1984ರ ಸಿಕ್ಖ ವಿರೋಧಿ ದೊಂಬಿ: ಯಶ್‌ಪಾಲ್‌ಗೆ ನೇಣು,ನರೇಶ್‌ಗೆ ಜೀವಾವಧಿ
Team Udayavani, Nov 20, 2018, 5:19 PM IST
ಹೊಸದಿಲ್ಲಿ : 1984ರ ಸಿಕ್ಖ ದೊಂಬಿ ಪ್ರಕರಣದಲ್ಲಿ ದಿಲ್ಲಿ ಕೋರ್ಟ್ ಇಂದು ಯಶ್‌ಪಾಲ್ ಸಿಂಗ್ ಗೆ ಮರಣ ದಂಡನೆಯನ್ನು ಮತ್ತು ನರೇಶ್ ಶೇರಾವತ್ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ಈ ಇಬ್ಬರೂ ಆರೋಪಿಗಳು ಸಿಕ್ಖ ಸಮುದಾಯದ ಇಬ್ಬರು ಸದಸ್ಯರನ್ನು ಕೊಂದ ಅಪರಾಧ ಎಸಗಿದವರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಪ್ರಕರಣದ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ, ಈ ಇಬ್ಬರೂ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿತ್ತು. ಈ ಅಪರಾಧಿಗಳು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಜನಾಂಗೀಯ ಹತ್ಯೆ ನಡೆಸಿದ್ದು ಇದು ಅಪರೂಪದಲ್ಲೇ ಅಪರೂಪದ ಅಪರಾಧವಾಗಿರುವುದರಿಂದ ಇವರಿಗೆ ಮರಣ ದಂಡನೆ ವಿಧಿಸುವಂತೆ ಎಸ್‌ಐಟಿ ಆಗ್ರಹಿಸಿತ್ತು.
ಈ ಇಬ್ಬರು ಅಪರಾಧಿಗಳು ದಕ್ಷಿಣ ದಿಲ್ಲಿಯ ಮಹಿಪಾಲಪುರ ದಲ್ಲಿ ದೊಂಬಿಯ ವೇಳೆ ಹರದೇವ್ ಸಿಂಗ್ ಮತ್ತು ಅವತಾರ್ ಸಿಂಗ್ ಎಂಬವರನ್ನು ಕೊಂದಿದ್ದರು ಎಂದು ಎಸ್‌ಐಟಿ ಹೇಳಿದೆ.
1984ರ ಸಿಕ್ಖ ವಿರೋಧಿ ದಂಗೆಯಲ್ಲಿ ಸುಮಾರು 3,000 ಮಂದಿಯ ಹತ್ಯೆ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.