ಮೆಲ್ಬರ್ನ್ ಮೇಲಾಟ; ಮೆರೆದಾಡೀತೇ ಭಾರತ?​​​​​​​


Team Udayavani, Nov 23, 2018, 6:00 AM IST

india-virat-kohli.jpg

ಮೆಲ್ಬರ್ನ್: ಬುಧವಾರವಷ್ಟೇ ಬ್ರಿಸ್ಬೇನ್‌ನಲ್ಲಿ “ಮಳೆ ನಿಯಮ’ಕ್ಕೆ ಸೋಲಿನ ದಂಡ ತೆತ್ತ ಭಾರತ, ಶುಕ್ರವಾರ ಐತಿಹಾಸಿಕ “ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಆಸ್ಟ್ರೇಲಿಯ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. 

“ಗಾಬಾ’ದಲ್ಲಿ ಆಸೀಸ್‌ಗಿಂತ 11 ರನ್‌ ಹೆಚ್ಚು ಗಳಿಸಿಯೂ ಸೋಲುಂಡ ಕೊಹ್ಲಿ ಪಡೆಗೆ ಮೆಲ್ಬರ್ನ್ ಮೇಲಾಟ ಅತ್ಯಂತ ಮಹತ್ವದ್ದಾಗಿದೆ. 3 ಪಂದ್ಯಗಳ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಾದರೆ ಟೀಮ್‌ ಇಂಡಿಯಾ ಇಲ್ಲಿ ಗೆಲ್ಲಲೇಬೇಕಿದೆ.

5 ದಿನಗಳ ಅವಧಿಯಲ್ಲಿ ಎರಡೂ ತಂಡಗಳು 3 ಟಿ20 ಪಂದ್ಯಗಳನ್ನು ಆಡಬೇಕಾದ ಒತ್ತಡದಲ್ಲಿವೆಯಾದರೂ ನಿರಂತರ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಭಾರತದ ಆಟಗಾರರಿಗೆ ಇದೇನೂ ಸಮಸ್ಯೆಯಾಗಿ ಕಾಡದು. ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಕ್ಕಿಂತ ಮಿಗಿಲಾದ ಸಾಧನೆ, ದಾಖಲೆಗಳೆಲ್ಲವನ್ನೂ ಭಾರತ ಹೊಂದಿದೆ. 

ಆದರೆ ಆಸ್ಟ್ರೇಲಿಯದ ದೊಡ್ಡ ಅಂಗಳದಲ್ಲಿ ಮುನ್ನುಗ್ಗಿ ಬಾರಿಸುವುದು, ಸಿಕ್ಸರ್‌ಗಳನ್ನು ಸಿಡಿಸುವುದು ಭಾರತಕ್ಕೆ ಎದುರಾಗಿರುವ ನಿಜವಾದ ಸಮಸ್ಯೆ. ಇದಕ್ಕೆ ಬ್ರಿಸ್ಬೇನ್‌ ಪಂದ್ಯ ಉತ್ತಮ ನಿದರ್ಶನ ಒದಗಿಸಿತ್ತು. ಇಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳೆಲ್ಲ ಎತ್ತಿ ಬಾರಿಸಿದ ಚೆಂಡು ನೇರವಾಗಿ ಆಸೀಸ್‌ ಕ್ಷೇತ್ರರಕ್ಷಕರ ಕೈಗೆ ಹೋಗಿ ಸೇರುತ್ತಿತ್ತು. 

ಭಾರತದಲ್ಲಾದರೆ ಇದು ಸಿಕ್ಸರ್‌ ಆಗುತ್ತಿತ್ತು, ಅಷ್ಟೇ ವ್ಯತ್ಯಾಸ!
ಮೆಲ್ಬರ್ನ್ ಅಂಗಳದಲ್ಲೂ ಇಂಥದೊಂದು ಸಮಸ್ಯೆ ಭಾರತದ ಆಟಗಾರರನ್ನು ಕಾಡಲಿದೆ. ಕಾರಣ, ಎಂಸಿಜಿ ಕೂಡ ದೊಡ್ಡ ಅಂಗಳ. ಹೀಗಾಗಿ ಭಾರತದ ಬ್ಯಾಟ್ಸ್‌ಮನ್‌ಗಳು ಉತ್ತಮ ಟೈಮಿಂಗ್ಸ್‌ನೊಂದಿಗೆ ಗ್ರೌಂಡ್‌ ಶಾಟ್‌ಗಳನ್ನು ಹೊಡೆಯಲು ಮುಂದಾಗಬೇಕಾದ ಅಗತ್ಯವಿದೆ. ಇದರಲ್ಲಿ ಯಶಸ್ವಿಯಾದರೆ ಅರ್ಧ ಪಂದ್ಯ ಗೆದ್ದಂತೆ.

ಹೇಗಿದ್ದೀತು ಹನ್ನೊಂದರ ಬಳಗ?
ಸತತ 7 ಟಿ20 ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿರುವ ಟೀಮ್‌ ಇಂಡಿಯಾ, ಇದನ್ನು ಎಂಟಕ್ಕೆ ಏರಿಸಿಕೊಳ್ಳಬೇಕಾದರೆ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗಗಳೆರಡರಲ್ಲೂ ದೊಡ್ಡ ಮಟ್ಟದ ಸುಧಾರಣೆ ಕಾಣಬೇಕಿದೆ. ಬ್ಯಾಟಿಂಗ್‌ ಬಗ್ಗೆ ಹೇಳುವುದಾದರೆ, ಕೆ.ಎಲ್‌. ರಾಹುಲ್‌ ಅವರ ಫಾರ್ಮ್ ಚಿಂತೆಯ ಸಂಗತಿಯಾಗಿ ಪರಿಣಮಿಸಿದೆ. ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ ಟಿ20 ಪಂದ್ಯದಲ್ಲಿ ಅಜೇಯ 101 ರನ್‌ ಬಾರಿಸಿದ ಬಳಿಕ ರಾಹುಲ್‌ ಬ್ಯಾಟ್‌ ಮಾತಾಡಿದ್ದಿಲ್ಲ. ಅನಂತರದ 6 ಪಂದ್ಯಗಳಲ್ಲಿ ಅವರು 30 ರನ್‌ ಗಡಿ ದಾಟಿದ್ದೇ ಇಲ್ಲ. ಮನೀಷ್‌ ಪಾಂಡೆಯನ್ನು ಹೊರಗಿರಿಸಿ, ಸ್ವತಃ ನಾಯಕ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಲಿಳಿದು, ರಾಹುಲ್‌ಗೆ ವನ್‌ಡೌನ್‌ ಸ್ಥಾನವನ್ನು ಬಿಟ್ಟುಕೊಟ್ಟರೂ ಅವರು ಇದನ್ನು ಬಳಸಿಕೊಳ್ಳುವಲ್ಲಿ ವಿಫ‌ಲರಾಗುತ್ತಿದ್ದಾರೆ.ಮನೀಷ್‌ ಪಾಂಡೆ ಕೂಡ ದೊರೆತ ಅವಕಾಶಗಳನ್ನು ಕೈಚೆಲ್ಲುತ್ತ ಬಂದಿದ್ದಾರೆ. ಶ್ರೇಯಸ್‌ ಅಯ್ಯರ್‌ ರೇಸ್‌ನಲ್ಲಿದ್ದಾರೆ. ಮೆಲ್ಬರ್ನ್ನಲ್ಲಿ ರಾಹುಲ್‌ ಬದಲು ಇವರಿಬ್ಬರಲ್ಲೊಬ್ಬರು ಆಡಲಿಳಿದರೆ ಅಚ್ಚರಿ ಇಲ್ಲ. ಅಥವಾ ರಾಹುಲ್‌ಗೆ ಇನ್ನೊಂದು ಅವಕಾಶ ಲಭಿಸಲೂಬಹುದು.

ಬ್ರಿಸ್ಬೇನ್‌ನಲ್ಲಿ ಶಿಖರ್‌ ಧವನ್‌, ದಿನೇಶ್‌ ಕಾರ್ತಿಕ್‌, ರಿಷಬ್‌ ಪಂತ್‌ ಭರ್ಜರಿ ಪ್ರದರ್ಶನ ನೀಡಿದ್ದರು. ಕೊನೆಯ ಓವರಿನಲ್ಲಿ ತುಸು ಎಚ್ಚೆತ್ತು ಆಡಿದರೆ ಗೆಲುವಿನ ಸಂಭ್ರಮ ಭಾರತದ್ದಾಗುತ್ತಿತ್ತು. ಆದರೆ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ ಬೇಗನೇ ಔಟಾದದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಇವರಿಬ್ಬರಲ್ಲಿ ಒಬ್ಬರು ಸಿಡಿದು ನಿಂತರೂ ಪಂದ್ಯದ ಚಿತ್ರಣವೇ ಬದಲಾಗಲಿದೆ. ಮೆಲ್ಬರ್ನ್ ಗ್ರೌಂಡ್‌ ಇದಕ್ಕೊಂದು ವೇದಿಕೆಯಾಗಬೇಕಿದೆ.

ದುಬಾರಿಯಾದ ಕೃಣಾಲ್‌ ಪಾಂಡ್ಯ
ಭಾರತದ ಬೌಲಿಂಗ್‌ ಕಾಂಬಿನೇಶನ್‌ ಬ್ರಿಸ್ಬೇನ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿರಲಿಲ್ಲ. ಮುಖ್ಯವಾಗಿ ಕೃಣಾಲ್‌ ಪಾಂಡ್ಯ ದುಬಾರಿಯಾಗಿ ಪರಿಣಮಿಸಿದ್ದರು. ಬಳಿಕ ಬ್ಯಾಟಿಂಗಿನಲ್ಲೂ ಎಡವಿ ವಿಲನ್‌ ಆಗಿ ಗೋಚರಿಸಿದ್ದರು. ಇವರ ಬದಲು ಟಿ20ಯಲ್ಲಿ ನಿರಂತರವಾಗಿ ವಿಕೆಟ್‌ ಕೀಳುತ್ತ ಬಂದಿರುವ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಒಳಬರುವುದು ಬಹುತೇಕ ಖಚಿತ. ಅಥವಾ ಕೃಣಾಲ್‌ ಅವರನ್ನು ಉಳಿಸಿಕೊಂಡು, ಖಲೀಲ್‌ ಬದಲು ಚಾಹಲ್‌ ಅವಕಾಶ ಪಡೆಯಬಹುದು.

ಟೀಮ್‌ ಇಂಡಿಯಾದ ಫೀಲ್ಡಿಂಗ್‌ ಕೂಡ ತೀರಾ ಕೆಳಮಟ್ಟದಲ್ಲಿತ್ತು.  ಸ್ವತಃ ಕೊಹ್ಲಿ 2 ಸಲ ಕ್ಯಾಚ್‌ ಬಿಟ್ಟು ಟೀಕೆಗೆ ಗುರಿಯಾಗಿದ್ದಾರೆ. ಫೀಲ್ಡಿಂಗ್‌ ಸುಧಾರಣೆಯ ನಿಟ್ಟಿನಲ್ಲಿ ಕೋಚ್‌ ಆರ್‌. ಶ್ರೀಧರ್‌ ಸೂಕ್ತ ತಂತ್ರಗಾರಿಕೆ ರೂಪಿಸಬೇಕಾದ ಅಗತ್ಯ ಎಂದಿಗಿಂತ ಹೆಚ್ಚಿದೆ.ಬ್ರಿಸ್ಬೇನ್‌ನಂತೆ ಮೆಲ್ಬರ್ನ್ ಪಂದ್ಯಕ್ಕೂ ಮಳೆಯಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಸಂಭಾವ್ಯ ತಂಡಗಳು
ಭಾರತ
: ಶಿಖರ್‌ ಧವನ್‌, ರೋಹಿತ್‌ ಶರ್ಮ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಡಿ’ಆರ್ಸಿ ಶಾರ್ಟ್‌, ಕ್ರಿಸ್‌ ಲಿನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಬೆನ್‌ ಮೆಕ್‌ಡರ್ಮಟ್‌, ಅಲೆಕ್ಸ್‌ ಕ್ಯಾರಿ, ಆ್ಯಂಡ್ರೂé ಟೈ, ಜಾಸನ್‌ ಬೆಹೆÅಂಡಾಫ್ì, ಆ್ಯಡಂ ಝಂಪ, ಬಿಲ್ಲಿ ಸ್ಟಾನ್‌ಲೇಕ್‌/ನಥನ್‌ ಕೋಲ್ಟರ್‌ ನೈಲ್‌.
ಆರಂಭ: ಆಪರಾಹ್ನ 1.20
ಪ್ರಸಾರ: ಸೋನಿ ನೆಟ್‌ವರ್ಕ್‌

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Australia qualify for the WTC25 Final

World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್‌ ಸ್ಥಾನ ಭದ್ರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.