ಕೋಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಪ್ರಯತ್ನ
Team Udayavani, Nov 22, 2018, 10:43 AM IST
ಕಲಬುರಗಿ: ಶಿಕ್ಷಣವೇ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದರಿಂದ ಕೋಲಿ ಸಮುದಾಯದವರೂ ಉತ್ತಮ ಶಿಕ್ಷಣ ಪಡೆದು ಸಂಸ್ಕಾರಯುತ ಬದುಕು ನಿರ್ಮಿಸಿಕೊಳ್ಳಬೇಕೆಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ತಾಲೂಕಿನ ಫಿರೋಜಾಬಾದ ಗ್ರಾಮದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಹಾಗೂ ನೂತನ ಮಂಟಪ ಉದ್ಘಾಟಿಸಿ ಅವರು ಮಾತನಾಡಿದ ಅವರು, ಕೋಲಿ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿಕೊಡಲು ಸದಾ ಬದ್ಧನಾಗಿರುವುದಾಗಿ ಹೇಳಿದರು.
ಫಿರೋಜಾಬಾದ್ ಗ್ರಾಮದಲ್ಲಿ ಸಿಸಿ ರಸ್ತೆ, ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿದೆ. ಬಹುಮುಖ್ಯವಾಗಿ
ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 20 ಲಕ್ಷ ರೂ. ಅನುದಾನ ದೊರೆಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಅಖೀಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣ ರೆಡ್ಡಿ ಮಾತನಾಡಿ, ಈ ಜನಾಂಗವು ಶೈಕ್ಷಣಿಕ, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಬರಬೇಕಿದೆ. ಈ ಸಮುದಾಯದ ಜನರು ಒಗ್ಗೂಡಿದಾಗ ಮಾತ್ರ ಸಂವಿಧಾನ ಬದ್ಧ ಸೌಲಭ್ಯ ಸಿಗಲು ಸಾಧ್ಯ ಎಂದರು. ಹಾವೇರಿಯ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತೋನಸನಹಳ್ಳಿಯ ಪೂಜ್ಯ ಮಲ್ಲಣ್ಣಪ್ಪ ಸ್ವಾಮೀಜಿ, ಸಿಂದಗಿಯ ಪೂಜ್ಯ ಶಾಂತಗಂಗಾಧರ ಶ್ರೀ, ಅನ್ನದಾನೇಶ್ವರ
ವಿರಕ್ತ ಮಠದ ಪೂಜ್ಯ ಗುರುಬಸವ ಸ್ವಾಮೀಜಿ, ಹಳ್ಳಿಖೇಡ(ಕೆ)ನ ದತ್ತಾತ್ರೇಯ ಗುರೂಜಿ ಆಶೀರ್ವಚನ ನೀಡಿದರು.
ರಾಜ್ಯ ಕೋಲಿ ಸಮಾಜದ ಮಾಜಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ, ಸಮಾಜದ ಮುಖಂಡರಾದ ಭೀಮಣ್ಣ ಸಾಲಿ, ಸಾಯಬಣ್ಣ ನೀಲಪ್ಪಗೋಳ, ಅವ್ವಣ್ಣ ಮ್ಯಾಕೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ಪಾಟೀಲ್, ದಿಲೀಪ ಆರ್.ಪಾಟೀಲ್, ರಾಜಗೋಪಾಲರೆಡ್ಡಿ, ಶಿವಶರಣಪ್ಪ ಕೋಬಾಳ, ಶಿವಲಿಂಗಪ್ಪ ಕಿನ್ನೂರ್, ಶಂಕರ ಕಟ್ಟಿಸಂಗಾವಿ, ವಿಜಯಕುಮಾರ ಹದಗಲ್, ನಿಂಗಣ್ಣ ಹುಳಗೋಳಕರ್, ಮಶಾಖ ಪಟೇಲ್, ವಿದ್ಯಾಸಾಗರ ಮಂಗಳೂರೆ, ಲಚ್ಚಪ್ಪ ಜಮಾದಾರ್, ದೇವೀಂದ್ರ, ಶರಣಗೌಡ ಪಾಟೀಲ್, ಸ್ಥಳೀಯರಾದ ಮಲ್ಲಿಕಾರ್ಜುನ ಕಲ್ಯಾಣಕರ್, ಕಲ್ಲಪ್ಪ ಪ್ಯಾಟಿ, ಮಲ್ಲಿಕಾರ್ಜುನ ಧೂಳಬಾ, ಅರ್ಜುನ ಸಿಬಾ,
ಶಿವಶಂಕರ ಮಸಳ್ಳಿ, ಭೀಮಾಶಂಕರ ಇದ್ದರು. ವಿಠ್ಠಲ ಕಲ್ಯಾಣಕರ ಸ್ವಾಗತಿಸಿದರು. ನಾಗಣ್ಣ ಮಾಸ್ತರ, ನಾಗಣ್ಣ ದೂಳಬಾ ನಿರೂಪಿಸಿದರು. ರಮೇಶ ನಾಟೀಕಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.