ವಿಶ್ವ ಭಾಷೆಗಳಲ್ಲಿ ಕನ್ನಡಕ್ಕೆ ಉನ್ನತ ಸ್ಥಾನ: ಡಾ| ಮೂಲಗೆ


Team Udayavani, Nov 19, 2018, 12:13 PM IST

bid-3.jpg

ಬೀದರ: ವಿಶ್ವದ ಹಲವಾರು ಭಾಷೆಗಳಲ್ಲಿ ಕನ್ನಡ ಭಾಷೆ ಅತ್ಯುನ್ನತ ಸ್ಥಾನದಲ್ಲಿದೆ. ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆ ಉತ್ಕೃಷ್ಟ ಭಾಷೆಯಾಗಿ ಮೆರೆಯುತ್ತಿದ್ದು, ಕನ್ನಡದ ಪ್ರಥಮ ಶಾಸನ ಹಲಿಡಿ ಶಾಸನದಲ್ಲಿ ಕನ್ನಡ ಭಾಷೆಯ ಇತಿಹಾಸ ಸಾರುತ್ತಿದೆ ಎಂದು ಮಹಾರಾಷ್ಟ್ರದ ಉದಗೀರನ ಉದಯಗಿರಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ರಮೇಶ ಮೂಲಗೆ ಹೇಳಿದರು.

ನಗರದ ಕೃಷ್ಣ ರಿಜೇನ್ಸಿ ಸಭಾಂಗಣದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಬೀದರ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರಿಸ್ತಪೂರ್ವದಲ್ಲಿಯೂ ಕನ್ನಡ ಭಾಷೆ ಶ್ರೇಷ್ಠವಾಗಿತ್ತು. ಅಮೋಘವರ್ಷ ನೃಪತುಂಗರ ಆಸ್ಥಾನ ಕವಿ ಶ್ರೀವಿಜಯ ಬರೆದ ಕವಿರಾಜಮಾರ್ಗದಲ್ಲಿ ಕನ್ನಡ ನಾಡು ಮಹಾರಾಷ್ಟ್ರದ ನಾಸಿಕದಲ್ಲಿ ಉದಯಿಸುವ ಗೋದಾವರಿ ನದಿಯಿಂದ ಕರ್ನಾಟಕದ ತಲಕಾವೇರಿಯಿಂದ ಉದಯಿಸಿ ತಮಿಳುನಾಡಿನಲ್ಲಿ ಹರಿಯುವ ಕಾವೇರಿವರೆಗೆ ಪಸರಿಸಿತ್ತು. ಕನ್ನಡ ಭಾಷೆ ಮಹಾರಾಷ್ಟ್ರದಿಂದ ತಮಿಳುನಾಡಿನ ವರೆಗೆ ಕನ್ನಡ ಆಡು ಭಾಷೆಯಾಗಿತ್ತು ಎಂದು ತಿಳಿಸಿದರು.

9ನೇ ಶತಮಾನದ ವಡ್ಡರಾಧನೆ ಗ್ರಂಥದಲ್ಲಿ ಕನ್ನಡ ಭಾಷೆಯಲ್ಲಿ 16 ಜೈನ ಕಥೆಗಳಿವೆ. ಪಂಪ, ರನ್ನ, ಜನ್ನ ಅವರು ಅತ್ಯುತ್ತಮ ಸಾಹಿತ್ಯವನ್ನು ನೀಡಿ, ಕನ್ನಡ ಭಾಷೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸರ್ವಶ್ರೇಷ್ಠ ಸಾಹಿತ್ಯ ನೀಡುವ ಮೂಲಕ ಕನ್ನಡ ವಿಶ್ವಮಾನ್ಯ ಭಾಷೆಯನ್ನಾಗಿ ಮಾಡಿದ ಶ್ರೇಯಸ್ಸು ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.

ಹಳೆಗನ್ನಡದಲ್ಲಿ ಅನೇಕ ಕವಿಗಳು ಉತ್ತಮ ಹಾಗೂ ಉತ್ಕೃಷ್ಠ ಸಾಹಿತ್ಯ ನೀಡಿದ್ದಾರೆ. ಅದೇ ರೀತಿ ಹೊಸಗನ್ನಡದಲ್ಲಿ 8 ಜನರು ಜ್ಞಾನಪೀಠ ಪ್ರಶಸ್ತಿ ಪಡೆದು ಕನ್ನಡ ಭಾಷೆಯನ್ನು ಮತಷ್ಟೊ ಅಗ್ರಸ್ಥಾನಕ್ಕೆ ಕೊಂಡೊಯ್ದಿದಿದ್ದಾರೆ ಎಂದು ವಿವರಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ವಿಜಯಲಕ್ಷ್ಮೀ ಮಾತನಾಡಿ, ಇಂದಿನ ಜಾಗತಿಕರಣದ ಯುಗದಲ್ಲಿ ಕನ್ನಡ ಭಾಷೆಗೆ ಕುತ್ತು ಬಾರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯಕರ್ತವ್ಯವಾಗಿದೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ 30 ದಿನಗಳ ಕಾಲ ಕನ್ನಡ ಕನ್ನಡ ಎನ್ನದೇ 365 ದಿನಗಳ ಕಾಲ ಕನ್ನಡ ಕನ್ನಡ ಎಂದು ಕನ್ನಡ ಭಾಷಾ ಪ್ರೇಮ ತೋರಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಸಂಜೀವಕುಮಾರ ಅತಿವಾಳೆ ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಶಿಕ್ಷಕರ, ಅಧ್ಯಾಪಕರ, ಉಪನ್ಯಾಸಕರ, ಪಾಲಕರ, ಕನ್ನಡಪರ ಹೋರಾಟಗಾರರ ಹಾಗೂ ಕನ್ನಡ ಮಾಧ್ಯಮದಲ್ಲಿ ಓದುವ ಶಾಲಾ ಮಕ್ಕಳ ಪಾತ್ರ ಮಹತ್ತರವಾಗಿದೆ ಎಂದರು.

ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ನಿವೃತ್ತ ಉಪನ್ಯಾಸಕ ಸಿದ್ರಾಮ ಸಪಾಟೆ, ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ ಅಧ್ಯಕ್ಷ ಅನೀಲಕುಮಾರ ದೇಶಮುಖ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಾಮರಾವ್‌ ನೆಲವಾಡೆ, ರವೀಂದ್ರ ಲಂಜವಾಡಕರ್‌, ಶಿವಕುಮಾರ ಚನ್ನಶೆಟ್ಟಿ, ಡಾ| ರಾಜಕುಮಾರ ಅಲ್ಲೂರೆ, ಭಾನುಪ್ರಿಯಾ ಅರಳಿ, ಪ್ರಿಯಾ ಲಂಜವಾಡಕರ್‌, ಡಾ|ಶ್ರೇಯಾ ಮಹೇಂದ್ರಕರ್‌, ಮಂಗಲಾ ಚನ್ನಶೆಟ್ಟಿ, ಸುನೀತಾ ಬಿರಾದಾರ, ಕೆ.ಎಂ. ವಿಶ್ವನಾಥ ಮರತೂರ, ಮಾಣಿಕ ನೇಳಗೆ, ಪ್ರೋ| ನಾಗಮ್ಮ ಭಂಗರಗಿ, ಪ್ರಕಾಶ ದೇಶಮುಖ, ಮೇನಕಾ ಪಾಟೀಲ, ಕೀರ್ತಿಲತಾ ಬಿರಾದಾರ, ಓಂಕಾರ ಪಾಟೀಲ, ಅಜೀತ್‌ ಅಶೋಕ ಶಿಂಧೆ, ಆತ್ಮಾನಂದ ಬಂಬುಳಗಿ, ಅವಿನಾಶ ಸೋನೆ, ರವಿ ಜಾಂಪಡೆ,
ಸ್ವರೂಪರಾಣಿ ನಾಗೂರೆ, ಸವಿತಾ ಮಾಶೆಟ್ಟೆ, ನಾಗಮೂರ್ತಿ ಪಾಂಚಾಳ, ಮೋಹನರಾವ್‌ ಪಾಟೀಲ, ಉಷಾರಾಣಿ, ಬಸವಚೇತನ ಚೆನ್ನಶೆಟ್ಟಿ ಹಾಗೂ ಇನ್ನಿತರರು ಇದ್ದರು.

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Lokayukta Raid: ಜಿಲ್ಲಾ ತರಬೇತಿ‌ ಕೇಂದ್ರದ‌ ಅಧಿಕಾರಿ‌ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Waqf Issue: ಬೀದರ್‌ ರೈತ ಸಂಘ, ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.