ಬಲ್ಲವನೇ ಬಲ್ಲ ಬೆಲ್ಲದ ರುಚಿಯ…


Team Udayavani, Nov 21, 2018, 6:00 AM IST

w-5.jpg

ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ಸಕ್ಕರೆಯ ಬದಲಿಗೆ ಬೆಲ್ಲದ ಬಳಕೆ ಒಳ್ಳೆಯದು. ಬೆಲ್ಲದ ಬೆಲೆ ಕೂಡಾ ಕಡಿಮೆಯೇ ಇದೆ. ಹಾಗಿದ್ದರೂ ಹರಳಿನಂತಿದೆ, ಅಗತ್ಯವಿರುವಷ್ಟೇ ಬಳಕೆಗೆ ಸಿಗುತ್ತದೆ ಎಂಬ ಕಾರಣದಿಂದ ಜನ ಸಕ್ಕರೆಗೆ ಮರುಳಾಗಿದ್ದಾರೆ. ಆದರೆ, ಬೆಲ್ಲದ ರುಚಿಗೆ ಸಕ್ಕರೆ ಎಂದೂ ಸಾಟಿಯಾಗಲಾರದು. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬ ಗಾದೆ ಮಾತೇ ಇದೆ ಅಂದಮೇಲೆ, ಬೆಲ್ಲದ ಹಿರಿಮೆಯನ್ನು ವಿವರಿಸುವ ಅಗತ್ಯವೇ ಇಲ್ಲ. ಬೆಲ್ಲದಿಂದ ಮಾಡಬಹುದಾದ ಸ್ವಾದಿಷ್ಟ ತಿನಿಸುಗಳು ಇಲ್ಲಿವೆ. ಸಿಹಿಯ ಜೊತೆಗೆ ಇರಲಿ ಎಂದು, ಸುಲಭವಾಗಿ ತಯಾರಿಸಬಲ್ಲ ಬ್ರೆಡ್‌ ಪಕೋಡದ ರೆಸಿಪಿಯನ್ನೂ ಕೊಟ್ಟಿದ್ದೇವೆ. 

1. ಬೂದುಗುಂಬಳದ ಹಲ್ವ (ದಂರೋಟ್‌ )
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಕುಂಬಳಕಾಯಿ ತುರಿ- 1ಕಪ್‌, ಹೆರೆದ ಉಂಡೆ ಬೆಲ್ಲದ ಪುಡಿ- 1 ಕಪ್‌, ದ್ರಾಕ್ಷಿ , ಗೋಡಂಬಿ, ಏಲಕ್ಕಿ ಪುಡಿ, ತುಪ್ಪ. 

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ, ತುಪ್ಪದ ಜಿಡ್ಡಿಗೆ ಹೆರೆದ ಉಂಡೆ ಬೆಲ್ಲದ ಪುಡಿಯನ್ನು ಏಲಕ್ಕಿ ಪುಡಿಯೊಂದಿಗೆ ಹಾಕಿ ಬೆಚ್ಚಗಾಗಿಸಿ, ಅದಕ್ಕೆ ಕುಂಬಳಕಾಯಿ ತುರಿಯನ್ನು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ. ಕುಂಬಳಕಾಯಿ ತುರಿಯಲ್ಲಿ ನೀರಿನಂಶ ಇರುವುದರಿಂದ ಬೇರೆ ನೀರಿನ ಅಗತ್ಯ ಇರುವುದಿಲ್ಲ. ಸ್ವಲ್ಪ ಮೇಲು¤ಪ್ಪ ಹಾಕಿ ಮಗಚುತ್ತಿರಿ. ಆ ಮಿಶ್ರಣ ಪಾತ್ರೆಯನ್ನು ಬಿಟ್ಟು ಬರುತ್ತಿದೆಯೆಂದರೆ ಹಲ್ವಾ ಸಿದ್ಧವಾದಂತೆ. ತುಪ್ಪ ಹಚ್ಚಿದ ಇನ್ನೊಂದು ಪಾತ್ರೆಗೆ ಈ ಮಿಶ್ರಣವನ್ನು ವರ್ಗಾಯಿಸಿ, ಹುರಿದ ದ್ರಾಕ್ಷಿ ಗೋಡಂಬಿಗಳನ್ನು ಸೇರಿಸಿದರೆ ಸ್ವಾದಿಷ್ಟ ಹಲ್ವಾ ಸಿದ್ಧ. 

2. ಜಾಮೂನು 
ಬೇಕಾಗುವ ಸಾಮಗ್ರಿ: ಜಾಮೂನು ಮಿಶ್ರಣ, ಬೆಲ್ಲದ ಪುಡಿ, ಏಲಕ್ಕಿ ಪುಡಿ.

ಮಾಡುವ ವಿಧಾನ: ಬೆಲ್ಲದ ಪುಡಿಗೆ ಸಮ ಪ್ರಮಾಣದ ನೀರು ಹಾಕಿ ಕರಗಿಸಿ, ಮಧ್ಯಮ  ಉರಿಯಲ್ಲಿ ಬುರುಗು ಬರುವಷ್ಟು ಸಮಯ ಕುದಿಸಿ. ಹಾಗೆ ತಯಾರಾದ ಬೆಲ್ಲದ ದ್ರಾವಣವನ್ನು ಶೋಧಿಸಿ, ಅದನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ಪರಿಮಳಕ್ಕೆ ಏಲಕ್ಕಿ ಪುಡಿ ಸೇರಿಸಿ. ನಂತರ, ಸಣ್ಣ ಉರಿಯಲ್ಲಿ ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಲು ಬಿಟ್ಟು, ಜಾಮೂನು ಮಿಶ್ರಣವನ್ನು ತುಸು ನೀರು ಹಾಕಿ, ನಾದದೇ, ಮೃದುವಾಗಿ ಕಲೆಸಿಟ್ಟುಕೊಳ್ಳಿ. ಅಂಗೈಗೆ ತುಪ್ಪ ಸವರಿಕೊಂಡು ಕಲೆಸಿಟ್ಟು ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಸಣ್ಣ ಸಣ್ಣ ಉಂಡೆ/ಬೇಕಾದ ಆಕಾರ ಮಾಡಿಕೊಂಡು ಕಾದಿರುವ ಎಣ್ಣೆಯಲ್ಲಿ ಬಿಡಿ. (ಉರಿ ಹೆಚ್ಚಿಸಿದರೆ ಜಾಮೂನಿನ ಹೊರಭಾಗ ಕಂದು ಬಣ್ಣವಾಗಿ ಒಳಗೆ ಬೇಯದಿರುವ ಸಾಧ್ಯತೆ ಇದೆ) ಬಿಳಿಯ ಉಂಡೆಗಳು ಹೊಂಬಣ್ಣಕ್ಕೆ ತಿರುಗಿದಾಗ ತೆಗೆದು ಬದಿಗಿಟ್ಟುಕೊಳ್ಳಿ. ಮುಂದಿನ ಜಾಮೂನುಗಳ ಉಂಡೆ ತಯಾರಿಸಿ ಎಣ್ಣೆಯಲ್ಲಿ ಬೇಯಲು ಬಿಟ್ಟ ನಂತರ  ತೆಗೆದಿರಿಸಿದ  ಜಾಮೂನುಗಳನ್ನು (ಜಾಮೂನನ್ನು ಮುರಿದು ನೋಡಿದಾಗ ಮೇಲಿನ ಪದರ ತುಸು  ಗರಿಗರಿ ಹಾಗು ಒಳಗಿನ ತಿರುಳು ಮೃದುವಾಗಿ ಸಂಪೂರ್ಣ ಬೆಂದಿರುವುದನ್ನು ಕಾಣಬಹುದು) ಬೆಲ್ಲದ ದ್ರಾವಣಕ್ಕೆ ಒಂದೊಂದಾಗಿ ಹಾಕಿ, ಸಿಹಿ ಹೀರಲು ಬಿಡಿ. ಹದಿನೈದರಿಂದ ಇಪ್ಪತ್ತು ನಿಮಿಷ ಸಿಹಿಯಲ್ಲಿ ಊದಿದ, ಬಿರುಕಿಲ್ಲದಂತೆ ಕಾಣಿಸುವ ಜಾಮೂನು ರುಚಿಕರವಾಗಿ ಇರುತ್ತದೆ. 

ಕೆ.ವಿ.ರಾಜಲಕ್ಷ್ಮಿ 
                                                 
1. ಬ್ರೆಡ್‌ ಪಕೋಡ:
ಬೇಕಾಗುವ ಸಾಮಗ್ರಿ: ಬ್ರೆಡ್‌- 1 ಪೌಂಡ್‌, ಕಡ್ಲೆ ಹಿಟ್ಟು- 1 ಕಪ್‌, ಜೀರಿಗೆ 1ಚಮಚ, ಆಲೂಗಡ್ಡೆ-4, ಇಂಗು-ಸ್ವಲ್ಪ, ಉದ್ದಿನಬೇಳೆ-1ಚಮಚ, ಸಾಸಿವೆ -1 ಚಮಚ, ಕರಿಬೇವು-ಒಗ್ಗರಣೆಗೆ, ಅರಿಶಿಣ ಪುಡಿ -1/2ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು.

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಕಡ್ಲೆ ಹಿಟ್ಟು, ಉಪ್ಪು , ಜೀರಿಗೆ ಮತ್ತು 1ಕಪ್‌ ನೀರನ್ನು ಹಾಕಿ, ಆ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಬೇಯಿಸಿ, ಚೆನ್ನಾಗಿ ಹಿಸುಕಿಕೊಳ್ಳಿ. ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ ಪುಡಿ, ಇಂಗು ಹಾಕಿ, ಒಗ್ಗರಣೆಯನ್ನು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಿಸುಕಿದ ಆಲೂಗಡ್ಡೆಗೆ ಹಾಕಿ ಚೆನ್ನಾಗಿ ಕಲಸಿ. ನಂತರ, ಒಂದೊಂದು ಬ್ರೆಡ್‌ಅನ್ನು ತ್ರಿಕೋನಾಕಾರವಾಗಿ ಎರಡು ತುಂಡುಗಳಾಗಿ ಕತ್ತರಿಸಿ, ಒಂದು ಬ್ರೆಡ್‌ ತುಂಡಿಗೆ ಆಲೂಗಡ್ಡೆ ಮಿಶ್ರಣ ಹಾಕಿ, ಇನ್ನೊಂದು ಬ್ರೆಡ್‌ ತುಂಡಿನಿಂದ ಮುಚ್ಚಿ. ಅದನ್ನು, ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆದು, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿದು ತೆಗೆಯಿರಿ. 

ಸುಷ್ಮಾ ಪೈ, ಬೆಂಗಳೂರು
 

ಟಾಪ್ ನ್ಯೂಸ್

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Railway-Minister-MP-DK

Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.