ಉಗ್ರರಿಂದ ಪೌರರ ಹತ್ಯೆಯ ವಿಡಿಯೋ ಬಗ್ಗೆ ತನಿಖೆ: ಕಾಶ್ಮೀರ ಐಜಿಪಿ ಪಾಣಿ
Team Udayavani, Nov 19, 2018, 3:57 PM IST
ಶ್ರೀನಗರ : ಉಗ್ರರು ತಾವು ಅಪಹರಿಸಿದ ಪೌರರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ ಗುಂಡಿಕ್ಕಿ ಸಾಯಿಸುವ ದೃಶ್ಯದ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬಂದಿದ್ದು ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಾಶ್ಮೀರ ಐಜಿಪಿ ಎಸ್ ಪಿ ಪಾಣಿ ಇಂದು ಸೋಮವಾರ ಹೇಳಿದ್ದಾರೆ.
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಈಚೆಗೆ ತಾನು ಅಪಹರಿಸಿ ಒಯ್ದಿದ್ದ ಇಬ್ಬರು ಪೌರರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿ ಗುಂಡಿಕ್ಕಿ ಸಾಯಿಸುವ ಎರಡು ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು.
ಉಗ್ರರ ಈ ರೀತಿಯ ಕ್ಯಾಮೆರಾ ಮುಂದಿನ ಹತ್ಯೆ ಮತ್ತು ಅದರ ವಿಡಿಯೋ ಬಿಡುಗಡೆ ಕೃತ್ಯವು ಅತ್ಯಂತ ಪೈಶಾಚಿಕ ಕೃತ್ಯವಾಗಿದೆಯಲ್ಲದೆ ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ ಲೋಡ್ ಮಾಡಿರುವುದು ಇನ್ನೂ ದೊಡ್ಡ ಅಪರಾಧವಾಗಿದೆ. ಈ ಬಗ್ಗೆ ನಾವು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪಾಣಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.