ಸಹಕಾರಿ ಸಪ್ತಾಹ: ಕಾಸರಗೋಡಿನಲ್ಲಿ ವರ್ಣಚಿತ್ರ ವೈಭವ
Team Udayavani, Nov 21, 2018, 3:55 AM IST
ಕಾಸರಗೋಡು: 65 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕೇರಳ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ವರ್ಣಚಿತ್ರ ವೈಭವ ಗಮನ ಸೆಳೆಯಿತು. ಕಾಸರಗೋಡು ಜಿಲ್ಲಾ ಗ್ರಂಥಾಲಯದ ಆವರಣದಲ್ಲಿ ಪ್ರಕೃತಿ ರಮಣೀಯ ದೃಶ್ಯ ಸಾನ್ನಿಧ್ಯದಲ್ಲಿ ಜಲವರ್ಣ ಮಾಂತ್ರಿಕ ಪಿ.ಎಸ್.ಪುಣಿಂಚಿತ್ತಾಯ ಅವರು ಚಿತ್ರ ಬಿಡಿಸಿ ಪ್ರಾತ್ಯಕ್ಷಿಕೆ ನೀಡಿ ವರ್ಣಚಿತ್ರ ವೈಭವವನ್ನು ಉದ್ಘಾಟಿಸಿದರು. ಕೇರಳದಾದ್ಯಂತ ವಿವಿಧ ಜಿಲ್ಲೆಗಳಿಂದ ತಲುಪಿದ ಸಹಕಾರಿ ಧುರೀಣರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು.
ಕಾಸರಗೋಡು ಜಿಲ್ಲೆಯ ಇಪ್ಪತ್ತು ಚಿತ್ರ ಕಲಾವಿದರು ಸಮಕಾಲೀನ ಸಂದರ್ಭಗಳನ್ನು ಕುಂಚದಲ್ಲಿ ನಿರೂಪಿಸಿದರು. ವರ್ತಮಾನದ ಅವ್ಯವಸ್ಥೆ, ತವಕ, ತಲ್ಲಣಗಳು, ಪ್ರಗತಿಪರ ಆಶಯಗಳು, ರಾಜಕೀಯ ಸಾಮಾಜಿಕ ವಿದ್ಯಮಾನಗಳು, ಜಾತಿ, ಮತ, ಧರ್ಮದ ಗೋಡೆಗಳನ್ನು ಕೆಡಹಿ ಐಕ್ಯತೆಯ ಸಂದೇಶ ಸಾರುವ ಭಾವ-ಅನುಭಾವದ ವರ್ಣಚಿತ್ರಗಳು ಕ ಕಲಾಕುಂಚದಲ್ಲಿ ಮೂಡಿ ಬಂದುವು.
ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರ ನೇತೃತ್ವದಲ್ಲಿ ನಡೆದ ಈ ಚಿತ್ರ ರಚನಾ ಪ್ರದರ್ಶನದಲ್ಲಿ ಅವರ ಪುತ್ರ ಪ್ರವೀಣ್ ಪುಣಿಂಚಿತ್ತಾಯ, ಜಯಪ್ರಕಾಶ್ ಶೆಟ್ಟಿ ಬೇಳ, ಇ.ವಿ. ಭಟ್ ಕಾಂಞಂಗಾಡ್, ಎಸ್.ಬಿ.ಕೋಳಾರಿ ಪೆರ್ಣೆ, ನೇಶನಲ್ ಅಬ್ದುಲ್ಲ, ಸುರೇಶ್ ಎಂ. ಮಹಾಲಸಾ, ಸತೀಶ್ ಪೆರ್ಲ, ರವಿ ಪಿಲಿಕೋಡ್, ಇ.ವಿ. ಅಶೋಕನ್, ರಘು ಮಲ್ಲ, ಪ್ರಭಾ ನೀಲೇಶ್ವರ, ಕೆ.ಎಚ್. ಮೊಹಮ್ಮದ್, ದಿನಕರ ಲಾಲ್ ಕೆ.ವಿ., ಕೆ.ವಿ. ರಾಜೇಶ್ ಪಿಲಿಕೋಡ್, ಪ್ರಿಯಾ ಕರುಣನ್, ಶೀಬಾ ಎಯ್ನಾಕೋಟ್, ಅರ್ಜುನ್ ಅರವಿಂದ್ ಮೊದಲಾದವರು ಬಹುವರ್ಣ ವೈವಿಧ್ಯದ ಚಿತ್ರ ರಚಿಸಿದರು. ಮಾರಾಟವಾದ ಚಿತ್ರಗಳಿಗೆ ಬಂದ ಮೊತ್ತವನ್ನು ಮುಖ್ಯ ಮಂತ್ರಿಯವರ ಪರಿಹಾರ ನಿಧಿಗೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.