ಅನುಭವಗಳ ಸಮ್ಮಿಶ್ರಣ ಒಡಲ ಖಾಲಿ ಪುಟ


Team Udayavani, Nov 21, 2018, 2:03 PM IST

21-november-12.gif

ಅನುಭವವು ಸವಿಯಲ್ಲ ಅದರ ನೆನಪೇ ಸವಿಯು ಎಂಬ ಮಾತೊಂದಿದೆ. ಅದರಂತೆ ನಾವು ಬಾಲ್ಯದಿಂದ ತೊಡಗಿ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ಕ್ಷಣಗಳು ವರ್ಷಗಳು ಕಳೆದಾಗ ಮಧುರ ನೆನಪುಗಳಾಗುತ್ತವೆ. ಅಂತಹ ಕೆಲವು ಸುಮಧುರ ನೆನಪುಗಳನ್ನು ಪೋಣಿಸಿ ಹೊರಬಂದ ಕೃತಿಯೇ ಕಾವೇರಿ ಎನ್‌ ಎಸ್‌ ಅವರ ‘ಒಡಲ ಖಾಲಿ ಪುಟ’. ಅನುಭವದ ಜತೆಗೆ ಲೇಖಕಿಯ ವಿಚಾರಗಳ ಅಭಿವ್ಯಕ್ತಿಯೂ ಈ ಪುಸ್ತಕದಲ್ಲಿದೆ. ಭಾವಪುಟಗಳು, ವಿಚಾರ ವಿಹಾರ, ಅಸಂಗತ ಲಹರಿ ಮತ್ತು ಒಲವಿನ ಪುಟಗಳು ಎಂಬ 4 ಭಾಗಗಳು ಇದರಲ್ಲಿದೆ.

ಘಟನೆ 1
ಬಾಲ್ಯದ ಶಾಲಾ ರಜೆಯಲ್ಲಿ ನೆಂಟರ ಮನೆಗೆ ಹೋಗುವ ಲೇಖಕಿ ಅಲ್ಲಿನ ಅನುಭವಗಳನ್ನು ವಿವರಿಸುತ್ತಾರೆ. ನಮ್ಮ ರಜೆಯ ದಿನಗಳು ಜೀವಂತಿಕೆಯಿಂದ ತುಂಬಿರುತ್ತಿದ್ದವು. ಬೆಳಗ್ಗಯಿಂದ ಸಂಜೆಯವರೆಗೆ ಆಟವಾಡಿ, ಬಿದ್ದು- ಎದ್ದು, ಮೈಕೈ ತರಚಿಕೊಂಡು ದಣಿದ ನಾವು ಹಾಸಿಗೆಯ ಮೇಲೆ ಒರಗಿಕೊಂಡರೂ ಮಾತಿನ ಮಳೆ ಸುರಿಯುತ್ತಿತ್ತು. ಮಾತನಾಡುತ್ತ ಹಾಗೆ ನಿದ್ದೆಗೆ ಜಾರುವ ನಾವುಗಳು ಒಮ್ಮೊಮ್ಮೆ ನಿದ್ದೆಯಲ್ಲೂ ನಗು, ಮಾತು ಮುಂದುವರಿಸುತಿದ್ದೆವು. ಮೊಬೈಲ್‌ನಲ್ಲಿ ಕಳೆದ ಹೋದ ಇಂದಿನ ಮಕ್ಕಳಿಗೆ ಶಾಲಾ ರಜೆ ಬಂದು ಹೋದುದರ ಪರಿವೇ ಇರುವುದಿಲ್ಲ.

ಘಟನೆ 2
ಉದ್ಯೋಗದಲ್ಲಿ ಸಮಾನತೆ ಇರಬೇಕೆಂದು ಹೇಳುತ್ತಾ ಕವೇರಿ ಎಸ್‌ಎನ್‌ ಅವರು ಹೀಗೆ ಹೇಳುತ್ತಾರೆ. ಅವಮಾನ ಸವಾಲಾಗಬೇಕು. ಆಗ ನಾವು ಜೀವನ ಕಾರ್ಯದಲ್ಲೂ ಪಕ್ವಗೊಳ್ಳತ್ತೇವೆ. ಆತ್ಮ ವಿಶ್ವಾಸ, ಕಾರ್ಯ ಶಿಸ್ತು, ಸಮಯ ಪಾಲನೆ ನಮ್ಮನ್ನು ಕೈ ಬಿಡುವುದಿಲ್ಲ. ಇದು ನಮಗೆ ಅವಕಾಶಗಳನ್ನು ಒದಗಿಸುತ್ತದೆ. ನಾವು ಅವಕಾಶಕ್ಕಾಗಿ ಕಾಯದೆ, ಅವಕಾಶಗಳು ನಮ್ಮೆಡೆಗೆ ಬರುವಂತೆ ಕಾರ್ಯ ಪ್ರವೃತ್ತರಾಗಬೇಕು.

ಘಟನೆ 3
ಸೋಲು ಗೆಲುವುಗಳೆರಡೂ ಜೀವನದಲ್ಲಿ ಸಾಮಾನ್ಯವಾದ ವಿಷಯ. ಪ್ರತಿ ಬಾರಿಯೂ ಸೋಲನ್ನೊಪ್ಪಿಕೊಳ್ಳುವಾಗಲೂ ನನ್ನಲ್ಲಿ ಒಂದು ರೀತಿಯ ದುಗುಡ ಆವರಿಸಿಕೊಳ್ಳುತ್ತದೆ. ಮರುಕ್ಷಣ ಎಚ್ಚರಗೊಂಡು ಪುಟಿಯುತ್ತೇನೆ. ಇದು ನನ್ನೊಳಗಿನ ನಿರಂತರ ಪ್ರಕ್ರಿಯೆ. ಇದರಿಂದ ನನ್ನಲ್ಲಿನ ಚೈತನ್ಯ ಇಮ್ಮಡಿಗೊಳ್ಳುತ್ತದೆ. ನನ್ನಲ್ಲೇ ಇರುವ ತಪ್ಪುಗಳನ್ನು ಹುಡುಕಿ, ತಿದ್ದುತ್ತಾ ಸಾಗಿದಾಗ ಜೀವನ ಭಾರವೆನಿಸುವುದಿಲ್ಲ. ಕೆಲವೊಮ್ಮೆ ಬದುಕು ಬಂಜರವೆನಿಸಿದರೂ ಮತ್ತೊಮ್ಮೆ ನಮಗೇ ತಿಳಿಯದ ರೀತಿಯಲ್ಲಿ ಬೆಳಕ ಹರಿಸುತ್ತಿರುತ್ತದೆ.

 ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.