ವಾರ್ಡ್‌ಗೊಂದು ಪಾರ್ಕ್: ನಗರಯೋಜನೆಯ ಕಾರ್ಯಸೂಚಿಯಾಗಲಿ
Team Udayavani, Nov 18, 2018, 12:56 PM IST
ನಗರಜೀವನದ ಮೂಲ ಆವಶ್ಯಕತೆಗಳಲ್ಲೊಂದಾಗಿದೆ. ಇಕ್ಕಟ್ಟಿನ ಮತ್ತು ದಟ್ಟನೆಯ ವಾತಾವರಣದಿಂದ ಉದ್ಯಾನವನಗಳು ಒಂದಷ್ಟು ಹೊತ್ತು ಆರಾಮದಾಯಕವಾಗಿ ಕಳೆಯಲು ಆಹ್ಲಾದಕರ ವಾತಾವರಣ ಒದಗಿಸುತ್ತದೆ ಮಾತ್ರವಲ್ಲದೆ ನಗರದ ಸೌಂದರ್ಯ ಹಾಗೂ ವರ್ಚಸ್ಸನ್ನು ಕೂಡ ಹೆಚ್ಚಿಸುತ್ತದೆ. ಅನೇಕ ಉದ್ಯಾನವನಗಳು ಈಗಲೂ ನಮ್ಮ ದೇಶದಲ್ಲಿ ಜನಾಕರ್ಷಣೆಯ ಕೇಂದ್ರಗಳಾಗಿ ಉಳಿದುಕೊಂಡಿವೆ. ದೇಶದ ಆನೇಕ ನಗರಗಳು ಉದ್ಯಾನವನಗಳಿಂದಲೇ ಗುರುತಿಸಿಕೊಂಡಿವೆ. ಬೆಂಗಳೂರು ಉದ್ಯಾನವನಗಳ ನಗರವೆಂಬ ಪ್ರತೀತಿ ಪಡೆದುಕೊಂಡಿದೆ. ಆದರೆ ಕಡಲತಡಿಯ, ತೆಂಗಿನ ಮರಗಳ ನಗರ ಮಂಗಳೂರು ಉದ್ಯಾನವನ ಸೌಲಭ್ಯಗಳಲ್ಲಿ ಬಹಳಷ್ಟು ಹಿಂದುಳಿದಿದೆ.
ಅಭಿವೃದ್ಧಿ ಭರಾಟೆಯಲ್ಲಿ ನಗರಗಳಲ್ಲಿ ಹಸಿರು ಪರಿಸರ ಮರೆಯಾಗುತ್ತಿದೆ. ಉದ್ಯಾನವನಗಳ ಜಾಗಗಳು ಒತ್ತುವರಿಯಾಗಿವೆ ಇಲ್ಲವೆ ಅನ್ಯ ಉದ್ದೇಶಗಳಿಗೆ ಬಳಕೆಯಾಗಿವೆ. ಪರಿಣಾಮ ನಗರ ನಿವಾಸಿಗಳಿಗೆ ವಿರಾಮ ಮತ್ತು ವ್ಯಾಯಾಮಕ್ಕೆ ಸಾರ್ವಜನಿಕ ಪ್ರದೇಶದ ಕೊರತೆ ಕಾಡುತ್ತಿದೆ. ಕೆಲಸ ಕಾರ್ಯಗಳ ಒತ್ತಡಗಳ ನಡುವೆ ಒಂದಷ್ಟು ಹೊತ್ತು ಹೊರಗಡೆ ಮುಕ್ತ ತಾಣದಲ್ಲಿ ಕಾಲ ಕಳೆಯುವ ತಾಣಗಳ ಅವಶ್ಯಕತೆ ಇದೆ.
ಪ್ರಸ್ತುತ ಇರುವ ಕೆಲವೇ ಕೆಲವು ಉದ್ಯಾನವನಗಳಿಗೆ ದಿನನಿತ್ಯವೂ ಹೋಗಲು ಸಾಧ್ಯವಾಗುವುದಿಲ್ಲ. ತಾವು ವಾಸಿಸುವ ಪ್ರದೇಶದ ಸುತ್ತಮುತ್ತ ಒಂದು ತಾಣ ದೊರಕಿದರೆ ವಿರಾಮದ ಜತೆಗೆ ವಾಕಿಂಗ್ ಸೇರಿದಂತೆ ಲಘು ವ್ಯಾಯಾಮ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಗರದ ಎಲ್ಲ ವಾರ್ಡ್‌ಗಳಲ್ಲೂ ಕಿರು ಉದ್ಯಾನವನಗಳ ನಿರ್ಮಾಣ ಪೂರಕವಾಗುತ್ತದೆ. ಕನಿಷ್ಠ ವಾರ್ಡ್‌ಗೊಂದಾದರೂ ಉದ್ಯಾನವನ ನಿರ್ಮಾಣ, ನಗರ ಯೋಜನೆಗೆ ಕಾರ್ಯಸೂಚಿಗಳಲ್ಲಿ ಪ್ರಾಮುಖ್ಯತೆಯನ್ನು ನೀಡಿದರೆ ಇದು ನಗರದ ಸೌಂದರ್ಯ ಮತ್ತು ಸ್ವಾಸ್ಥ್ಯ ಸಂರಕ್ಷಣೆಗೆ ಪೂರಕವಾಗಬಲ್ಲುದು.
ಆವಶ್ಯಕತೆಗಳಲ್ಲೊಂದು
ವಸತಿ ಸಂಕೀರ್ಣಗಳ ಸಂಸ್ಕೃತಿಯ ಸಂಕೀರ್ಣ ಬದುಕಿನ ಜಂಜಾಟದಲ್ಲಿ ನಗರವಾಸಿಗಳಲ್ಲಿ ಇದೀಗ ಮತ್ತೇ ಉದ್ಯಾನವನಗಳ ಪ್ರಾಮುಖ್ಯತೆ ಬಗ್ಗೆ ಹೆಚ್ಚು ಜಾಗೃತಿ ಮೂಡುತ್ತಿದೆ. ಖಾಲಿ ಇರುವ ಸಾರ್ವಜನಿಕ ಜಾಗಗಳನ್ನು ಬಳಸಿಕೊಂಡು ಪುಟ್ಟ ಉದ್ಯಾನವನಗಳನ್ನು ನಿರ್ಮಿಸುವ ಕಾರ್ಯ ಕೆಲವು ಕಡೆ ನಡೆಯುತ್ತಿವೆ. ಸಣ್ಣ ವಾಕಿಂಗ್ ಟ್ರ್ಯಾಕ್‌ಗಳನ್ನು ನಿರ್ಮಿಸಿ ಸಂಜೆ, ಬೆಳಗಿನ ಹೊತ್ತು ಸ್ಥಳೀಯ ನಿವಾಸಿಗಳಿಗೆ ಒಂದಷ್ಟು ಹೊತ್ತು ವಿರಾಮ, ವ್ಯಾಯಾಮಗಳಿಗೆ ಇವು ಉಪಯಕ್ತವಾಗಿ ಪರಿಣಮಿಸಿವೆ. ಇದೆ ಮಾದರಿಯನ್ನು ಮೂಲವಾಗಿಟ್ಟುಕೊಂಡು ಮಂಗಳೂರು ಪ್ರಸ್ತುತ ಕಾಲಘಟ್ಟದಲ್ಲಿ ಉದ್ಯಾನವನಗಳು ಕಾಲಹರಣ ತಾಣಗಳಲ್ಲ. ಬದಲಿಗೆ ನಗರಜೀವನದ ಮೂಲ ಆವಶ್ಯಕತೆಗಳಲ್ಲೊಂದಾಗಿದೆ. ಇಕ್ಕಟ್ಟಿನ ಮತ್ತು ದಟ್ಟನೆಯ ವಾತಾವರಣದಿಂದ ಉದ್ಯಾನವನಗಳು ಒಂದಷ್ಟು ಹೊತ್ತು ಆರಾಮದಾಯಕವಾಗಿ ಕಳೆಯಲು ಆಹ್ಲಾದಕರ ವಾತಾವರಣ ಒದಗಿಸುತ್ತದೆ ಮಾತ್ರವಲ್ಲದೆ ನಗರದ ಸೌಂದರ್ಯ ಹಾಗೂ ವರ್ಚಸ್ಸನ್ನು ಕೂಡ ಹೆಚ್ಚಿಸುತ್ತದೆ.
ಪ್ರಾಚೀನ ಇತಿಹಾಸ
ಉದ್ಯಾನವನ ಪರಿಕಲ್ಪನೆಗೆ ಪ್ರಾಚೀನ ಇತಿಹಾಸವಿದೆ. ಪುರಾಣಗಳಲ್ಲೂ ಇವುಗಳ ಬಗ್ಗೆ ಉಲ್ಲೇಖವಿದೆ. ರಾಜ ಮಹಾರಾಜರುಗಳು ನಿರ್ಮಿಸಿರುವ ಅನೇಕ ಉದ್ಯಾನವನಗಳು ಈಗಲೂ ನಮ್ಮದೇಶದಲ್ಲಿ ಜನಾಕರ್ಷಣೆಯ ಕೇಂದ್ರಗಳಾಗಿ ಉಳಿದುಕೊಂಡಿವೆ. ದೇಶದ ಅನೇಕ ನಗರಗಳು ಉದ್ಯಾನವನಗಳಿಂದಲೇ ಗುರುತಿಸಿಕೊಂಡಿವೆ. ಬೆಂಗಳೂರು ಉದ್ಯಾನವನಗಳ ನಗರವೆಂಬ ಪ್ರತೀತಿ ಪಡೆದುಕೊಂಡಿದೆ. ಆದರೆ ಕಡಲತಡಿಯ, ತೆಂಗಿನ ಮರಗಳ ನಗರ ಮಂಗಳೂರು ಉದ್ಯಾನವನ ಸೌಲಭ್ಯಗಳಲ್ಲಿ ಬಹಳಷ್ಟು ಹಿಂದುಳಿದಿದೆ.
ವಾರ್ಡ್‌ಗೊಂದು ಪಾರ್ಕ್
ದೊಡ್ಡಗಾತ್ರದ ಉದ್ಯಾನವನಗಳಿಗೆ ಮಂಗಳೂರಿನಲ್ಲಿ ಜಾಗದ ಸಮಸ್ಯೆ ಇದೆ. ಇದಕ್ಕೆ ಪರ್ಯಾಯವಾಗಿ ಅಲ್ಲಲ್ಲಿ ಮಿನಿಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಮಂಗಳೂರು ನಗರ 60 ವಾರ್ಡ್‌ಗಳನ್ನು ಹೊಂದಿದೆ. ವಾರ್ಡ್ ಗಳಲ್ಲಿ ಕೆಲವು ಕಡೆ ಸಾರ್ವಜನಿಕ ಜಾಗಗಳು ತ್ಯಾಜ್ಯ ಹಾಗೂ ನಿರುಪಯುಕ್ತ ವಸ್ತುಗಳ, ಕಟ್ಟಡ ತ್ಯಾಜ್ಯಗಳ ಡಂಪಿಂಗ್ ತಾಣವಾಗಿವೆ. ಇವು ಪ್ರದೇಶದ ಆರೋಗ್ಯ ಮತ್ತು ಸ್ವಚ್ಛತೆಗೂ ಸವಾಲಾಗಿವೆ. ಅಂತಹ ಸ್ಥಳಗಳನ್ನು ಗುರುತಿಸಿ ಸ್ಥಳೀಯವಾಗಿ ದಾನಿಗಳ ನೆರವು ಪಡೆದುಕೊಂಡು ಮಿನಿಪಾರ್ಕ್ ನಿರ್ಮಿಸಿದರೆ ತ್ಯಾಜ್ಯ ಹಾಕುವ ಸಮಸ್ಯೆಯೂ ನಿವಾರಣೆಯಾಗುತ್ತದೆ. ಸ್ಥಳೀಯ ಜನರಿಗೆ ಆರಾಮ ಮತ್ತು ವ್ಯಾಯಾಮಕ್ಕೆ ಒಂದು ಉದ್ಯಾನವನವೂ ಲಭಿಸುತ್ತದೆ. ಜತೆಗೆ ವಾರ್ಡ್‌ನ ಸೌಂದರ್ಯವೂ ಹೆಚ್ಚುತ್ತದೆ. ಎಲ್ಲ ವಾರ್ಡ್‌ಗಳಲ್ಲೂ ಸೂಕ್ತ ಜಾಗ ಹುಡುಕಿ ಮಿನಿಪಾರ್ಕ್ ನಿರ್ಮಿಸುವುದು ಅಸಾಧ್ಯವಾದ ಕೆಲಸವೇನೂ ಅಲ್ಲ. ಆಯಾಯ ಭಾಗದ ಕಾರ್ಪೊರೇಟರ್‌ಗಳು, ಸಂಘ- ಸಂಸ್ಥೆಗಳು ಆಸಕ್ತಿ ವಹಿಸಿದರೆ ಇದು ಸಾಕಾರಗೊಳ್ಳಲು ಸಾಧ್ಯ.
ನೆರವು ಅಗತ್ಯ
ಇದಕ್ಕೆ ಮಹಾನಗರ ಪಾಲಿಕೆಯ ಅನುದಾನವನ್ನೇ ಅವಲಂಬಿಸಬೇಕಾದ ಆವಶ್ಯಕತೆಯೂ ಇರುವುದಿಲ್ಲ. ಉತ್ತಮ ಕಾರ್ಯಗಳಿಗೆ ದಾನಿಗಳ ಸ್ಪಂದನೆ ಖಂಡಿತವಾಗಿಯೂ ಇರುತ್ತಾರೆ. ಈಗಾಗಲೇ ಕೆಲವು ವಾರ್ಡ್ ಗಳಲ್ಲಿ ಮಿನಿ ಉದ್ಯಾನವನಗಳ ನಿರ್ಮಾಣ ದಾನಿಗಳ ನೆರವಿನಿಂದಲೇ ಆಗಿವೆ.
ಆಕರ್ಷಣೆ
ಬಿಜೈಯ ವಿವೇಕಾನಂದ ಮಿನಿ ಪಾರ್ಕ್, ಕರಂಗಲ್ಪಾಡಿ ಆರೈಸ್ ಆವೇಕ್ ಮಿನಿ ಪಾರ್ಕ್ ಇದಕ್ಕೊಂದು ಮಾದರಿಯಾಗಿವೆ. ಬಿಜೈಯಲ್ಲಿ ಬಹಳಷ್ಟು ವರ್ಷಗಳಿಂದ ಕಸದ ಕೊಂಪೆಯಾಗಿ ಬಳಕೆಯಾಗುತ್ತಿದ್ದ ಜಾಗ ಸ್ಥಳೀಯ ಕಾರ್ಪೊರೇಟರ್ ಹಾಗೂ ದಾನಿಗಳ ಆಸಕ್ತಿಯಿಂದ ಇಂದು ಆಕರ್ಷಕ ಮಿನಿ ಪಾರ್ಕ್ ಆಗಿ ರೂಪುಗೊಂಡಿದೆ. ಇಲ್ಲಿ ಪುಟಾಣಿಗಳಿಗೆ ಆಟವಾಡಲು ಒಂದಷ್ಟು ಜಾಗ ಮೀಸಲಿರಿಸಲಾಗಿದೆ. ಜತೆಗೆ ಹಿರಿಯ ನಾಗರಿಕರು ಒಂದಷ್ಟು ಹೊತ್ತು ಕುಳಿತು ಆರಾಮ ಪಡೆಯಲು ವ್ಯವಸ್ಥೆ ರೂಪಿಸಲಾಗಿದೆ. ಇಂತಹ ಪ್ರಯತ್ನಗಳು ನಗರದ ಎಲ್ಲ ವಾರ್ಡ್‌ಗಳಲ್ಲೂ ನಡೆದರೆ ಸ್ಥಳೀಯವಾಗಿ ನಿವಾಸಿಗಳಿಗೆ ಮಿನಿ ಪಾರ್ಕ್ ಲಭಿಸುತ್ತದೆ.
ಪ್ರಯೋಜನ ಸಿಗಲಿ
ಮಂಗಳೂರು ನಗರದಲ್ಲಿ 60 ವಾರ್ಡ್‌ಗಳಿಗೆ ಪ್ರಸ್ತುತ ಇರುವ ಪ್ರಧಾನ ಉದ್ಯಾನವನವೆಂದರೆ ಕದ್ರಿಪಾರ್ಕ್ ಮಾತ್ರ. ಪಿಲಿಕುಳ ನಿಸರ್ಗಧಾಮ ಉದ್ಯಾನವನದ ಪರಿಕಲ್ಪನೆಗಿಂತ ಪ್ರವಾಸಿ ಮತ್ತು ಶೈಕ್ಷಣಿಕ ತಾಣವಾಗಿ ಹೆಚ್ಚು ಗುರುತಿಸಿಕೊಂಡಿದೆ. ಇವುಗಳನ್ನು ಹೊರತುಪಡಿಸಿದರೆ ಪುರಭವನದ ಮುಂಭಾಗದ ಗಾಂಧಿ ಪಾರ್ಕ್, ಬಾವುಟಗುಡ್ಡೆಯ ಟಾಗೋರ್ ಪಾರ್ಕ್, ನೆಹರೂ ಮೈದಾನದ ಬಳಿ ಇರುವ ಕಾರ್ಪೊರೇಶನ್ ಬ್ಯಾಂಕ್ ಪ್ರವರ್ತಿತ ಉದ್ಯಾನವನ, ಮಣ್ಣ ಗುಡ್ಡ ಪಾರ್ಕ್, ವೆಲೆನ್ಸಿಯಾ ಸೇರಿದಂತೆ ಕೆಲವು ಕಿರು ಉದ್ಯಾನವನಗಳಿವೆ. ನಗರ ದಟ್ಟನೆ ಮತ್ತು ಪ್ರದೇಶ ವ್ಯಾಪ್ತಿಯನ್ನು ಪರಿಗಣಿಸಿದರೆ ಇವುಗಳ ಪ್ರಯೋಜನ ಸೀಮಿತವಾಗಿರುತ್ತದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.