ಮಧುಮೇಹಿಗಳಿಗೆ,ಸಹಜೀವಿಗಳಿಗೆ:ಮಾರ್ಗಸೂಚಿ


Team Udayavani, Nov 18, 2018, 6:00 AM IST

ravi.jpg

“”ಮಧುಮೇಹ ನಿಯಂತ್ರಣ: 
ಮಧುರ ಜೀವನಕ್ಕೆ ಆಮಂತ್ರಣ”

ಪ್ರಸ್ತುತ ಮಧುಮೇಹವನ್ನು ಗುಣಪಡಿಸಲು ಯಾವುದೇ ಚಿಕಿತ್ಸೆ ಲಭ್ಯವಿಲ್ಲ. ಆದರೆ ಜೀವನಶೈಲಿ (ಪಥ್ಯಾಹಾರ, ದೈಹಿಕಚಟುವಟಿಕೆ/ವ್ಯಾಯಾಮ, ಒತ್ತಡ ನಿರ್ವಹಣೆ), ಔಷಧಗಳ ಬದ್ಧತೆ ಮತ್ತು ನಿಯಮಿತ ತಪಾಸಣೆಯಿಂದ ನಿಯಂತ್ರಣದಲ್ಲಿಡಬಹುದು ಮತ್ತು ಮಧುಮೇಹದಿಂದ ಬರಬಹುದಾದ ಸಂಭಾವ್ಯ ತೊಂದರೆಗಳನ್ನು ತಡೆಗಟ್ಟಬಹುದು ಅಥವಾ ಮುಂದೂಡಬಹುದು.   

ಮಧುಮೇಹ ಚಿಕಿತ್ಸೆಯ 
ಪ್ರಮುಖ ಉದ್ದೇಶಗಳೇನು?

1 ರಕ್ತದಲ್ಲಿ ಗುÉಕೋಸ್‌ ಅಂಶವನ್ನು ನಿಯಂತ್ರಣದಲ್ಲಿಡುವುದು.
2ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು.
3ರಕ್ತದಲ್ಲಿ ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಣದಲ್ಲಿಡುವುದು.
4 ಉತ್ಕೃಷ್ಟ ಗುಣಮಟ್ಟದ ಜೀವನ ಮತ್ತು ಆರೋಗ್ಯಕರ ಮನಸ್ಸು-ಸಾಮಾಜಿಕ ಜೀವನವನ್ನು ಕಾಪಾಡುವುದು.

ಆದರೆ ಈ ಮಾನದಂಡಗಳು ವ್ಯಕ್ತಿಯ ದೇಹಸ್ಥಿತಿ, ವಯಸ್ಸಿಗನುಗುಣವಾಗಿ ಬದಲಾಗಬಹುದು. ಹಾಗಾಗಿ ಮಧುಮೇಹದೊಂದಿಗೆ ಜೀವಿಸುವವರ ಮಾನದಂಡವನ್ನು ಅವರವರ ವೈದ್ಯರು ನಿರ್ಧರಿಸುತ್ತಾರೆ.

ಉತ್ತಮ ಜೀವನಶೈಲಿ 
ಯಾಕೆ ಅವಶ್ಯ?

ಜೀವನಶೈಲಿಯ ಭಾಗವಾದ ಆಹಾರ, ವಿಹಾರ, ವಿಚಾರ ಮತ್ತು ವಿಶ್ರಾಂತಿ ಮಧುಮೇಹದ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ತಮ ಜೀವನ ಶೈಲಿಯ ನಿರ್ವಹಣೆ ಮಧುಮೇಹದ ಸ್ವಯಂ-ಆರೈಕೆಯ ಪ್ರಮುಖ ಭಾಗ ಕೂಡ. ಜೀವನ ಶೈಲಿಯ ಭಾಗವಾದ ಉತ್ತಮ ಆಹಾರ ಕ್ರಮ, ನಿಯಮಿತ ವ್ಯಾಯಾಮ/ದೈಹಿಕ ಚಟುವಟಿಕೆ ಹಾಗೂ ಒತ್ತಡ ನಿರ್ವಹಣೆಯನ್ನು ನಿಯಮಿತ ದಿನಚರಿಯೊಂದಿಗೆ ಅದರ ನಿರಂತರ ಪಾಲನೆಯಿಂದ ಸಾಧಿಸಿದಾಗ ಮಾತ್ರ ಮಧುಮೇಹ ನಿಯಂತ್ರಣ ಸಾಧ್ಯ. ಉತ್ತಮ ಜೀವನಶೈಲಿಯ ನಿರ್ವಹಣೆಗೆ ಸ್ವಯಂಬದ್ಧತೆ, ಉತ್ತಮ ಪರಿಸರ, ಇತರರ ಉತ್ತೇಜನ ಪ್ರಮುಖವಾಗಿರುತ್ತದೆ. ಉತ್ತಮ ಜೀವನಶೈಲಿ ಉತ್ಕೃಷ್ಟ ದೈಹಿಕ ಮತ್ತು ಮಾನಸಿಕ ಆರೋಗ್ಯದೊಂದಿಗೆ ಜೀವನದಲ್ಲಿ ಲವಲವಿಕೆ, ಧನಾತ್ಮಕವಾದ ಚಿಂತನೆ ಮತ್ತು ಆತ್ಮಸ್ಥೆçರ್ಯವನ್ನು ಹೆಚ್ಚಿಸುತ್ತದೆ. ಇದು ಮಧುಮೇಹದಿಂದ ಜೀವಿಸುವರಿಗೆ ಮಾತ್ರವಲ್ಲದೆ ಸರ್ವೇಸಾಮಾನ್ಯ ಎಲ್ಲರಿಗೂ ಅವಶ್ಯ ಮತ್ತು ಅನ್ವಯ.

ಮಧುಮೇಹ ನಿಯಂತ್ರಣದಲ್ಲಿ 
ಜೀವನಶೈಲಿಯ ಯಾವ ಯಾವ 
ಅಂಶಗಳು ಪ್ರಮುಖವಾಗಿರುತ್ತವೆ?

ಮಧುಮೇಹ ನಿಯಂತ್ರಣದಲ್ಲಿ ಪಥ್ಯಾಹಾರ, ವ್ಯಾಯಾಮ, ದೈಹಿಕ ಚಟುವಟಿಕೆಗಳು ಮತ್ತು ಒತ್ತಡ ನಿರ್ವಹಣೆ ನಮ್ಮ ಜೀವನಶೈಲಿಯಲ್ಲಿನ ಪ್ರಮುಖ ಅಂಶಗಳಾಗಿರುತ್ತವೆ. ಸೂಕ್ತ ಮಾರ್ಗದರ್ಶನದೊಂದಿಗೆ ನಿಗದಿತ ಪ್ರಮಾಣದಲ್ಲಿ ಇವುಗಳನ್ನು ನಿತ್ಯಕ್ರಮದಲ್ಲಿ ಅಳವಡಿಸಿಕೊಂಡರೆ ಮಧುಮೇಹದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ.

ಮಧುಮೇಹ ನಿಯಂತ್ರಣದಲ್ಲಿ 
ಪಥ್ಯಾಹಾರದ ಪ್ರಾಮುಖ್ಯವೇನು? 

“”ಅಹಂ ಅನ್ನಂ ಅಹಂ ಅನ್ನಂ …” ಎಂಬ ಉಪನಿಷತ್ತಿನ ಉಕ್ತಿಯ ಭಾವಾನುವಾದದಂತೆ ನಾವು ತಿನ್ನುವ ಆಹಾರವನ್ನು ಗೌರವಿಸಿ ನಮ್ಮ ದೇಹ ಪ್ರಕೃತಿಗನುಗುಣವಾಗಿ ಆಹಾರದ ಆಯ್ಕೆ ಮಾಡಿ ಆಹಾರದ ಪ್ರಮಾಣವನ್ನು ನಿರ್ಧರಿಸಿ ಆಹಾರವನ್ನು ಸೇವಿಸಿದಾಗ ದೈಹಿಕವಾಗಿ ಮಾನಸಿಕವಾಗಿ ಆರೋಗ್ಯದಲ್ಲಿ ಉತ್ತಮ ಫ‌ಲಿತಾಂಶ ಹೊರಹೊಮ್ಮುವುದು. ಹಾಗೆ ನಾವೇನು ತಿನ್ನುತ್ತೇವೊ ಅದೇ ನಾವಾಗಿರುತ್ತೇವೆ.

ಮಧುಮೇಹದೊಂದಿಗೆ ಜೀವಿಸುತ್ತಿರುವವರಿಗೆ ರಕ್ತದಲ್ಲಿ ಗುÉಕೋಸ್‌ ಅಂಶವನ್ನು ನಿಯಂತ್ರಿಸಲು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ ಮಟ್ಟವನ್ನು ಕಾಪಾಡಲು, ದೇಹದ ತೂಕದ ನಿರ್ವಹಣೆಗೆ, ದೀರ್ಘ‌ಕಾಲಿಕ ಸಂಭಾವ್ಯ ತೊಂದರೆಗಳನ್ನು ತಡೆಗಟ್ಟಲು ಅಥವ ಮುಂದೂಡಲು, ಉತ್ತಮ ಆರೋಗ್ಯಕ್ಕಾಗಿ ಹಾಗು ಸಾಮಾನ್ಯ ಯೋಗ-ಕ್ಷೇಮಕ್ಕಾಗಿ ಪಥ್ಯಾಹಾರ ಅವಶ್ಯ. ಹಾಗಾಗಿ ಮಧುಮೇಹದೊಂದಿಗೆ ಜೀವಿಸುವವರು ದಿನನಿತ್ಯದ ಆಹಾರ ಸೇವನೆಗೆ ಪಥ್ಯಾಹಾರದ ಯೋಜನೆಯೊಂದನ್ನು ಮಾಡುವ ಯೋಚನೆ ಮಾಡಿ ಅದನ್ನು ನಿಯಮಿತವಾಗಿ ಪಾಲಿಸುವುದು ಅತಿ ಅವಶ್ಯ.

ಪಥ್ಯಾಹಾರದ ಯೋಜನೆ ಯಾಕೆ 
ಬೇಕು ಮತ್ತು ಅದು ಏನೇನೆಲ್ಲ 
ಒಳಗೊಂಡಿರುತ್ತದೆ?

ದಿನನಿತ್ಯದ ಆಹಾರದ ಆಯ್ಕೆ, ಪ್ರಮಾಣ ಮತ್ತು ಸಮಯನ್ನು ನಿರ್ಧರಿಸಲು ಯೋಜನೆ ಅಗತ್ಯ. ಯೋಜನೆ ವ್ಯಕ್ತಿಯ ಆರೋಗ್ಯ, ದೈಹಿಕ ಚಟುವಟಿಕೆ, ಇಷ್ಟಪಡುವ ಆಹಾರ, ಮತ್ತು ಕೆಲಸದ ವೇಳಾಪಟ್ಟಿಯನ್ನೊಳಗೊಂಡಿರಬೇಕು.

ಆಹಾರದ ಆಯ್ಕೆ: ಭಾರತೀಯ ಆಹಾರ ಮಾದರಿಗನುಗುಣವಾಗಿ ಅಳವಡಿಸಿಕೊಂಡ ಚೆನ್ನಾಗಿ ತಿನ್ನುವ (ಈಟ್‌-ವೆಲ್‌) ಮಾರ್ಗದರ್ಶಿಯನ್ವಯ ನಮ್ಮ ಒಟ್ಟು ಆಹಾರದ 40 ಶೇಕಡದಷ್ಟು ಹಣ್ಣು ತರಕಾರಿ, 38 ಶೇಕಡದಷ್ಟು ಅಕ್ಕಿ, ರಾಗಿ, ಗೋಧಿ, ಸಿರಿ ಧಾನ್ಯ, ಗಡ್ಡೆ ಗೆಣಸುಗಳು ಇತ್ಯಾದಿ, 12 ಶೇಕಡದಷ್ಟು ದ್ವಿದಳ ಧಾನ್ಯ, ಬಿಳಿ ಮೊಟ್ಟೆ, ಮೀನು ಇತ್ಯಾದಿ, 8 ಶೇಕಡದಷ್ಟು ಹೈನು ಉತ್ಪನ್ನ ಹಾಗು ಕೇವಲ 2 ಶೇಕಡದಷ್ಟು ಎಣ್ಣೆ ಅಂಶ ನಮ್ಮ ಊಟದ ತಟ್ಟೆಯ ವಿವಿಧ ಭಾಗವಾಗಿರಬೇಕು. ಅತಿ ಹೆಚ್ಚು ವಿಧವಿಧದ ತರಕಾರಿ ನಮ್ಮ ತಟ್ಟೆಯ ಭಾಗವಾಗಿರಬೇಕು. 

ತರಕಾರಿಗಳ ಆಯ್ಕೆ: ಹಸಿರು ತರಕಾರಿ, ನಾರಿನ ತರಕಾರಿ, ನೀರಿನ ಅಂಶವಿರುವ ತರಕಾರಿಗಳಾದ ಮೆಂತೆ ಸೊಪ್ಪು, ಹರಿವೆ ಸೊಪ್ಪು, ಬಸಳೆ ಸೊಪ್ಪು, ಪಾಲಕ್‌ ಸೊಪ್ಪು, ಶತಾವರಿ, ಬೊÅಕೋಲಿ, ಅಣಬೆ, ಎಲೆ ಕೋಸು, ಅಲಸಂಡೆ, ಬೀನ್ಸ್‌/ಹುರುಳಿಕೋಡು, ತೊಂಡೆಕಾಯಿ, ಪಡುವಲಕಾಯಿ, ಹಾಗಲಕಾಯಿ, ಹೀರೆಕಾಯಿ, ಬೆಂಡೆಕಾಯಿ, ಮುಳ್ಳುಸೌತೆಕಾಯಿ, ಕುಂಬಳಕಾಯಿ, ಸೌತೆಕಾಯಿ, ಗುಳ್ಳ/ಬದನೆಕಾಯಿ, ಟೊಮ್ಯಾಟೊ, ದೊಣ್ಣೆಮೆಣಸು, ಈರುಳ್ಳಿ, ಮೂಲಂಗಿ, ಕ್ಯಾರೆಟ್‌ಗಳನ್ನು ಸಾಕಷ್ಟು ಸೇವಿಸಿ.  

ಭೂಮಿಯ ಅಡಿಭಾಗದಲ್ಲಿ ಬೆಳೆಯುವ ಗಡ್ಡೆಗೆಣಸುಗಳಾದ ಆಲೂಗಡ್ಡೆ, ಮರಗೆಣಸು, ಬೀಟ್ರೂಟ್‌, ಕೆಸುವಿನ ಗಡ್ಡೆ, ಗೆಣಸು, ಸಾಂಬ್ರಾಣಿಗಳನ್ನು ಅದಷ್ಟು ಮಿತವಾಗಿ ಬಳಸುವುದು ಉತ್ತಮ.

ಹಣ್ಣುಗಳ ಆಯ್ಕೆ
ಪೇರಳೆ/ಸೀಬೆ ಕಾಯಿ, ನೆಲ್ಲಿ ಕಾಯಿ, ಜಾಮೂನು/ಜಂಬು ನೇರಳೆ, ಸಕ್ಕರೆಕಂಚಿ, ದಾಳಿಂಬೆ, ಧಾರೆ ಹುಳಿ (ಸ್ಟಾರ್‌ ಹಣ್ಣು), ಪಿಯರ್‌ ಹಣ್ಣು, ಕಿವಿ ಹಣ್ಣು, ಸೇಬು, ಕಿತ್ತಳೆ, ಮೂಸುಂಬಿ, ಪೈನಾಪಲ್‌, ಪಪ್ಪಾಯ, ಕಲ್ಲಂಗಡಿ ಹಣ್ಣುಗಳನ್ನು ರಕ್ತದಲ್ಲಿ ಗುÉಕೋಸ್‌ ನಿಯಂತ್ರಣದಲ್ಲಿರುವಾಗ ದಿನವೊಂದಕ್ಕೆ 100 ಗ್ರಾಮ್‌ ತೆಗೆದುಕೊಳ್ಳಬಹುದು. ಒಳಹಣ್ಣುಗಳಾದ ಬಾದಾಮಿ ಮತ್ತು ಆಕ್ರೋಟ್‌ ಸೇವನೆ ಉತ್ತಮ ಆಯ್ಕೆ.

ಹಲಸಿನಹಣ್ಣು, ಮಾವಿನಹಣ್ಣು, ಬಾಳೆಹಣ್ಣು, ದ್ರಾಕ್ಷಿ, ಚಿಕ್ಕು, ಸೀತಾಫ‌ಲ ಹಾಗು ಒಣದ್ರಾಕ್ಷಿ, ಖರ್ಜೂರವನ್ನು ಕಡಿಮೆ ಅಥವಾ ತಿನ್ನದೇ ಇರುವುದು ಉತ್ತಮ.

– ಮುಂದಿನ ವಾರಕ್ಕೆ

– ಪ್ರಭಾತ್‌ ಕಲ್ಕೂರ ಎಂ., 
ಯೋಜನಾ ನಿರ್ವಾಹಕರು, ವಿಶ್ವ ಮಧುಮೇಹ ಪ್ರತಿಷ್ಠಾನ,
ಸ್ಕೂಲ್‌ ಆಫ್ ಅಲೈಡ್‌ ಹೆಲ್ತ್‌ ಸೈನ್ಸಸ್‌, ಮಣಿಪಾಲ

ಟಾಪ್ ನ್ಯೂಸ್

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.