ಈಡಿಯಟ್ ರಾಂಚೋ ಸಿಕ್ಕಿದ್ದ!
Team Udayavani, Nov 20, 2018, 6:00 AM IST
“3 ಈಡಿಯಟ್ಸ್’ ಹಿಂದಿ ಚಿತ್ರವನ್ನು ಮರೆಯುವುದುಂಟೆ? ಮಾರ್ಕ್ಸ್ನ ಹಿಂದೆಬಿದ್ದವರಿಗೆಲ್ಲ, ಕೌಶಲದ ಬುದ್ಧಿ ಹೇಳಿದ ಈ ಚಿತ್ರದ ಅಲೆಯು ಲಡಾಖ್‌ನ ಪೆಂಗೊಂಗ್ ತ್ಸೋ ತಟಕ್ಕೆ ಈಗಲೂ ಬಡಿಯುತ್ತಿದೆ. ಆ ಸರೋವರದ ತಟದಲ್ಲಿ ಕರ್ನಾಟಕ ಪ್ರವಾಸಿಗರೊಬ್ಬರು ನಿಂತಾಗ ಆದ ರೋಮಾಂಚನದ ಚಿಕ್ಕ ಚೊಕ್ಕ ದೃಶ್ಯಕಾವ್ಯ ನಿಮ್ಮ ಮುಂದಿದೆ…
ಲಡಾಖ್‌ನ ಪೆಂಗೊಂಗ್ ತ್ಸೋ ಸರೋವರದ ತಟದಲ್ಲಿ ನಿಂತಾಗ, ನಾನೂ 3 ಈಡಿಯಟ್ಸ್‌ನಂತೆ ಪುಳಕಿತನಾಗಿದ್ದೆ. “3 ಈಡಿಯಟ್’ನ ಕ್ಲೈಮ್ಯಾಕ್ಸ್‌ನಲ್ಲಿ ಆಮೀರ್ ಖಾನ್ ಹಾರಿಸಿದ ಗಾಳಿಪಟ ಇನ್ನೂ ಈ ಸರೋವರದ ಮೇಲೆ ಹಾರುತ್ತಿದೆಯೇನೋ ಅಂತನ್ನಿಸುತ್ತಿತ್ತು. ಕರೀನಾ ಕಪೂರ್ ವೆಸ್ಪಾ ಓಡಿಸಿಕೊಂಡು ಬಂದಂತೆ, ಹಿನ್ನೆಲೆಯ ದೃಶ್ಯದಲ್ಲಿ ಸರೋವರವು ಸುನೀಲ ವಿಸ್ತಾರವಾಗಿ ಹಬ್ಬಿದಂತೆ ಮನಸ್ಸು ತಂಪಾಗುತ್ತಿತ್ತು. ಪೆಂಗೊಂಗ್ ಸರೋವರ, 134 ಕಿ.ಮೀ. ಉದ್ದವಿದ್ದು, ಶೇ.60 ಭಾಗವು ಚೀನಾ- ಟಿಬೆಟ್‌ನಲ್ಲಿ, ಮಿಕ್ಕ ಭಾಗವು ಭಾರತದಲ್ಲಿ ಹರಡಿಕೊಂಡಿದೆ. ನೋಡಲು ವಿಶಾಲವಾದ, ಸ್ಫಟಿಕದಂತಿರುವ ಈ ಸರೋವರವು ಪ್ರಪಂಚದ ಅದ್ಭುತ ಜಲತಾಣಗಳಲ್ಲಿ ಒಂದು.
ಇದಕ್ಕೂ ಮೊದಲು, ಲೇಹ್‌ನಿಂದ 175 ಕಿ.ಮೀ. ದೂರವಿರುವ ಪೆಂಗೊಂಗ್ ಲೇಕ್‌ಗೆ ತಲುಪಲು 6 ತಾಸು ಬೇಕು ಎಂದು ಕೇಳಿ ತಿಳಿದಾಗಲೇ ಅದರ ರಸ್ತೆಗಳ ಕುರಿತಾಗಿ ಒಂದು ಚಿತ್ರ ಮನಸಲ್ಲಿ ಮೂಡಿತ್ತು. ಬೆಳಗ್ಗೆ ಎದ್ದು ತಿಂಡಿ ತಿಂದು, 6.45ರ ಸುಮಾರಿಗೆ ಹೊರಟೆವು. ತಾಂಗ್ಸೆ ಮೂಲಕ ಪೆಂಗೊಂಗ್ ತಲುಪಿ, ದೂರದಲ್ಲಿನ ಒಂದು ಬೋರ್ಡ್‌ನಲ್ಲಿ “ನೀವು ಇಲ್ಲಿಂದ ನೋಡುತ್ತಿರುವುದು ಜಗತøಸಿದ್ಧ ಪೆಂಗೊಂಗ್ ಸರೋವರದ ಮೊದಲ ನೋಟ’ ಎಂದು ಓದಿದಾಗ ದೂರದಲ್ಲಿ, ಹಸಿರು- ನೀಲಿ ಚೆಲ್ಲಾಡಿದ ಚಿತ್ರ ಕಾಣಿಸುತ್ತಿತ್ತು. 2-3 ಕಿ.ಮೀ. ಕ್ರಮಿಸಿದಾಗ, ನಮ್ಮ ಮುಂದೆ ಶುಭ್ರವಾಗಿ, ತಳ ಕಾಣಿಸುವಂತೆ ಮಿಂಚುತ್ತಿತ್ತು ಆ ಸರೋವರ.
“ಲಡಾಖ್‌ನ ಭಾಷೆ ಕನ್ನಡವೋ?’ ಎಂಬ ಶಂಕೆ ಹುಟ್ಟುವಂತೆ, ಅಲ್ಲಿ ಎಲ್ಲ ಕಡೆಯಲ್ಲೂ ಕನ್ನಡಿಗರೇ ಸಿಕ್ಕರು. ಸುತ್ತ ಎಲ್ಲಿ ನೋಡಿದರೂ “3 ಈಡಿಯಟ್ಸ್’ ಚಿತ್ರಕ್ಕೆ ಸಂಬಂಧಿಸಿದ ಹೆಸರುಗಳಿರುವ ಹೋಟೆಲ್‌ಗಳು. ಕರೀನಾ ಕಪೂರ್, ಆ ಚಿತ್ರದಲ್ಲಿ ಬಳಸಿರುವ ವೆಸ್ಪಾ ಸ್ಕೂಟರ್ ಹಾಗೂ ಹೆಲ್ಮೆಟ್, ಅಲ್ಲಿ ಹಾಗೆಯೇ ಇದೆ. ಅದರೊಂದಿಗೆ ಫೋಟೋ ತೆಗೆಸಿಕೊಳ್ಳಲು ಅಲ್ಲಿ ದೂಡ್ಡ ಸಾಲೇ ನಿಂತಿರುತ್ತದೆ. “3 ಈಡಿಯಟ್ಸ್’ನ ಚಿತ್ರೀಕರಣಕ್ಕೂ ಮೊದಲು, ಈ ಸ್ಥಳಕ್ಕೆ ಅಷ್ಟೊಂದು ಪ್ರಾಮುಖ್ಯತೆಯೇ ಸಿಕ್ಕಿರಲಿಲ್ಲ. ಈಗ ಈ ಸ್ಥಳವನ್ನು ನೋಡಲು, ಲಡಾಖ್‌ನ ಒಂದು ತುದಿಯಲ್ಲಿ ತಂಗಿದ ಪ್ರವಾಸಿಗನೂ, ಸಾವಿರಾರು ರೂ. ಖರ್ಚು ಮಾಡಿಕೊಂಡು ಓಡೋಡಿ ಬರುತ್ತಾನೆ.
ತಿಳಿ ಹಸಿರನ್ನು ಹೊದ್ದಿರುವ ಪಾರದರ್ಶಕ ನೀರಿಗೆ ನೀಲಿ ಮೋಡ ಚುಂಬಿಸಿದಂತೆ ಕಾಣುವ ದೃಶ್ಯವೇ ಮನಮೋಹಕ. ಬಿಳಿಯ ಬಣ್ಣದ ಮೋಡಗಳು ಅಲ್ಲಲ್ಲಿ ಇಣುಕಿ, ಸರೋವರದಲ್ಲಿ ತಮ್ಮ ನೆರಳನ್ನು ನೋಡುತ್ತಿವೆ ಎಂಬ ಭಾವ ಹುಟ್ಟುತ್ತಿತ್ತು.
ಅಲ್ಲಿನ ಹರಳುಕಲ್ಲುಗಳ ತಟದಲ್ಲಿ ಆರಾಮವಾಗಿ ಕೂರುವ ಸುಖವೇ ಬೇರೆ. ಚಳಿಗಾಲ, ಮಳೆಗಾಲದಲ್ಲಿ ಈ ಸರೋವರದ ಕುರುಹೇ ಇರುವುದಿಲ್ಲ. ಹಿಮ ಹೊದ್ದು ಮಲಗುತ್ತದೆ. ಇನ್ನುಳಿದ ದಿನಗಳಲ್ಲಿ ಸ್ಫಟಿಕ ನೀರಿನದ್ದೇ ಚಮತ್ಕಾರ. ಹಸಿರು- ನೀಲಿಯ ಮಹೋನ್ನತ ಜುಗಲ್‌ಬಂದಿ. ಇಲ್ಲಿ ಬೀಸುವ ಗಾಳಿಗೆ ಎದೆಯೊಡ್ಡಿದಾಗ, ದೇಹವು ಹಗುರಾದ ಭಾವ. ನೋಡಿದರೆ ಈಜಬೇಕು ಎನಿಸುವ ನೀರಿನಲ್ಲಿ ಕಾಲಿಟ್ಟರೆ, ಮೈ ಕೊರೆಯುವ ತಂಪು ಅಡಗಿತ್ತು. ಹಿಮವನ್ನೇ ಮುಟ್ಟಿದಂತೆ ಅದು ತಣ್ಣಗೆ ಕೊರೆಯುತ್ತಿತ್ತು. ಎಷ್ಟೇ ಅಳವಿದ್ದರೂ, ತಳ ಕಾಣುವ ಅದರ ಮೋಡಿಗೆ ಬೇರೆ ಸಾಟಿಯೇ ಇಲ್ಲ. ಆದರೆ, ಜಾಸ್ತಿ ಹೊತ್ತು ಈ ಸ್ಥಳದಲ್ಲಿ ನಿಲ್ಲಲಾಗಲಿಲ್ಲ. ಕೆಲ ತಾಸು ನೀರಿನಲ್ಲಿ ಆಟವಾಡಿ, “3 ಈಡಿಯಟ್ಸ್’ ಎಂಬ ಹೋಟೆಲ್‌ನಲ್ಲಿ ಊಟ ಮುಗಿಸಿ, ಪುನಃ ಲೇಹ್‌ನತ್ತ ಹೊರಟೆವು. ಲೇಹ್ ತಲುಪಿದಾಗ ಸಂಜೆ 6. ಹೋಗುವ ದಾರಿಯಲ್ಲಿ ಸಿಕ್ಕ ಶಾಲೆಯಿಂದ ಮನೆಗೆ ತೆರಳುತ್ತಿರುವ ಹಲವು ಚಿಕ್ಕ ಪುಟ್ಟ ಮಕ್ಕಳೊಂದಿಗೆ ಆಟವಾಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ನಮ್ಮ ಹೋಟೆಲ್ ಅನ್ನು ತಲುಪಿದೆವು.
– ವಿಶ್ವಜಿತ್ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.