ಟ್ರೇ ಹುಲ್ಲು ಮಣ್ಣಿಲ್ಲ, ನೀರೇ ಎಲ್ಲಾ


Team Udayavani, Nov 19, 2018, 6:00 AM IST

tavere-gera-3.jpg

ನೈಸರ್ಗಿಕವಾದ ಹೈಡ್ರೋಫೋನಿಕ್‌ ಘಟಕವನ್ನು ಸ್ಥಾಪಿಸಿ, ಕೇವಲ ನೀರಿನ ಸಿಂಪರಣೆಯಿಂದ (ಮಣ್ಣನ್ನು ಬಳಸದೆ) ಮೆಕ್ಕೆಜೋಳದ ಹುಲ್ಲನ್ನು ಟ್ರೇ ಗಳಲ್ಲಿ ಬೆಳೆಯುವ ಮೂಲಕ ಹೊಸ ದಾರಿಯನ್ನು ಪರಿಚಯಿಸಿದ್ದಾರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾದ ಪ್ರಗತಿ ಪರ ರೈತ ಅಶೋಕ ಬಳ್ಳೊಳ್ಳಿ.

ಹೀಗೆ ಬೆಳೆದ ಹುಲ್ಲನ್ನು ಆಕಳುಗಳಿಗೆ ಪೌಷ್ಠಿಕ ಆಹಾರ (ಹುಲ್ಲು)ದಂತೆ ನೀಡುವ ಮೂಲಕ, ಹೆಚ್ಚು  ಹಾಲನ್ನು ಪಡೆಯುತ್ತಿದ್ದಾರೆ.  ನೀರಿನ ಸಿಂಪರಣೆಯ ಮೂಲಕ ಟ್ರೇಗಳಲ್ಲಿ ಹುಲ್ಲು ಬೆಳೆಯುವುದು ಕೊಪ್ಪಳ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ ಅಶೋಕ ಬಳ್ಳೊಳ್ಳಿ, ವೃತ್ತಿಯಲ್ಲಿ ಎಂಜಿನಿಯರ್‌ ಆಗಿದ್ದರೂ ಸಹ, ಅವರಿಗೆ  ಕೃಷಿಯ ಕಡೆ ತುಡಿತವಿದೆ.  

ಪೌಷ್ಠಿಕ ಹುಲ್ಲನ್ನು ಆಕಳುಗಳಿಗೆ ಪ್ರತಿ ದಿನ ಮುಂಜಾನೆ, ದಿನಕ್ಕೆ ಒಪ್ಪತ್ತು ಮಾತ್ರ ಆಹಾರವಾಗಿ ನೀಡುತ್ತಾರೆ. 

ಬೆಳೆಯೋದು ಹೇಗೆ?
ಮೆಕ್ಕೆಜೋಳದ ಬೀಜಗಳನ್ನು ಒಂದು ದಿನ ನೀರಿನಲ್ಲಿ ನೆನೆಸಿ, ಮರು ದಿನ ಬಟ್ಟೆಯಲ್ಲಿ ಕಟ್ಟಿ ಇಡಲಾಗುತ್ತದೆ. ಇಡೀ ದಿನ ನೀರಿನಲ್ಲಿ ನೆನೆಸಿದರೆ, ಬಟ್ಟೆಯಲ್ಲಿ ಕಟ್ಟಿ ಇಟ್ಟರೆ, ಒಂದು ದಿನದಲ್ಲಿ ಮೊಳಕೆ ಬಂದಿರುತ್ತವೆ. ಹೀಗೆ ಮೊಳಕೆ ಬಂದ ಬೀಜಗಳಲ್ಲಿ ಅರ್ಧ ಕೆ.ಜಿಯಷ್ಟನ್ನು ಟ್ರೇನಲ್ಲಿ  ಹಾಕಿ ಇಡಲಾಗುತ್ತದೆ. ಅವುಗಳಿಗೆ ಪ್ರತಿದಿನ ಸಣ್ಣ ಸಣ್ಣ ಪೈಪ್‌ಗ್ಳ ಮೂಲಕ ನೀರನ್ನು ಸಿಂಪಡಿಸಲಾಗುತ್ತದೆ. ಅದಕ್ಕಾಗಿ ಅಟೋಮ್ಯಾಟಿಕ್‌ ಟೈಮರ್‌ ಅಳವಡಿಸಲಾಗಿದೆ. ಪ್ರತಿ 75 ನಿಮಿಷಗಳಿಗೊಮ್ಮೆ, 25 ಸೆಕೆಂಡ್‌ ಮಾತ್ರ ಈ ಮೊಳಕೆ ಬಿಟ್ಟ ಬೀಜಗಳಿಗೆ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಅದರಂತೆ, ಮೊಳಕೆ ಬೀಜಗಳಿಗೆ 10 ದಿನಗಳ ವರೆಗೆ ನೀರು ಸಿಂಪಡಿಸಲಾಗುತ್ತದೆ. ಈ ಹೊತ್ತಿಗೆ ಒಂದು ಅಡಿ ಎತ್ತರ ಮೆಕ್ಕೆಜೋಳದ ಹುಲ್ಲು ಬೆಳೆಯುತ್ತದೆ. ಅದನ್ನು ನೇರವಾಗಿ ಆಕಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ.

ಅಟೋಮೆಟಿಕ್‌ ಟೈಮರ್‌ ಗಾಗಿ ನಿರಂತರವಾಗಿ ವಿದ್ಯುತ್‌ ಸಂಪರ್ಕ ಬೇಕಾಗುತ್ತದೆ. ಅದಕ್ಕಾಗಿ ಒಂದು ಬ್ಯಾರಲ್‌ನಲ್ಲಿ ನೀರು ಸಂಗ್ರಹಣೆ ಮಾಡಿ ಅದರಿಂದ ಚಿಕ್ಕ ಪೈಪ್‌ ಗಳ ಮೂಲಕ ನೀರು ಸಿಂಪರಣೆ ಮಾಡಲು ಅರ್ಧ ಹೆಚ್‌ ಪಿ ಮೋಟರ್‌ ಅಳವಡಿಸಲಾಗಿದೆ. ಈ ಭಾಗದಲ್ಲಿ ವಿದ್ಯುತ್‌ ಸಂಪರ್ಕ ಮೇಲಿಂದ ಮೇಲೆ ಕಡಿತಗೋಳ್ಳುವ ಕಾರಣ, ನೀರು ಸಿಂಪಡಿಸಲು ಇನ್‌ವರ್ಟರ್‌ (ಯುಪಿಎಸ್‌) ಗಾಗಿ 12 ವ್ಯಾಟ್ಸ್‌ ಬ್ಯಾಟರಿಯ ಸಂಪರ್ಕ ಕೊಡಲಾಗಿದೆ. 

 ಈ ಪೌಷ್ಟಿಕ ಆಹಾರದಿಂದ ನಮ್ಮಲ್ಲಿರುವ 10 ಜವಾರಿ ಆಕಳುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಇದಕ್ಕಾಗಿ ಖರ್ಚಾದ ಒಟ್ಟು ಮೊತ್ತ 28 ಸಾವಿರ ರೂ.ಗಳು ಎಂದುರೈತ ಅಶೋಕ ಬಳ್ಳೊಳ್ಳಿ ವಿವರಿಸಿದರು. 

ಮಾಹಿತಿಗೆ: 9739925886

– ಎನ್‌. ಶಾಮೀದ್‌ ತಾವರಗೇರಾ        

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.