9 ಬಾಲಕಿಯರ ರೇಪ್, ಹತ್ಯೆ; ವಿಕೃತ ಕಾಮಿ ರಾಕ್ಷಸ ಕೊನೆಗೂ ಅರೆಸ್ಟ್
Team Udayavani, Nov 22, 2018, 10:28 AM IST
ಹೊಸದಿಲ್ಲಿ: ಗುರುಗ್ರಾಮ್ ಸೆಕ್ಟರ್ 66 ರಲ್ಲಿ ಮೂರು ವರ್ಷದ ಬಾಲಕಿಯ ರೇಪ್ ಮತ್ತು ಹತ್ಯೆ ನಡೆದ ಬಳಿಕ ರಾಕ್ಷಸ ರೂಪದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ 20 ರ ಹರೆಯದ ಸುನೀಲ್ ಕುಮಾರ್ ಎನ್ನುವ ವಿಕೃತ ಶಿಶುಕಾಮಿಯಾಗಿದ್ದು, ಮೂರರಿಂದ 7 ವರ್ಷದೊಳಗಿನ 9 ಮಂದಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಗುರುಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಮರದ ಕೋಲನ್ನು ಇರಿದು, ಇಟ್ಟಿಗೆಯಿಂದ ತಲೆ ಒಡೆದು ಮೃಗೀಯವಾಗಿ ವರ್ತಿಸಿ ಭೀಕರವಾಗಿ ಹತ್ಯೆಗೈದಿದ್ದ.ಬಾಲಕಿಯ ಶವ ದೇಹದ ತುಂಬೆಲ್ಲಾ ಗಾಯಗಳಿಂದ ಕೂಡಿದ್ದು, ಪ್ಲಾಸ್ಟಿಕ್ ಮುಚ್ಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂರು ರಾಜ್ಯಗಳಲ್ಲಿ ಈತನಿಗಾಗಿ ವ್ಯಾಪಕ ಶೋಧ ನಡೆಸಿದ್ದರು.
ರಾಕ್ಷಸಿ ಕೃತ್ಯ ಎಸಗುತ್ತಿದ್ದ ಸುನೀಲ್ ಕುಮಾರ್ ಅತ್ಯಾಚಾರ ಎಸಗುವ ಮುನ್ನ ಮಕ್ಕಳ ಕಾಲನ್ನು ಮುರಿಯುತ್ತಿದ್ದ ಎನ್ನುವ ಬೆಚ್ಚಿ ಬೀಳುವ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.
ಈತನ ವಿರುದ್ಧ ದೆಹಲಿಯಲ್ಲಿ 4, ಗುರುಗ್ರಾಮ್‌ನಲ್ಲಿ 3, ಝಾನ್ಸಿ ಮತ್ತು ಗ್ವಾಲಿಯರ್‌ನಲ್ಲಿ ತಲಾ 1 ಕೇಸು ದಾಖಲಾಗಿದೆ.
ನಿರುದ್ಯೋಗಿಯಾಗಿದ್ದ ಈತ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಪುಟ್ಟ ಬಾಲಕಿಯರಿಗೆ ಚಾಕಲೇಟು ಮತ್ತು ಸಿಹಿ ತಿಂಡಿಗಳ ಆಮಿಷ ನೀಡಿ ಅಪಹರಿಸಿ ಕೃತ್ಯ ಎಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮ್‌ನಲ್ಲಿ ನೆವೆಂಬರ್ 11 ರಂದು ಇದೇ ರೀತಿ ಬಾಲಕಿಗೆ ಚಾಕಲೇಟ್ ಆಮಿಷ ನೀಡಿ ಸ್ಲಂಗೆ ಎಳೆದೊಯ್ದು ಕೋಣೆಯೊಂದರಲ್ಲಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆಗೈದಿದ್ದ.
ಗುರುಗ್ರಾಮಕ್ಕೆ ತಾಯಿ ಮತ್ತು ಸಹೋದರಿಯನ್ನು ಭೇಟಿಯಾಗಲು ಬಂದಿದ್ದ ವೇಳೆ ಕೃತ್ಯ ಎಸಗಿ ಹುಟ್ಟೂರಾದ ಝಾನ್ಸಿಗೆ ಪರಾರಿಯಾಗಿದ್ದ.
ಬಂಧನದ ಬಳಿಕ ಸುನೀಲ್ ಕುಮಾರ್‌ಗೆ ಕೋರ್ಟ್ 8 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈಗಾಗಲೆ 3 ಬಾಲಕಿಯರ ಹತ್ಯೆ ಕೇಸ್‌ಗಳನ್ನು ಈತನ ಮೇಲೆ ಲಿಂಕ್ ಮಾಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.