ಹಾವಿನ ಕುರಿತ ಕತೆ, ಕಲ್ಪನೆ ವೈಚಾರಿಕ ಹಾದಿಯಲ್ಲಿ ಗ್ರಹಿಸಿ
Team Udayavani, Nov 18, 2018, 3:20 PM IST
ನೆಹರೂನಗರ: ನಾಗರಿಕತೆಯ ವಿವಿಧ ಮಜಲುಗಳಲ್ಲಿ ಹಾವಿನಂತಹ ಜೀವಿ ಜನಾಂಗದ ಪ್ರತೀಕವಾಗಿ, ದೇವರ ರೂಪದಲ್ಲಿ ಪೂಜೆಗೆ ಅರ್ಹವಾಗಿದೆ. ಹಾವಿನ ಬಗ್ಗೆ ರೋಚಕ ಕತೆಗಳು, ಪುರಾಣಗಳು, ಕಲ್ಪನೆಗಳು, ಮೂಢನಂಬಿಕೆಗಳು ಪ್ರಪಂಚದೆಲ್ಲೆಡೆ ಕಾಣಸಿಗುತ್ತವೆ. ಅವುಗಳನ್ನು ನಾವು ವಿಜ್ಞಾನ ಮತ್ತು ವೈಚಾರಿಕತೆಯ ಹಾದಿಯಲ್ಲಿ ಗ್ರಹಿಸಬೇಕು ಎಂದು ಶೇಷವನ ಚಾರಿಟೆಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ| ರವೀಂದ್ರನಾಥ ಐತಾಳ್ ಹೇಳಿದರು.
ಕನಸುಗಳು 2018 ಕಾರ್ಯಕ್ರಮದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಹಾವು-ನಾವು ಉಪನ್ಯಾಸ ಮತ್ತು ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಹಾವುಗಳು ನಾಶ ಆಗುತ್ತಿರುವುದಕ್ಕೆ ಮನುಷ್ಯನೇ ಕಾರಣ. ಕಾಡು ಪೊದೆಗಳ ನಾಶ, ಹೊಲ ಗದ್ದೆಗಳಲ್ಲಿ ರಾಸಾಯನಿಕ ಸಿಂಪಡಣೆ ಯಿಂದ ಹಾವುಗಳು ಪ್ರಾಣ ಕಳೆದು ಕೊಳ್ಳುತ್ತಿವೆ. ನಿರುಪದ್ರವಿಗಳಾದ ಉರಗ ಗಳು ಮನುಷ್ಯನ ತಂಟೆಗೆ ತಾವಾಗಿ ಎಂದಿಗೂ ಹೋದದ್ದಿಲ್ಲ. ಜೀವ ಜಗತ್ತಿನ ಆಹಾರ ಸರಪಣಿ ಮತ್ತು ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳಲು ಹಾವುಗಳನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮದಾಗಬೇಕು ಎಂದರು. ಪ್ರಾಂಶುಪಾಲ ಜೀವನ್‌ದಾಸ್ ಅತಿಥಿಗಳನ್ನು ಗೌರವಿಸಿದರು. ಉಪನ್ಯಾಸಕಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಜೀವಂತ ಹಾವುಗಳ ಪ್ರಾತ್ಯಕ್ಷಿಕೆ
ಹಾವಿನ ಹಲವು ಪ್ರಬೇಧಗಳು, ಅಂಗಾಂಗಗಳು, ಅವುಗಳ ಆಹಾರ ಕ್ರಮ, ಬದುಕಿನ ರೀತಿ-ನೀತಿಗಳು ಮತ್ತು ಹಾವು ಕಚ್ಚಿದರೆ ನಾವು ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಕುರಿತು ಡಾ| ರವೀಂದ್ರನಾಥ ಐತಾಳ್ ವಿವರಿಸಿದರು. ಕಟ್ಟಿನ ಹಾವು, ಹೆಬ್ಟಾವು, ನಾಗರಹಾವು, ಕಾಳಿಂಗ ಸರ್ಪ, ಹವಳದ ಹಾವು, ಕನ್ನಡಿ ಹಾವು, ಮಂಡಲ ಹಾವು, ಸಮುದ್ರ ಹಾವು ಇತ್ಯಾದಿ ಉರಗಗಳ ಕುರಿತು ಅವರು ಮಾಹಿತಿ ನೀಡಿದರು. ಜೀವಂತ ಹಾವುಗಳನ್ನು ಪ್ರದರ್ಶಿಸಿ ಪ್ರಾತ್ಯಕ್ಷಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.