ಯಾರು ಹಿತವರು ಈ ಮೂವರೊಳಗೆ?


Team Udayavani, Nov 22, 2018, 6:00 AM IST

bastar.jpg

ರಮಣ್‌ ಸಿಂಗ್‌ ಸರ್ಕಾರದಲ್ಲಿನ ವೈಫ‌ಲ್ಯಗಳನ್ನು ಎತ್ತಿಕೊಂಡು ಪ್ರಚಾರ ನಡೆಸುವಲ್ಲಿ ಕಾಂಗ್ರೆಸ್‌ ಸಫ‌ಲವಾಗಿದ್ದರೂ, ಪಕ್ಷದಲ್ಲಿನ ನಾಯಕತ್ವ ಮತ್ತು ಸಂಘಟನಾ ಕೌಶಲ್ಯದ ಕೊರತೆಯು ಕಾಂಗ್ರೆಸ್‌ಗೆ ಮುಳ್ಳಾಗಬಹುದು. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್‌ಬ್ಯಾಂಕ್‌ ಈ ಬಾರಿ ಅಜಿತ್‌ ಜೋಗಿ ಅವರ ಪಾಲಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಅಬ್ಬರದ ಪ್ರಚಾರ, ಭಾಷಣದ ಭರಾಟೆಯನ್ನು ಕಂಡ ಬುಡಕಟ್ಟು ರಾಜ್ಯ ಛತ್ತೀಸ್‌ಗಡ ಈಗ ಶಾಂತವಾಗಿದೆ. 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡು ಹಂತದ ಮತದಾನ ಮುಗಿದಿದ್ದು, ಶೇ.76 ಮತ ದಾಖಲಾಗಿದೆ. 2013ಕ್ಕೆ ಹೋಲಿಸಿದರೆ(ಶೇ.77.12) ಈ ಬಾರಿ ಮತದಾನ ಪ್ರಮಾಣ ಕಡಿಮೆ. ಆದರೆ, ಈ ಚುನಾವಣೆ ವಿಶೇಷವಂತೂ ಹೌದು.
 
ಏಕೆಂದರೆ, ಛತ್ತೀಸ್‌ಗಡದಲ್ಲಿ ಇಷ್ಟೂ ವರ್ಷ ಪ್ರಬಲ ಪಕ್ಷಗಳೆಂದು ಇದ್ದಿದ್ದು ಬಿಜೆಪಿ ಮತ್ತು ಕಾಂಗ್ರೆಸ್‌ ಮಾತ್ರ. ಈ ಎರಡು ಪಕ್ಷಗಳ ನಡುವೆಯೇ ತೀವ್ರ ಪೈಪೋಟಿ ನಡೆದು, ರೋಮಾಂಚಕಾರಿ ಫ‌ಲಿತಾಂಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿತ್ತು.

ಆದರೆ, ಈ ಬಾರಿಯ ಚಿತ್ರಣ ಬದಲಾಗಿದೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ), ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್‌ ಛತ್ತೀಸ್‌ಗಡ(ಜೆ) ಮತ್ತು ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಮೈತ್ರಿ ಮಾಡಿಕೊಂಡಿರುವುದು ಈ ಸಲದ ಚುನಾವಣೆಗೆ ಹೊಸ ಟ್ವಿಸ್ಟ್‌ ಕೊಟ್ಟಿದೆ. ಈ ಮೈತ್ರಿ ಪಕ್ಷದಿಂದ ಲಾಭ ಯಾರಿಗೆ, ನಷ್ಟ ಯಾರಿಗೆ ಎಂಬುದೇ ಅತ್ಯಂತ ಕುತೂಹಲದ ಸಂಗತಿ.

2003ರಿಂದಲೂ ಇಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಲಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರು ದೀರ್ಘಾವಧಿ ಆಡಳಿತ ನಡೆಸಿರುವ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಯನ್ನೂ ಗಳಿಸಿದವರು. ಭಾರತದ ಅನ್ನದ ಬಟ್ಟಲು ಎಂದು ಹೆಸರು ಗಳಿಸಿರುವ ಛತ್ತೀಸ್‌ಗಡದಲ್ಲಿ 20ಸಾವಿರ ವಿಧದ‌ ಅಕ್ಕಿ ಬೆಳೆಯಲಾಗುತ್ತದೆ. ಹೀಗಾಗಿ ಅನ್ನದಾತರನ್ನು ಕೇಂದ್ರವಾಗಿಟ್ಟುಕೊಂಡು ಹಲವು ಸಬ್ಸಿಡಿ ಅಕ್ಕಿ ಯೋಜನೆಗಳನ್ನು ಘೋಷಿಸಿದ ಹಿರಿಮೆ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರದ್ದು. ಇದಕ್ಕಾಗಿ ಅವರನ್ನು “ಚಾವಲ್‌ ಬಾಬಾ’ ಎಂದೂ ಕರೆಯಲಾಗುತ್ತದೆ. 15 ವರ್ಷಗಳ ಆಡಳಿತದಲ್ಲಿ ರಾಜ್ಯದಲ್ಲಾದ ಅಭಿವೃದ್ಧಿ ಕೆಲಸಗಳು ಹಾಗೂ ಸಾಧನೆಗಳನ್ನು ಮುಂದಿಟ್ಟುಕೊಂಡು ಅವರು ಮತ ಬೇಟೆಗೆ ಯತ್ನಿಸಿದ್ದಾರೆ.

15 ವರ್ಷ ಎಂದ ಮೇಲೆ, ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಇದ್ದೇ ಇರುತ್ತದೆ. ಇದನ್ನು ದಾಳವಾಗಿಸಿಕೊಂಡಿರುವ ಕಾಂಗ್ರೆಸ್‌, ರಾಜ್ಯದ ರೈತರ ಸಂಕಷ್ಟಗಳನ್ನೇ ಚುನಾವಣಾ ವಿಷಯವಾಗಿರಿಸಿಕೊಂಡಿತ್ತಲ್ಲದೆ, ತಮ್ಮ ಪಕ್ಷ ಅಧಿಕಾರಕ್ಕೆಬಂದರೆ 10 ದಿನಗಳಲ್ಲೇ
ರೈತರ ಸಾಲ ಮನ್ನಾ, ಭತ್ತ ಖರೀದಿ ಬೋನಸ್‌, ಆಹಾರ ಸಂಸ್ಕರಣಾ ಘಟಕ ಸ್ಥಾಪನೆ ಮಾಡುತ್ತೇವೆ ಎಂದೆಲ್ಲ ಆಶ್ವಾಸನೆಗಳನ್ನು ನೀಡಿದೆ. ರಮಣ್‌ ಸಿಂಗ್‌ ಸರ್ಕಾರದಲ್ಲಿನ ವೈಫ‌ಲ್ಯಗಳನ್ನು ಎತ್ತಿಕೊಂಡು ಪ್ರಚಾರ ನಡೆಸುವಲ್ಲಿ  ಕಾಂಗ್ರೆಸ್‌ ಸಫ‌ಲವಾಗಿದ್ದರೂ, ಪಕ್ಷದಲ್ಲಿನ ನಾಯಕತ್ವ ಮತ್ತು ಸಂಘಟನಾ ಕೌಶಲ್ಯದ ಕೊರತೆಯು ಕಾಂಗ್ರೆಸ್‌ಗೆ ಮುಳ್ಳಾಗಬಹುದು. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ವೋಟ್‌ಬ್ಯಾಂಕ್‌ ಈ ಬಾರಿ ಅಜಿತ್‌ ಜೋಗಿ ಅವರ ಪಾಲಾಗುವ ಸಾಧ್ಯತೆಯೂ ಇಲ್ಲದಿಲ್ಲ.

ಒಟ್ಟು 90 ಕ್ಷೇತ್ರಗಳ ಪೈಕಿ 24 ಅಸೆಂಬ್ಲಿ ಸೀಟುಗಳನ್ನು ಹೊಂದಿರುವ ಬಿಲಾಸ್ಪುರ ವಿಭಾಗವು ರಾಜ್ಯ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. 2013ರಲ್ಲಿ ಬಿಲಾಸ್ಪುರ ವಿಭಾಗದಲ್ಲಿನ 5 ಜಿಲ್ಲೆಗಳಲ್ಲಿ ಹೆಗಲೆಣೆಯ ಹಣಾಹಣಿ ನಡೆದಿದ್ದು, ಬಿಜೆಪಿ 12, ಕಾಂಗ್ರೆಸ್‌ 11 ಮತ್ತು ಬಿಎಸ್‌ಪಿ ಒಂದು ಸೀಟುಗಳಲ್ಲಿ ಜಯ ಸಾಧಿಸಿತ್ತು. ಗಮನಾರ್ಹ ಅಂಶವೆಂದರೆ, ಜಯಜೈಪುರ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದ್ದ ಬಿಎಸ್‌ಪಿ, 2 ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಹಾಗೂ ಉಳಿದ 7 ಕ್ಷೇತ್ರಗಳಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಪ್ರದರ್ಶನ ತೋರಿತ್ತು. ಈ ಬಾರಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸ್‌ಗಡ(ಜೆ) ಜೊತೆ ಬಿಎಸ್‌ಪಿ ಕೈಜೋಡಿಸಿರುವ ಕಾರಣ, ಇಲ್ಲಿ ಬಿಜೆಪಿ-ಕಾಂಗ್ರೆಸ್‌-ಜೋಗಿ ನೇತೃತ್ವದ ಮಿತ್ರಪಕ್ಷದ ನಡುವೆ ತ್ರಿಕೋನ ಹಣಾಹಣಿ ನಡೆಯುವುದು ಖಚಿತ. ಬಿಲಾಸ್ಪುರ ವಿಭಾಗದ 10 ಕ್ಷೇತ್ರಗಳಲ್ಲಿ ಬಿಎಸ್‌ಪಿ ಕಣಕ್ಕಿಳಿದರೆ, ಜೆಸಿಸಿ ಉಳಿದೆಡೆ ಸ್ಪರ್ಧೆಗಿಳಿದಿದೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಬಿಎಸ್ಪಿ ನಾಯಕಿ ಮಾಯಾವತಿಯಂಥ ಘಟಾನುಘಟಿಗಳು ಬಿಲಾಸ್ಪುರ ವಲಯದಲ್ಲಿ ಅಬ್ಬರದ ಪ್ರಚಾರ ನಡೆಸಿರುವುದೇ ಇಲ್ಲಿನ ಕ್ಷೇತ್ರಗಳ ರಾಜಕೀಯ ಪ್ರಾಮುಖ್ಯತೆಗೆ ಸಾಕ್ಷಿ.

35 ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಆ ಪೈಕಿ 12ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಲೇಬೇಕೆಂದು ಮಾಯಾ ಪಣತೊಟ್ಟಿದ್ದಾರೆ. ಈ ಮೂಲಕ, ಕರ್ನಾಟಕದ ಜೆಡಿಎಸ್‌ ಮಾದರಿಯಲ್ಲೇ, ಛತ್ತೀಸ್‌ಗಡ ಸರ್ಕಾರ ರಚನೆ ವೇಳೆ ಕಿಂಗ್‌ ಮೇಕರ್‌ ಆಗಬೇಕು ಎನ್ನುವುದು ಮಾಯಾ ಇಂಗಿತವಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ, ನಾವು ಕನಿಷ್ಠ 15 ಸೀಟುಗಳನ್ನು ಗಳಿಸಿದರೆ, ಸರ್ಕಾರ ರಚನೆಯಲ್ಲಿ ನಮ್ಮ ಪಾತ್ರವನ್ನು ನಿರ್ಲಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುತ್ತಾರೆ ಬಿಎಸ್‌ಪಿ ನಾಯಕರು.

ಈ ಚುನಾವಣೆಯ ಮೊದಲ ಹಂತದಲ್ಲಿ ಶೇ.76.28, ಕೊನೆಯ ಹಂತದಲ್ಲಿ ಶೇ.76.35ರಷ್ಟು ಮತದಾನ ದಾಖಲಾಗಿರುವುದು, ಅದರಲ್ಲೂ  ನಕ್ಸಲ್‌ ಪೀಡಿತ ಪ್ರದೇಶಗಳಲ್ಲೂ  ಜನ ನಿರ್ಭೀತಿಯಿಂದ ಹಕ್ಕು ಚಲಾಯಿಸಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತದಾನಕ್ಕೂ ಮುನ್ನ ನಕ್ಸಲ್‌ ಪೀಡಿತ ಪ್ರದೇಶಗಳ ಜನ, “ನಾವು ಮತ ಚಲಾಯಿಸಿದರೂ ಕೈಬೆರಳಿಗೆ ಶಾಯಿ ಹಾಕಬೇಡಿ. ನಕ್ಸಲರು ಮತದಾನ ಬಹಿಷ್ಕರಿಸುವಂತೆ ಆದೇಶಿಸಿದ್ದಾರೆ. ಬೆರಳಲ್ಲಿ ಶಾಯಿ ನೋಡಿದರೆ ನಮ್ಮ ಜೀವಕ್ಕೆ ಕುತ್ತು ಖಚಿತ’ ಎಂದು ಚುನಾವಣಾಧಿಕಾರಿಗಳ ಮುಂದೆ ಅಲವತ್ತುಕೊಂಡಿದ್ದರು. ಇದಕ್ಕೆ ಬಲವಾದ ಕಾರಣವೂ ಇತ್ತು, ಯಾರಾದರೂ ಹಕ್ಕು ಚಲಾಯಿಸಿದ್ದು ಗೊತ್ತಾದರೆ,ಶಾಯಿ ಹಾಕಿರುವ ನಿಮ್ಮ ಕೈಗಳನ್ನೇ ಕತ್ತರಿಸಿಬಿಡುತ್ತೇವೆ ಎಂಬ ಬೆದರಿಕೆ ನಕ್ಸಲರಿಂದ ಬಂದಿತ್ತು. ಹೀಗಿದ್ದಾ
ಗ್ಯೂ, ಅಚ್ಚರಿಯೆಂಬಂತೆ ಬುಡಕಟ್ಟು ಪ್ರದೇಶಗಳ ಜನ ತಮ್ಮ ಜೀವವನ್ನೇ ಪಣಕ್ಕಿಟ್ಟು ಮತಗಟೆೆrಗಳತ್ತ ಧಾವಿಸಿ, ಹಕ್ಕು ಚಲಾಯಿಸಿದ್ದರು. 

ಇದಕ್ಕೆನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಒಂದು ಲೆಕ್ಕಾಚಾರದ ಪ್ರಕಾರ, ಎಡಪಂಥೀಯ ತೀವ್ರಗಾಮಿತ್ವವನ್ನು ನಿಯಂತ್ರಿಸಲು ರಮಣ್‌ ಸಿಂಗ್‌ ಸರ್ಕಾರ ಕೈಗೊಂಡಿರುವ ಕೆಲವು ಕ್ರಮಗಳೂ ಈ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗುವಲ್ಲಿ ಪರಿಣಾಮ ಬೀರಿರಬಹುದು. ಬಸ್ತಾರ್‌ನಲ್ಲಿ “ಅಮೊcà ಬಸ್ತಾರ್‌,ಅಮೊcà ಪೊಲೀಸ್‌’ (ನನ್ನ ಬಸ್ತಾರ್‌, ನನ್ನ ಪೊಲೀಸ್‌), ಬಿಜಾಪುರದಲ್ಲಿ “ಮನ್ವಾ ಪುನಾ ಬಿಜಾಪುರ್‌'(ನಮ್ಮ ಹೊಸ ಬಿಜಾಪುರ), ಸುಕಾ¾ದಲ್ಲಿ “ತೆಂಡುಮುತ್ಸಾ ಬಸ್ತಾರ್‌’ ಮುಂತಾದ ಕಾರ್ಯಕ್ರಮಗಳು ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿವೆ. ಕಳೆದ ಎರಡೂವರೆ ವರ್ಷಗಳಿಂದ ಇಲ್ಲಿ ಕಮ್ಯೂನಿಟಿ ಪೊಲೀಸಿಂಗ್‌ ಎಂಬ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆ ನಿಯಮಿತವಾಗಿ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಮಾತುಕತೆ ನಡೆಸಲಾಗುತ್ತಿದೆ. ಪೊಲೀಸರು ಯಾವತ್ತೂ ನಿಮ್ಮ ಸಹಾಯಕ್ಕೆಬರುತ್ತಾರೆ ಎಂದು ಗ್ರಾಮಸ್ಥರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಮೂಡಿಸುವ ಕಾರ್ಯಕ್ರಮವಿದು. 

ಇದಲ್ಲದೆ, ಸರ್ಕಾರ ಈ ಬಾರಿ ಮತದಾನದ ವೇಳೆ ಕೈಗೊಂಡ ಬಿಗಿ ಭದ್ರತೆ, ಕುಗ್ರಾಮಗಳನ್ನು ಸಂಪರ್ಕಿಸುವಂತೆ ರಸ್ತೆ ನಿರ್ಮಾಣ, ಮೂಲಸೌಕರ್ಯಗಳ ಅಭಿವೃದ್ಧಿ ಕೂಡ ಜನ ನಿರ್ಭೀತಿಯಿಂದ ಮತ ಚಲಾಯಿಸಲು ಪ್ರೇರಣೆ ನೀಡಿರಬಹುದು. ಇದು ನಿಜವೆಂದಾದರೆ, ರಮಣ್‌ ಸಿಂಗ್‌ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಅವರನ್ನು ಮತ್ತೂಂದು ಅವಧಿಗೆ ಅಧಿಕಾರಕ್ಕೇರಿಸುವಲ್ಲಿ ನೆರವಾಗಬಹುದು.
ಇಲ್ಲಿ ಇನ್ನೊಂದು ಲೆಕ್ಕಾಚಾರವೂ ಇದೆ. ಅಜಿತ್‌ ಜೋಗಿ ಮತ್ತು ಸಿಪಿಐ ಬಸ್ತಾರ್‌ ಪ್ರದೇಶದಲ್ಲಿ ಉತ್ತಮ ಪ್ರಭಾವ ಹೊಂದಿದ್ದು, ದಂತೇವಾಡದ ನಂದ್ರಾಂ ಸೋರಿ(ಸಿಪಿಐ) ಎಂಬ ಬಲಿಷ್ಠ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸಿದೆ. ಸೋರಿ ಅವರ ಬಗ್ಗೆ ಗ್ರಾಮಸ್ಥರಿಗೂ ಭಾರೀ ಅಭಿಮಾನವಿದ್ದು, ಉತ್ತಮ ಮತದಾನಕ್ಕೆ ಇವರು ಸ್ಪರ್ಧೆಗಿಳಿದಿರುವುದೇ ಕಾರಣ ಎನ್ನುವುದು ಬಸ್ತಾರ್‌ ವಿಶ್ಲೇಷಕರ ಅಭಿಪ್ರಾಯ. ಮತ್ತೂಂದು ಮೂಲದ ಪ್ರಕಾರ, ಆರಂಭದಲ್ಲಿ ಮತದಾನಕ್ಕೆ ಬಹಿಷ್ಕಾರ ಹೇರಿದ್ದ ನಕ್ಸಲರು, ನಂತರ ಬಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಹಾಕದೇ, ಮತ್ತೂಂದು ಪಕ್ಷಕ್ಕೆಹಾಕಿ ಎಂದು ಸೂಚಿಸಿ ಹೋಗಿದ್ದರು. ಹೀಗಾಗಿ ಜನ ಮತ ಕೇಂದ್ರಗಳಿಗೆ ತೆರಳಿದರು ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಇದರ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.

ಒಟ್ಟಿನಲ್ಲಿ, ರಮಣ್‌ಸಿಂಗ್‌ ಸರ್ಕಾರವು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ರಸೆೆ¤ ನಿರ್ಮಾಣ, ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ಮತ್ತಿತರ ಉತ್ತಮ ಕೆಲಸಗಳನ್ನು ಮಾಡಿರುವುದರಲ್ಲಿ ಅನುಮಾನವೇ ಇಲ್ಲ. ಅದು ಚುನಾವಣೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನೂ ಬೀರಬಹುದು. ಆದರೆ, ಕೆಲವೊಂದು ಅಭಿವೃದ್ಧಿ ಕೆಲಸಗಳಲ್ಲಿ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿವೆ. ಹೀಗಾಗಿ, ಜನ ಬದಲಾವಣೆ ಬಯಸಿರಬಹುದು.

ಜೋಗಿ ವಿಚಾರಕ್ಕೆ ಬಂದರೆ, ಛತ್ತೀಸ್‌ಗಡದಲ್ಲಿ ರಾಜಕೀಯವಾಗಿ ಬೇರೂರಿರುವಂಥ ಪ್ರಭಾವಿ ಬುಡಕಟ್ಟು ನಾಯಕ ಅಜಿತ್‌ ಜೋಗಿ. 5 ವರ್ಷಗಳ ಹಿಂದೆ ಬಸ್ತಾರ್‌ನಲ್ಲಿ ನಕ್ಸಲರು ನಡೆಸಿದ ದಾಳಿಗೆ ಕಾಂಗ್ರೆಸ್‌ನ ಪ್ರಮುಖ 12 ನಾಯಕರು ಮೃತಪಟ್ಟು, ಪಕ್ಷಕ್ಕೆ ನಾಯಕರೇ ಇಲ್ಲ ಎಂಬ ಸ್ಥಿತಿ ಸೃಷ್ಟಿಯಾಗಿತ್ತು. ಆಗ ಅಜಿತ್‌ ಜೋಗಿ ಕಾಂಗ್ರೆಸ್‌ನಲ್ಲೇ ಇದ್ದರೂ, ಅವರಿಗೆ ಸೂಕ್ತ ಮನ್ನಣೆ ನೀಡದೇ ಹೈಕಮಾಂಡ್‌ ಕಡೆಗಣಿಸಿತು. ಈಗ ಜೋಗಿ ಕಾಂಗ್ರೆಸ್‌ನಿಂದ ಹೊರಬಂದು ಹೊಸ ಪಕ್ಷ ಕಟ್ಟಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನ ಆಟವಷ್ಟೇ ನಡೆಯುತ್ತಿದ್ದ ಛತ್ತೀಸ್‌ಗಡದಲ್ಲಿ ಈ ಬಾರಿ ಅಜಿತ್‌ ಜೋಗಿಯ ಜನತಾ ಛತ್ತೀಸ್‌ಗಡ ಕಾಂಗ್ರೆಸ್‌ನ ಪ್ರವೇಶವಾಗಿದ್ದು, ಎರಡೂ ಸಾಂಪ್ರದಾಯಿಕ ಪಕ್ಷಗಳಿಂದ ಮತಗಳನ್ನು ಕೊಳ್ಳೆ ಹೊಡೆದು 10-15 ಸ್ಥಾನಗಳನ್ನು ಪಡೆದುಕೊಂಡು ಕಿಂಗ್‌ ಮೇಕರ್‌ ಆಗುವ ವಿಶ್ವಾಸದಲ್ಲಿ ಜೋಗಿ-ಮಾಯಾ ಇದ್ದಾರೆ. ವಿಶೇಷವೆಂದರೆ, ಅಜಿತ್‌ ಜೋಗಿ ಅವರ ಪ್ರಚಾರ ಸಭೆಯಲ್ಲೂ ಜನರು ಬಹಳ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದುದು ಕಾಂಗೆೆÅಸ್‌-ಬಿಜೆಪಿಗೆ ನುಂಗಲಾರದ ತುತ್ತಾಗಿದೆ. 2003ರಲ್ಲಿ ಜೋಗಿ ಅವರನ್ನು ದೂರ ಮಾಡಿ ನಾವು ತಪ್ಪು ಮಾಡಿದೆವು. ರಾಜ್ಯಕೆೆR ಅವರಂಥ ನಾಯಕನೊಬ್ಬನ ಅವಶ್ಯಕತೆಯಿದೆ ಎಂದು ಮತದಾರರು ಹೇಳಿಕೊಂಡಿರುವುದೂ ಇದೆ.

ಇನ್ನು ಜಾತಿ ಸಮೀಕರಣದ ವಿಚಾರಕ್ಕೆ ಬಂದರೆ, ರಾಜ್ಯದ ಜನಸಂಖ್ಯೆಯ ಅರ್ಧದಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರ ಪೈಕಿ ಬಹುತೇಕ ಮಂದಿ ಕಾಂಗ್ರೆಸ್‌ ಬೆಂಬಲಿಗರೇ ಆಗಿದ್ದಾರೆ. ಈಗ ಜೋಗಿ-ಮಾಯಾ ಪಕ್ಷದಿಂದಾಗಿ ಈ ಮತಬ್ಯಾಂಕ್‌ ಒಡೆದು ಹೋಗಿ, ಎರಡೂ ಪಕ್ಷಗಳು ಗೆಲ್ಲುವ ಬದಲು ಬಿಜೆಪಿಗೆ ಲಾಭ ತಂದುಕೊಡುವ ಸಾಧ್ಯತೆಯೇ ಹೆಚ್ಚು.

ಒಟ್ಟಾರೆಯಾಗಿ, ಜೋಗಿ ನೇತೃತ್ವದ ಮೈತ್ರಿಯಿಂದ ನಮ್ಮ ಮತಗಳಿಗೆ ಯಾವುದೇ ಏಟು ಬೀಳುವುದಿಲ್ಲ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಮುಂದಿನ ಸರ್ಕಾರ ರಚನೆಯಲ್ಲಿ ನಮ್ಮ ಪಾತ್ರ ಇದ್ದೇ ಇರುತ್ತದೆ ಎಂಬ ಅಚಲ ವಿಶ್ವಾಸದಲ್ಲಿ ಜೆಸಿಸಿ-ಬಿಎಸ್‌ಪಿ ಪಕ್ಷವಿದೆ. ಕಾಂಗ್ರೆಸ್‌ನ ಮತಗಳನ್ನು ಜೋಗಿ-ಮಾಯಾ ತಿಂದು ಹಾಕಿದರೆ,ಅದರ ಲಾಭ ತಮಗೆ ಎಂಬ ನಂಬಿಕೆ ಬಿಜೆಪಿಯಲ್ಲಿದೆ. ಆದರೆ, ರಾಜ್ಯದ ಜನ ನಿಜವಾಗಿಯೂ ನಂಬಿಕೆ ಇರಿಸಿದ್ದು ಯಾರಲ್ಲಿ ಎಂಬುದು ಗೊತ್ತಾಗಬೇಕೆಂದರೆ ಡಿಸೆಂಬರ್‌ 11ರವರೆಗೆ ಕಾಯಲೇಬೇಕು. 

– ಹಲೀಮತ್‌ ಸಅದಿಯಾ

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.