ವೆಸ್ಟ್ ಇಂಡೀಸ್ ಅಜೇಯ ಓಟ
Team Udayavani, Nov 20, 2018, 10:48 AM IST
ಗ್ರಾಸ್ ಐಲೆಟ್: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿದೆ. ರವಿವಾರ ರಾತ್ರಿ ನಡೆದ ರೋಚಕ ಹಣಾಹಣಿ ಯಲ್ಲಿ ಇಂಗ್ಲೆಂಡಿಗೆ 6 ವಿಕೆಟ್ ಸೋಲುಣಿಸಿ “ಎ’ ವಿಭಾಗದ ಅಗ್ರಸ್ಥಾನ ಅಲಂಕರಿಸಿದೆ.
ಇದು ಕೂಡ ಸಣ್ಣ ಮೊತ್ತದ ಪಂದ್ಯವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 8 ವಿಕೆಟಿಗೆ 115 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 19.3 ಓವರ್‌ಗಳಲ್ಲಿ 6 ವಿಕೆಟಿಗೆ 117 ರನ್ ಬಾರಿಸಿ ಜಯ ಸಾಧಿಸಿತು. ಈ ಎರಡೂ ತಂಡಗಳು ಅಂತಿಮ ಲೀಗ್ ಪಂದ್ಯಕ್ಕೂ ಮೊದಲೇ ಸೆಮಿಫೈನಲ್ ಟಿಕೆಟ್ ಪಡೆದಾಗಿತ್ತು. ಗುರುವಾರ ರಾತ್ರಿ ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ “ಎ’ ವಿಭಾಗದ ಅಗ್ರಸ್ಥಾನಿ ವೆಸ್ಟ್ ಇಂಡೀಸ್ ಮತ್ತು “ಬಿ’ ವಿಭಾಗದ ದ್ವಿತೀಯ ಸ್ಥಾನಿ ಆಸ್ಟ್ರೇಲಿಯ ಮುಖಾ ಮುಖೀಯಾಗಲಿವೆ. ದ್ವಿತೀಯ ಸೆಮಿಫೈನಲ್‌ನಲ್ಲಿ “ಬಿ’ ವಿಭಾಗದ ಅಗ್ರಸ್ಥಾನಿ ಭಾರತ ಮತ್ತು “ಎ’ ವಿಭಾಗದ ದ್ವಿತೀಯ ಸ್ಥಾನಿ ಇಂಗ್ಲೆಂಡ್ ಎದುರಾಗಲಿವೆ.
ಡಾಟಿನ್ ಬ್ಯಾಟಿಂಗ್ ಪರಾಕ್ರಮ
ಕೆರಿಬಿಯನ್ನರ ಆರಂಭ ಅತ್ಯಂತ ಆಘಾತ ಕಾರಿಯಾಗಿತ್ತು. 3 ರನ್ ಆಗುವಷ್ಟರಲ್ಲಿ 2 ವಿಕೆಟ್ ಉರುಳಿತ್ತು. ದಕ್ಷಿಣ ಆಫ್ರಿಕಾ ಎದುರಿನ ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿ ಮೆರೆದಿದ್ದ ಅನ್ಯಾ ಶ್ರಬೊÕàಲ್ ತಮ್ಮ ಪ್ರಥಮ ಓವರಿನಲ್ಲೇ ಓಪನರ್ ಹೇಲಿ ಮ್ಯಾಥ್ಯೂಸ್ (1) ಮತ್ತು ನಾಯಕಿ ಸಾರಾ ಟಯ್ಲರ್ (0) ವಿಕೆಟ್ ಹಾರಿಸಿ ವಿಂಡೀಸಿಗೆ ಭೀತಿಯೊಡ್ಡಿದರು. ಆದರೆ ಇನ್ನೋರ್ವ ಆರಂಭಿಕ ಆಟಗಾರ್ತಿ ಡಿಯಾಂಡ್ರ ಡಾಟಿನ್ ಮತ್ತು ಶಿಮೇನ್ ಕ್ಯಾಂಪ್‌ಬೆಲ್ಸ್ ಸೇರಿಕೊಂಡು ತಂಡವನ್ನು ಮೇಲೆತ್ತಿದರು. ಇವರಿಂದ 3ನೇ ವಿಕೆಟಿಗೆ 70 ರನ್ ಒಟ್ಟುಗೂಡಿತು.
ಆಕ್ರಮಣಕಾರಿ ಆಟವಾಡಿದ ಡಾಟಿನ್ 52 ಎಸೆತಗಳಿಂದ 46 ರನ್ ಸಿಡಿಸಿದರು. ಇದರಲ್ಲಿ 4 ಸಿಕ್ಸರ್, ಒಂದು ಬೌಂಡರಿ ಒಳಗೊಂಡಿತ್ತು. ಬೌಲಿಂಗಿನಲ್ಲೂ ಮಿಂಚಿದ ಡಾಟಿನ್ 2 ವಿಕೆಟ್ ಉರುಳಿಸಿದ್ದರು. ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಕ್ಯಾಂಪ್‌ಬೆಲ್ಸ್ 42 ಎಸೆತ ಎದುರಿಸಿ 45 ರನ್ ಹೊಡೆದರು (4 ಬೌಂಡರಿ, 1 ಸಿಕ್ಸರ್).
ಈ ಜೋಡಿ ಬೇರ್ಪಟ್ಟ ಬಳಿಕ ವಿಂಡೀಸ್ ಮತ್ತೂಂದು ಕುಸಿತ ಕಂಡಿತು. 19 ಓವರ್‌ಗಳ ಮುಕ್ತಾಯಕ್ಕೆ 111 ರನ್ನಿಗೆ 5 ವಿಕೆಟ್ ಕಳೆದುಕೊಂಡಾಗ ಪಂದ್ಯ ರೋಚಕ ಹಂತ ತಲುಪಿತು. ಶ್ರಬೊÕàಲ್ ಪಾಲಾದ ಅಂತಿಮ ಓವರಿನ 2ನೇ ಎಸೆತದಲ್ಲಿ ಕ್ಯಾಂಪ್‌ಬೆಲ್ಸ್ ಔಟಾದರು. ಆದರೆ ಮುಂದಿನ ಎಸೆತದಲ್ಲೇ ಕೈಸಿಯಾ ನೈಟ್ ಬೌಂಡರಿ ಬಾರಿಸಿ ತಂಡದ ಗೆಲುವು ಸಾರಿದರು. ಶ್ರಬೊಲ್ ಬೌಲಿಂಗ್ ಫಿಗರ್ ಹೀಗಿತ್ತು: 3.3-1-10-3.
ಇಂಗ್ಲೆಂಡ್ ಬ್ಯಾಟಿಂಗ್ ಕುಸಿತ
ವಿಂಡೀಸಿನ ಸಾಂ ಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ನೂರರ ಗಡಿ ದಾಟಿದ್ದೇ ಪವಾಡ. 11ನೇ ಓವರ್ ವೇಳೆ 50 ರನ್ನಿಗೆ ಆಂಗ್ಲರ 6 ವಿಕೆಟ್ ಹಾರಿ ಹೋಗಿತ್ತು. 7ನೇ ವಿಕೆಟಿಗೆ ಜತೆಗೂಡಿದ ಸೋಫಿಯಾ ಡಂಕ್ಲಿ (35) ಮತ್ತು ಅನ್ಯಾ ಶ್ರಬೊಲ್ (29) 58 ರನ್ ಪೇರಿಸಿ ತಂಡವನ್ನು ಮೇಲೆತ್ತಿದರು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-20 ಓವರ್‌ಗಳಲ್ಲಿ 8 ವಿಕೆಟಿಗೆ 115 (ಡಂಕ್ಲಿ 35, ಶ್ರಬೊಲ್ 29, ಬೀಮೌಂಟ್ 23, ಸೆಲ್ಮಾನ್ 15ಕ್ಕೆ 2, ಡಾಟಿನ್ 21ಕ್ಕೆ 2). ವೆಸ್ಟ್ ಇಂಡೀಸ್-19.3 ಓವರ್‌ಗಳಲ್ಲಿ 6 ವಿಕೆಟಿಗೆ 117 (ಡಾಟಿನ್ 46, ಕ್ಯಾಂಪ್‌ಬೆಲ್ಸ್ 45, ಶ್ರಬೊಲ್ 10ಕ್ಕೆ 3). ಪಂದ್ಯಶ್ರೇಷ್ಠ: ಡಿಯಾಂಡ್ರ ಡಾಟಿನ್.
ಆಫ್ರಿಕಾ ಬಲೆಗೆ ಬಿದ್ದ ಬಾಂಗ್ಲಾ
ದಕ್ಷಿಣ ಆಫ್ರಿಕಾ-109/9; ಬಾಂಗ್ಲಾದೇಶ-79/5
ಗ್ರಾಸ್ ಐಲೆಟ್: ವನಿತಾ ಟಿ20 ವಿಶ್ವಕಪ್ ಕೂಟದ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 30 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಸಮಾಧಾನಪಟ್ಟಿತು. ಇದು ಹರಿಣಗಳ ಪಡೆಗೆ ಒಲಿದ 2ನೇ ಜಯ. ಬಾಂಗ್ಲಾದೇಶ ಆಡಿದ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಗಳಿಸಿದ್ದು 9 ವಿಕೆಟಿಗೆ 109 ರನ್ ಮಾತ್ರ. ನಿಧಾನ ಗತಿಯಲ್ಲಿ ಜವಾಬು ನೀಡಿದ ಬಾಂಗ್ಲಾ 5 ವಿಕೆಟಿಗೆ 79 ರನ್ ಮಾಡಿ ಶರಣಾಯಿತು. ಎರಡೂ ತಂಡಗಳು ಈ ಪಂದ್ಯಕ್ಕೂ ಮೊದಲೇ ನಾಕೌಟ್ ರೇಸ್‌ನಿಂದ ಹೊರಬಿದ್ದಿದ್ದವು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-20 ಓವರ್‌ಗಳಲ್ಲಿ 9 ವಿಕೆಟಿಗೆ 109 (ಕಾಪ್ 25, ಲೀ 21, ನೀಕರ್ಕ್ 25, ಸಲ್ಮಾ ಖಾತುನ್ 20ಕ್ಕೆ 3, ಖತೀಜಾ ಕುಬ್ರ 18ಕ್ಕೆ 2). ಬಾಂಗ್ಲಾದೇಶ-20 ಓವರ್‌ಗಳಲ್ಲಿ 5 ವಿಕೆಟಿಗೆ 79 (ರುಮಾನಾ ಅಹ್ಮದ್ ಔಟಾಗದೆ 34, ಫರ್ಗಾನಾ ಹಕ್ 19, ಡೇನಿಯಲ್ಸ್ 6ಕ್ಕೆ 1).
ಪಂದ್ಯಶ್ರೇಷ್ಠ: ಮರಿಜಾನ್ ಕಾಪ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಟವರ್ ನಿರ್ಮಾಣ ಕಾಮಗಾರಿ ವಿಳಂಬವಾದರೆ ಕ್ರಿಮಿನಲ್ ದಾವೆ: ಸಂಸದ ಕೋಟ
Mangaluru: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.