ಥಿಯೇಟರ್‌ನಲ್ಲಿ ಬುಲೆಟ್ ಸೌಂಡ್ ಕೇಳಲಿದ್ದಾರೆ ಬಿಎಸ್‍ವೈ
Team Udayavani, Nov 21, 2018, 3:39 PM IST
ನವರಸನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ “8 ಎಂಎಂ’ ಚಿತ್ರ ರಾಜ್ಯಾದ್ಯಂದ ತೆರೆಕಂಡಿದ್ದು, ಸಿನಿಪ್ರಿಯರಿಂದ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಸ್ಯಾಂಡಲ್ವುಡ್ ತಾರೆಯರೂ ಕೂಡ ಸಿನಿಮಾವನ್ನು ವೀಕ್ಷಿಸಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಹಾಸ್ಯ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಜಗ್ಗೇಶ್ ಅವರು ಈ ಚಿತ್ರದಲ್ಲಿ ವಿಭಿನ್ನ ಗೆಟಪ್‍ನಲ್ಲಿರುವುದನ್ನು ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.
ಇದೀಗ ಬಿಜೆಪಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು “8ಎಂಎಂ’ ಚಿತ್ರವನ್ನು ನೋಡಲು ಕಾತುರರಾಗಿದ್ದಾರಂತೆ. ಅಲ್ಲದೇ ಇದೇ ಹಿನ್ನಲೆಯಲ್ಲಿ ಜಗ್ಗೇಶ್ ಹಾಗೂ ಯಡಿಯೂರಪ್ಪ ಸೇರಿದಂತೆ ಇನ್ನೂ ಹಲವರು ಓರಿಯನ್ ಮಾಲ್ಗೆ ಇಂದು ಸಂಜೆ 06:30ಕ್ಕೆ ಭೇಟಿ ನೀಡುತ್ತಿದ್ದಾರಂತೆ. ಇನ್ನು ಈ ಬಗ್ಗೆ ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದು, ಯಡಿಯೂರಪ್ಪ “8ಎಂಎಂ’ ಚಿತ್ರ ನೋಡಲು ಬರುತ್ತಾರೆ.. ಅವರಿಗೆ ನಮ್ಮ ಚಿತ್ರತಂಡದಿಂದ ತುಂಬು ಹೃದಯದ ಸ್ವಾಗತ.. ನಾನು ಇರುವೆ ನೀವು ಬನ್ನಿ ಭೇಟಿಯಾಗುವ.. ಧನ್ಯವಾದಗಳು.. ಎಂದು ಬರೆದುಕೊಂಡಿದ್ದಾರೆ.
ಇಂದು #orionmall ನಲ್ಲಿ ಸಂಜೆ 6.30pm @BSYBJP #8mm ಚಿತ್ರ ನೋಡಲು ಬರುತ್ತಾರೆ..ಅವರಿಗೆ ನಮ್ಮ ಚಿತ್ರತಂಡದಿಂದ ತುಂಬು ಹೃದಯದ ಸ್ವಾಗತ..ನಾನು ಇರುವೆ ನೀವುಬನ್ನಿ ಬೇಟಿಯಾಗುವ..ಧನ್ಯವಾದಗಳು.. pic.twitter.com/PCVxrgxzjf
— ನವರಸನಾಯಕ ಜಗ್ಗೇಶ್ (@Jaggesh2) November 21, 2018
ಇನ್ನು “8 ಎಂಎಂ’ ಚಿತ್ರವು ಒಬ್ಬ ಕ್ರಿಮಿನಲ್ ಮತ್ತು ಪೋಲಿಸ್ ನಡುವೆ ನಡೆಯುವ ಒಂದು ಹೊಸ ರೀತಿಯ ಸಸ್ಪೆನ್ಸ್ ಕಥಾಹಂದರವನ್ನೊಳಗೊಂಡಿದ್ದು, “ನೀರ್ ದೋಸೆ’ ನಂತರ ನವರಸ ನಾಯಕ ಜಗ್ಗೇಶ್ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಹರಿಕೃಷ್ಣ ನಿರ್ದೇಶಿಸಿದ್ದು, ನಾರಾಯಣ ಸ್ವಾಮಿ ಇನ್ಪೆಂಟ್ ಪ್ರದೀಪ್, ಸಲೀಮ್ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದ್ದು, ವಸಿಷ್ಠ ಸಿಂಹ, ರಾಕ್‍ಲೈನ್ ವೆಂಕಟೇಶ್, ಮಯೂರಿ ಸೇರಿದಂತೆ ಬಹುದೊಡ್ಡ ತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.