್ಷದ ಬಾಲಕರ
ವಿಭಾಗದಲ್ಲಿ ಕೇರಳದ ಮುರುಗನಾಥಪಲ್ಲಿಯ ಲೇಬರ್ ಪಬ್ಲಿಕ್ ಶಾಲೆ (20 ಅಂಕ), 19 ವರ್ಷದ ಬಾಲಕಿಯರ ವಿಭಾಗದಲ್ಲಿ
ಪಂಜಾಬ್‌ನ ಖೈಲಾದ ಬಾಬಾಸಿಂಗ್ ಸ್ಕೂಲ್ 20 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದಿವೆ.
ಸಮಾರೋಪದಲ್ಲಿ ಮಾತನಾಡಿದ ಶಾಲೆಯ ನಿರ್ದೇಶಕ ಕೆ. ಇಮಾಂ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಕೈಗಾರಿಕೋದ್ಯಮಿ ಅಭಿಜಿತ್ ಗಣೇಶ್. ಸ್ವಾತಿ ಅಭಿಜಿತ್, ಕ್ರೀಡಾಕೂಟದ ವೀಕ್ಷಕ ಸಂಜಯ್ ಚೌವ್ಹಾಣ್, ಅಂತಾರಾಷ್ಟ್ರೀಯ ವೀಕ್ಷಕರಾದ ವಿಶ್ವನಾಥ್, ರುದ್ರಪ್ಪ ಇತರರು ಇದ್ದರು. ಮಂಜುನಾಥ ರಂಗರಾಜು ಸ್ವಾಗತಿಸಿದರು. ಶಾಲೆಯ ಪ್ರಾಚಾರ್ಯೆ ಜೆ. ಎಸ್. ವನಿತಾ ವಂದಿಸಿದರು.
ಸಿಬಿಎಸ್‌ಇ ಶಾಲೆಗಳ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಕರ್ನಾಟಕದಲ್ಲಿ ಮೊದಲ ಬಾರಿಗೆ, ದಕ್ಷಿಣ ಭಾರತದಲ್ಲಿ ಎರಡನೇ ಬಾರಿಗೆ ನಡೆದಿದೆ. ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ಸಿ.ಬಿ.ಎಸ್.ಇ ಒಳಪಡುವ 7 ದೇಶಗಳ 4 ಸಾವಿರ ಕ್ರೀಡಾಪಟುಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.