ವಾಣಿಜ್ಯ ಬೆಳೆಯಿಂದ ಪಾರಂಪರಿಕ ಸಿರಿಧಾನ್ಯ ಮಾಯ: ಶೈಲಜಾ

Team Udayavani, Nov 19, 2018, 12:59 PM IST

untitled-1.jpg

ವಿಜಯಪುರ: ಹಣದ ಹಿಂದೆ ಬಿದ್ದಿರುವ ಆಧುನಿಕ ಕೃಷಿ ವ್ಯವಸ್ಥೆಯ ರೈತರು ವಾಣಿಜ್ಯೋತ್ಪನ್ನಗಳ ಬೆಳೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಪರಿಣಾಮ ರೋಗನಿಗ್ರಹ ಶಕ್ತಿ ಹೊಂದಿದ್ದ ನಮ್ಮ ಪೂರ್ವಜರ ಆಹಾರ ಕ್ರಮವಾಗಿದ್ದ ಸಿರಿಧಾನ್ಯಗಳ ಬೆಳೆಗಳನ್ನು ಮರೆತಿರುವುದೇ ನಮ್ಮ ತಲೆಮಾರಿನಲ್ಲಿ ಅನಾರೋಗ್ಯ ಹೆಚ್ಚು ಕಾಡಲು ಕಾರಣ ಎಂದು ಶೈಲಜಾ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.

ರವಿವಾರ ನಗರದ ಪ್ರಗತಿ ಮಂಗಲ ಕಾರ್ಯಾಲಯದಲ್ಲಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು
ಕೃಷಿ ಇಲಾಖೆ ಆತ್ಮ ಯೋಜನೆ ಸಹಕಾರದೊಂದಿಗೆ ಆಯೋಜಿಸಿದ್ದ ಸಿರಿ ಧಾನ್ಯಗಳ ಆಹಾರ ಮೇಳ ಪ್ರದರ್ಶನ ಮತ್ತು ಮಾರಾಟ ಮತ್ತು ಅಡುಗೆ ಪ್ರಾತ್ಯಕ್ಷಿಕೆ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಜೀವನ ಶೈಲಿ ಕರಿದ ಜಿಡ್ಡು ಹಾಗೂ ಪ್ಯಾಕಿಂಗ್‌ ಮಾಡಿದ ದಾಸ್ತಾನು ಆಹಾರ ಸೇವನೆಯಿಂದ ಪ್ರಸಕ್ತ ಸಂದರ್ಭದಲ್ಲಿ ಖಾಯಿಲೆಗಳು ಹೆಚ್ಚಾಗಿ ಆಸ್ಪತ್ರೆಗೆ ಹಣ ಸುರಿಯುವಂತಾಗಿದೆ ಎಂದು ಪ್ರಸಕ್ತ ಕೃಷಿ ಹಾಗೂ ಆಹಾರ ಪದ್ಧತಿ ವಿಶ್ಲೇಷಿಸಿದರು.

ಜಿಲ್ಲೆಯಲ್ಲಿ 12 ಸಾವಿರ ಸ್ವಸಹಾಯ ಸಂಘವಿದ್ದು, ಇವರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 218 ಕೋಟಿ ರೂ. ಬ್ಯಾಂಕ್‌ನಿಂದ ಆರ್ಥಿಕ ನೆರವು ಸಂಸ್ಥೆ ಕೊಡಿಸಿದೆ. ಧರ್ಮಸ್ಥಳದ ಈ ಸಂಸ್ಥೆಯ ಗ್ರಾಮೀಣ ಮಹಿಳೆಯರಿಗೆ ವರದಾನವಾಗಿದ್ದು, ಈ ಎಲ್ಲ ಯೋಜನೆಗಳ ಸಫಲತೆ ಪಡೆಯಬೇಕು. ಸಿರಿ ಧಾನ್ಯಗಳ ಬೆಳೆ ಬೆಳೆಯಲು ಅವುಗಳನ್ನು ಉಪಯೋಗಿಸಲು ಮತ್ತು ಅವುಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಜನರಲ್ಲಿ ಸಿರಿಧಾನ್ಯಗಳ ಸೇವನೆಯ ಮನವರಿಕೆ ಮಾಡಿಕೊಡಲು ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರುವುದು ಅನುಕರಣೀಯ ಎಂದರು. ಕೃಷಿ ವಿಸ್ತೀರ್ಣಾಧಿಕಾರಿ ಡಾ| ಆರ್‌.ಬಿ. ಬೆಳ್ಳಿ ಮಾತನಾಡಿ, ಕಡಿಮೆ ನೀರಿನಲ್ಲಿ ಯಾವ ರಾಸಾಯನಿಕ ಬಳಸದೆ ಸುಲಭವಾಗಿ ಬೆಳೆಯುವ ನವಣೆ, ಉದಲು, ಹಾರಕ, ರಾಗಿ ಇನ್ನಿತರ ಸಿರಿಧಾನ್ಯಗಳಿಂದ ರುಚಿಕರವಾದ ಅಡುಗೆಗಳನ್ನು ತಯಾರಿಸಬಹುದು. ದಿನ ನಿತ್ಯ ಇವುಗಳನ್ನು ಬಳಸುವುದರಿಂದ ದೇಹವನ್ನು ಸಮತೋಲನದಲ್ಲಿ ಇರಿಸಲು ಸಾಧ್ಯವಿದೆ. ಕಾರಣ ರೈತರು ಆರ್ಥಿಕ ಲಾಭವನ್ನು ನೆಚ್ಚಿಕೊಳ್ಳದೆ ತಮಗಿರುವ ಜಮೀನಿನಲ್ಲಿ ಸ್ವಲ್ಪ ಭಾಗವಾದರೂ ಸಿರಿ ಧಾನ್ಯಗಳನ್ನು ಬೆಳೆದು, ಜನಪರ ಯೋಗಿ ಆಗಬೇಕು ಎಂದರು.

ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಪ್ರಧಾನ ಆಯುಕ್ತ ಸಿದ್ದಣ್ಣ ಸಕ್ರಿ ಮಾತನಾಡಿ, ಇಂದು ಮಡಿಕೆ, ಕುಡುಕೆಗಳನ್ನು ಮರೆತು ಪ್ಲಾಸ್ಟಿಕ್‌ ಬಳಕೆಯನ್ನು ಹೆಚ್ಚಾಗಿಸಿಕೊಂಡು, ರಾಸಾಯನಿಕ ಭರತಿ ಪದಾರ್ಥಗಳಿಗೆ ಮಾರು ಹೋದ ಯುವ ಜನತೆ ಇಂತಹ ಅಮೂಲ್ಯವಾದ ಅಮೃತ ಸಿರಿಧಾನ್ಯಗಳನ್ನು ಮರೆಯುತ್ತಿರುವುದು ಆತಂಕದ ಸಂಗತಿ ಎಂದರು.
 
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಮಾತನಾಡಿ, ನೀರು, ನೆರಳಿಲ್ಲದ ಜಿಲ್ಲೆ ವಿಜಯಪುರ ಎಂಬ ಹಣೆಪಟ್ಟಿ ಹೊತ್ತಿಕೊಂಡಿದ್ದರೂ ಫಲವತ್ತತೆ ಜಮೀನು ಇಲ್ಲಿಯ ಜನರ ಸಹನೆ ರೈತರ ಶ್ರಮ ಹಿರಿದಾಗಿದೆ. ಬಟ್ಟೆ ಗರಿಗರಿಯಾಗಬೇಕಾದರೆ ಅದಕ್ಕೆ ಇಸ್ತ್ರೀ ಬೇಕು. ಸಮಾಜದ ಅಂಕು,ಡೊಂಕು ತಿದ್ದಬೇಕಾದರೆ ಸ್ತ್ರೀ ಬೇಕು ಎಂದು ಮಾರ್ಮಿಕವಾಗಿ ನುಡಿದರು. 

ರಾಸಾಯನಿಕ ಆಹಾರ ಸೇವನೆ ದೇಹಕ್ಕೆ ಅಪಾಯಕಾರಿ. ಈ ಕಾರಣಕ್ಕಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎರಡು ದಿನಗಳ ಕಾಲ ಜನರಿಗಾಗಿ ಸಿರಿಧಾನ್ಯಗಳ ಉಪಯೋಗ ಅದರ ಮಹತ್ವ, ಮತ್ತು ಅಡುಗೆ ತಯಾರಿಯ ಪ್ರಾತ್ಯಕ್ಷಿಕೆ ಹಾಗೂ ಸಿರಿಧಾನ್ಯಗಳ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗ ಪಡೆದುಕೊಂಡ ಜನತೆ ಧನ್ಯ ಎಂದರು.

ಮೇಳದಲ್ಲಿ ಸ್ಥಳದಲ್ಲೇ ಸಿರಿಧಾನ್ಯಗಳಿಂದ ಮಾಡದ ವಿವಿಧ ಬಗೆಯ ಅಡುಗೆ ತಯಾರಿಕೆ, ಸಿರಿ ಧಾನ್ಯಗಳ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಮಾರಾಟ ಕುರಿತು ಜನರಿಗೆ ತಿಳಿಸಲಾಯಿತು. 

ಕೃಷಿ ಪಂಡಿತರಾದ ಎಸ್‌.ಟಿ. ಪಾಟೀಲ, ಮಾಜಿ ಉಪ ಮೇಯರ್‌ ಲಕ್ಷ್ಮೀ ಕನ್ನೊಳ್ಳಿ, ಎಂ.ಬಿ. ಪಟ್ಟಣಶೆಟ್ಟಿ, ಆರ್‌.ಟಿ. ಉತ್ತರಕರ ವೇದಿಕೆಯಲ್ಲಿದ್ದರು. ನಾಗರಾಜ ಸ್ವಾಗತಿಸಿದರು. ಮಹ್ಮದ್‌ ಅಲಿ ವಂದಿಸಿದರು. 

ಟಾಪ್ ನ್ಯೂಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ

ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರ ಇಲ್ಲಿದೆ

Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lH

Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Pandavapura: A cow gave birth to three calves

Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ

4(1

Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.