ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಜಿಲ್ಲೆಯ ವಿದ್ಯ
Team Udayavani, Nov 22, 2018, 4:29 PM IST
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನ ಬಾಲಕನೋರ್ವ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾನೆ. ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಮಿª ಇಮ್ರಾನ್ ಸಣ್ಣ ವಯಸ್ಸಿನಲ್ಲೇ ಅತೀ ಹೆಚ್ಚು ವರ್ಣ ಚಿತ್ರ ರಚಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.
ಈ ಬಗ್ಗೆ ಬಾಲಕನ ತಾಯಿ ಶಹಿದಾ ಶಬಾನ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಮಿ ಇಮ್ರಾನ್ ಅತೀ ಕಡಿಮೆ ವಯಸ್ಸಿನಲ್ಲಿ 400ಕ್ಕೂ ಹೆಚ್ಚುವರ್ಣ ಚಿತ್ರಗಳನ್ನು ರಚಿಸಿದ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾನೆ. ಶಾಲೆಗೆ ಸೇರುವ ಮೊದಲೆ ಇಮ್ರಾನ್‌ಗೆ ಚಿತ್ರ ಬರೆಯುವ ಹವ್ಯಾಸವಿತ್ತು. ನೋಡಿದ್ದನ್ನು ಬರೆಯುತ್ತಿದ್ದ.
ಚಿತ್ರಗಳು ದೊರೆತರೆ ಅವುಗಳಿಗೆ ಬಣ್ಣ ಹಚ್ಚುತ್ತಿದ್ದ. ಆತನಲ್ಲಿ ಚಿತ್ರ ಬರೆಯುವ ಹವ್ಯಾಸ ಇದ್ದುದನ್ನು ಗಮನಿಸಿ ಅವರಿಗೆ ಪ್ರೋತ್ಸಾಹ ನೀಡಿದೆವು. ಚಿತ್ರಕಲಾ ಶಿಕ್ಷಕರಾದ ಕಟ್ಟಿಮನಿ, ಪೂರ್ಣಿಮಾ ಮಹೇಶ್, ಇಂದಿರಾ ಕುಶಕುಮಾರ್, ಭಗವಾನ್, ಗಣೇಶ್ ಆಚಾರ್ಯ, ವಿಶ್ವಕರ್ಮ ಆಚಾರ್ಯ ಸೇರಿದಂತೆ ಶಾಲೆಯ ಶಿಕ್ಷಕರು ಆತನಿಗೆ ಉತ್ತೇಜನ ನೀಡಿದರು ಎಂದರು.
ಇಮ್ರಾನ್ ಬರೆದ ವರ್ಣಚಿತ್ರಗಳಿಗೆ ಈವರೆಗೂ ಹಲವು ಪ್ರಶಸ್ತಿಗಳು ಬಂದಿವೆ. ಕಳೆದ ವರ್ಷ ಈತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರವೇಶಿಸಿದ್ದ, ಇದೀಗ ಏಷ್ಯ ಬುಕ್ ಆಫ್ ರೆಕಾರ್ಡ್ ಪ್ರವೇಶಿಸಿದ್ದಾನೆ. ನ.10 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಶಸ್ತಿ ಪತ್ರ ಬಂದಿದೆ ಎಂದು ಹೇಳಿದರು.
ಇಮ್ರಾನ್ ಶಿಕ್ಷಕ ಕಟ್ಟಿಮನಿ ಮಾತನಾಡಿ, ವರ್ಣಚಿತ್ರ ರಚನೆಯಲ್ಲಿ ಈತ ಉತ್ತಮ ಆಸಕ್ತಿ ಹೊಂದಿದ್ದಾನೆ. ಮಗುವಿನಲ್ಲಿದ್ದ ಆಸಕ್ತಿ ಗಮನಿಸಿ ಅವನ ಪೋಷಕರು ನೀಡಿದ ಪ್ರೋತ್ಸಾಹದಿಂದಾಗಿ ಇಮ್ರಾನ್ ಸಾಧನೆ ಮಾಡಲು ಸಾಧ್ಯವಾಗಿದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಈತ ಒಳ್ಳೆಯ ಸಾಕ್ಷಿಯಾಗಿದ್ದಾನೆ.’
ಪೋಷಕರು ತಮ್ಮ ಮಕ್ಕಳು ಇಂಜಿನಿಯರ್ ಆಗಲಿ, ವೈದ್ಯರಾಗಲಿ ಎಂದು ಹಂಬಲಿಸುವ ಬದಲು ಅವರಲ್ಲಿರುವ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಹಮಿ ಇಮ್ರಾನ್ ತಂದೆ ಖಾಲಿದ್ ಇಮ್ರಾನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suspended: ಕರ್ತವ್ಯಲೋಪ… ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮಾನತು
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Kaduru: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದ ಕಾರ್ಯಕರ್ತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.