ಪ್ರಜಾಪ್ರತಿನಿಧಿ ಕಾಯಿದೆಗೆ ಆಗಬೇಕಿದೆ ತುರ್ತು ಶಸ್ತ್ರಚಿಕಿತ್ಸೆ


Team Udayavani, Nov 23, 2018, 6:00 AM IST

35.jpg

ಪ್ರಜಾಪ್ರಭುತ್ವ ನಗೆಪಾಟಲಿಗೀಡಾಗುವ ಮೊದಲು ಚುನಾವಣಾ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವುದು ತೀರಾ ಅಗತ್ಯ. ರಾಜಕೀಯ ಪಕ್ಷಗಳ ರಂಗೋಲಿ ಕೆಳಗೆ ತೂರುವ ಕುಟಿಲ ಬುದ್ಧಿಯಿಂದಾಗಿ ಈಗ ಪ್ರಜಾತಂತ್ರ ವ್ಯವಸ್ಥೆ ಅತಂತ್ರವಾಗುವ ಭೀತಿ ಕಾಡುತ್ತಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಅಡಿಪಾಯವೆನಿಸಿ ರುವ ಚುನಾವಣಾ ಪ್ರಕ್ರಿಯೆಯಲ್ಲಿ ಇರುವ ಸಣ್ಣಪುಟ್ಟ ಕೊರತೆಗಳನ್ನು ರಂಗೋಲಿ ಕೆಳಗೆ ನುಸುಳುವ ಚಾಣಾಕ್ಷ ಮತಿಯ ರಾಜಕಾರಣಿಗಳು ದುರುಪಯೋಗಪಡಿಸಿಕೊಂಡು ಒಟ್ಟು ವ್ಯವಸ್ಥೆಯನ್ನು ನಗೆಪಾಟಲಿಗೀಡು ಮಾಡುವುದು ಹೆಚ್ಚಾಗುತ್ತಿದೆ. ಈ ತೂತುಗಳನ್ನು ಸಣ್ಣದಾಗಿರುವಾಗಲೇ ಮುಚ್ಚಿ ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದೆ ಅಪಾಯ ಸಂಭವಿಸುವ ಎಲ್ಲಾ ಲಕ್ಷಣಗಳು ಸುಸ್ಪಷ್ಟ. 

ಉದಾಹರಣೆಗೆ, ಒಬ್ಬನೇ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಒಂದಕ್ಕಿಂತ ಹೆಚ್ಚು ಕಡೆ ಗೆದ್ದರೆ ಒಂದನ್ನು ಉಳಿಸಿ ಬೇರೆಡೆ ರಾಜೀನಾಮೆ ನೀಡಿ ಮತ್ತೂಮ್ಮೆ ಚುನಾವಣೆಗೆ ಅನುವು ಮಾಡುವುದು. ಅದಕ್ಕಾಗಿ ತೆರಿಗೆದಾರರ ಹಣದ ವೆಚ್ಚ ಇತ್ಯಾದಿ. ಈ ಸಾಲಿಗೆ ಇತ್ತೀಚಿನ ಸೇರ್ಪಡೆ ಚುನಾವಣೆಯ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿರುವಾಗ ಸ್ಪರ್ಧೆಯಿಂದ ನಿವೃತ್ತಿ ಹೊಂದುವ ಚಾಳಿ. ಈ ಬೆಳವಣಿಗೆಯಿಂದ ಜನಸಾಮಾನ್ಯನಿಗೆ ಅನ್ನಿಸುವುದೇನೆಂದರೆ ಈ ಅಭ್ಯರ್ಥಿ ಎನಿಸಿಕೊಂಡವರಿಗೆ ಉತ್ತರದಾಯಿತ್ವ ಎನ್ನುವುದು ಇಲ್ಲವೆ? 

ಪ್ರಜಾಪ್ರತಿನಿಧಿ ಕಾಯಿದೆ 1951ರ ಪರಿಚ್ಛೇದ 57,58 ಮತ್ತು 58ಎಯಲ್ಲಿ ಕೆಲವೊಂದು ವಿಶಿಷ್ಟ ಪ್ರಕರಣಗಳಲ್ಲಿ ಕೊನೆಯ ಕ್ಷಣದಲ್ಲಿ ಚುನಾವಣೆಯನ್ನು ಮುಂದೂಡಲು ಅವಕಾಶವಿದೆ. ಅವುಗಳೆಂದರೆ; ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಯಾರಾದರೂ ನಿಧನರಾದರೆ, ಪ್ರಾಕೃತಿಕ ವಿಕೋಪ, ನಿಯಂತ್ರಣಕ್ಕೆ ನಿಲುಕದ ದೊಂಬಿ, ಗಲಭೆ ಇತ್ಯಾದಿ ಕಾರಣಗಳಿಂದ ಚುನಾವಣೆ ನಡೆಸಲು ಅಸಾಧ್ಯವಾದ ಸಂದರ್ಭಗಳಲ್ಲಿ ಮುಂದೂಡಬಹುದಾಗಿದೆ. ಆದರೆ ಇತ್ತೀಚೆಗೆ ನಡೆದ ಕರ್ನಾಟಕದ ಉಪಚುನಾವಣೆಯಲ್ಲಿ ಚುನಾವಣೆಗೆ ಎರಡು ದಿನ ಇರುವಾಗ ಪ್ರಮುಖ ಪಕ್ಷವೊಂದರ ಅಭ್ಯರ್ಥಿ ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿ ದೇಶ ಬಿಟ್ಟು ತೆರಳಿದ ಆಘಾತಕಾರಿ ಪ್ರಕರಣ ಸಂಭವಿಸಿದೆ. ಆದರೂ ಚುನಾವಣೆ ನಡೆದಿದೆ! ಇಂತಹ ಪ್ರಕರಣದಲ್ಲಿ ಚುನಾವಣೆಯನ್ನು ಸ್ಥಗಿತಗೊಳಿಸಲು ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಈ ನ್ಯೂನತೆಯನ್ನೇ ಉಪಯೋಗಿಸಿಕೊಂಡು ಇನ್ನೊಂದು ಪಕ್ಷದ ಅಭ್ಯರ್ಥಿಗೆ ಲಾಭ ಮಾಡಿಕೊಟ್ಟದ್ದು ಇಡೀ ಚುನಾವಣಾ ಪ್ರಕ್ರಿಯೆಯನ್ನು ಅಣಕಿಸಿದಂತೆ ಅನ್ನಿಸದೆ? ಆದ್ದರಿಂದ ಚುನಾವಣೆ ದಿನಕ್ಕಿಂತ ಮೊದಲು ಇಂತಹ ಘಟನೆಗಳು ಸಂಭವಿಸಿದರೆ ಚುನಾವಣೆ ರದ್ದುಗೊಳಿಸಿ ಅದುವರೆಗಿನ ಚುನಾವಣಾ ಪ್ರಕ್ರಿಯೆಗೆ ತಗಲಿದ ವೆಚ್ಚವನ್ನು ಇಂತಹ ಬೆಳವಣಿಗೆಗೆ ಕಾರಣರಾದವರಿಂದ ವಸೂಲು ಮಾಡುವ ನಿಯಮ ಬೇಕು. ಇದೇ ರೀತಿ ಒಂದಕ್ಕಿಂತ ಹೆಚ್ಚು ಕಡೆ ಸ್ಪರ್ಧಿಸುವ, ಪುನರಪಿ ಚುನಾವಣೆ ನಡೆದಲ್ಲಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದವರಿಂದ ವಸೂಲು ಮಾಡುವ ನಿಯಮ ತರುವ ಅಗತ್ಯವಿದೆ. 

ಜತೆಗೆ ಆರೋಗ್ಯಕರ ಪ್ರಜಾಪ್ರಭುತ್ವ ಉಳಿಸಲು ಪ್ರಜಾಪ್ರತಿನಿಧಿ ಕಾಯಿದೆಯ ಸಂಬಂಧಿಸಿಧ ವಿಧಿಗಳಿಗೆ ಈ ಕೆಳಗಿನ ಅವ್ಯವಸ್ಥೆಯ ನಿವಾರಣೆಗೆ ಸೂಕ್ತ ತಿದ್ದುಪಡಿಗಾಗಿ ಹಕ್ಕೊತ್ತಾಯ ಮಂಡಿಸುವುದು ಅಗತ್ಯ. ಇತ್ತೀಚೆಗೆ ಸ್ಪರ್ಧಿಸಿರುವ ಯಾವುದೇ ಅಭ್ಯರ್ಥಿಗಳ ಆಯ್ಕೆಗೆ ಅಸಮ್ಮತಿ ವ್ಯಕ್ತಪಡಿಸುವ ನೋಟಾ ಜಾರಿಗೆ ಬಂದಿದೆ. ಆದರೂ ನೋಟಾಗೆ ಚಲಾವಣೆ ಆದ ಮತಗಳನ್ನು ಪರಿಗಣಿಸದೆ ಕಡಿಮೆ ಮತ ಪಡೆದ ಅಭ್ಯರ್ಥಿಯನ್ನು ಗೆದ್ದಿರುವುದಾಗಿ ಘೋಷಿಸಲಾಗುತ್ತದೆ. ಅಂದರೆ ಕಡಿಮೆ ಮತ ಪಡೆದವರಿಗಿಂತ ಹೆಚ್ಚಿನ ಮತದಾರರು, ಯಾರೂ ಅರ್ಹರಲ್ಲವೆಂದು ಘೋಷಿಸಿದರೂ ಅದಕ್ಕೆ ಬೆಲೆ ಇಲ್ಲವೆಂದಾದರೆ ಪ್ರಜೆಗಳ ಆದೇಶವನ್ನು ಬದಿಗೊತ್ತಿದಂತಲ್ಲವೇ? ಆದ್ದರಿಂದ ವ್ಯತ್ಯಾಸ ಕನಿಷ್ಟ ಮತಗಳಿಗಿಂತ ಹೆಚ್ಚಿದ್ದರೆ ಮರು ಮತದಾನ ಮಾಡುವಂತಿರಬೇಕು ಹಾಗೂ ಈ ಮೊದಲು ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪುನಃ ಸ್ಪರ್ಧಿಸಲು ಅನರ್ಹವಾಗಬೇಕು. ಹೀಗಾದರೆ ಮಾತ್ರ ಮತದಾರರ ಅಭಿಪ್ರಾಯಕ್ಕೆ ಮನ್ನಣೆ.

ಸರಕಾರಿ ನೌಕರರು ಯಾವುದೇ ರೀತಿಯಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳಲ್ಲಿ ಸ್ಪಷ್ಟ ನಿರ್ಬಂಧ ವಿಧಿಸಲಾಗಿದೆ. ಆದರೂ ಕೆಲವೊಂದು ಪ್ರಭಾವಶಾಲಿ ನೌಕರರು, ಅಧಿಕಾರಿಗಳು ರಾಜಕೀಯ ಶ್ರೀ ರಕ್ಷೆಯನ್ನೇ ಉದ್ಯೋಗವನ್ನಾಗಿಸಿಕೊಂಡ ಉದಾಹರಣೆಗಳು ಅಗಣಿತ ಸಂಖ್ಯೆಯಲ್ಲಿವೆ. ಮೊನ್ನೆಯಷ್ಟೇ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಮೇಲೆ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪುಟದ ಅನುಮೋದನೆ ಮೇರೆಗೆ ರಾಜೀನಾಮೆ ನೀಡಿದ್ದನ್ನು ಅಂಗೀಕರಿಸಿ, ವಿಧಾನಸಭೆಗೆ ಸ್ಪರ್ಧಿಸಿದ ಪ್ರಕರಣ ಹಸಿರಾಗಿದೆ. ಇಲ್ಲಿ ಜಿಜ್ಞಾಸೆ ಇಷ್ಟೇ, ಕರ್ನಾಟಕ ನಾಗರಿಕ ಸೇವಾ ನಿಯಮ 214 (ಮತ್ತು ಉಪನಿಯಮಗಳಂತೆ) ಯಾವುದೇ ಸರಕಾರಿ ನೌಕರ/ ಅಧಿಕಾರಿ ನಿವೃತ್ತನಾದ ನಂತರವೂ ನಾಲ್ಕು ವರ್ಷ ಕಾಲ ಅವರ ಸೇವಾವಧಿಯಲ್ಲಿ ನಡೆದಿರಬಹುದಾದ, ಶಿಸ್ತು ಕ್ರಮಕ್ಕೆ ಅರ್ಹವೆನಿಸಬಹುದಾದ ಪ್ರಕರಣವಿದ್ದರೆ ಶಿಸ್ತು ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಇಂತಹ ಪ್ರಭಾವಶಾಲಿ ಅಧಿಕಾರಿಗಳ ವಿರುದ್ಧ ಅದಾಗಲೇ ಆರೋಪ ಇದ್ದರೂ ಅದನ್ನು ಬದಿಗೊತ್ತಿ ಸ್ಪರ್ಧೆಗೆ ಅವಕಾಶ ಮಾಡಿ ಕೊಟ್ಟ ಮೇಲೆ ಅಂಥವರ ವಿರುದ್ಧ ಶಿಸ್ತು ಕ್ರಮ ನಿರೀಕ್ಷಿಸುವುದು ಕನಸಿನ ಮಾತು. ಅಲ್ಲದೆ ಶಿಸ್ತು ಕ್ರಮವನ್ನು ಕಾಟಾಚಾರಕ್ಕೆ ಕೈಗೊಂಡರೂ ಅದರ ಫ‌ಲಿತಾಂಶ ಏನಿರಬಹುದೆಂದು ಸುಲಭವಾಗಿ ಊಹಿಸಬಹುದು. ಆದ್ದರಿಂದ ಯಾವುದೇ ಸರಕಾರಿ ನೌಕರ/ ಅಧಿಕಾರಿ ಸ್ವಯಂ ನಿವೃತ್ತಿ ಅಥವಾ ವಯೋನಿವೃತ್ತಿ ಹೊಂದಿದರೂ ಕನಿಷ್ಟ ನಾಲ್ಕು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧಿಸಬೇಕು. 

ಇವೆಲ್ಲ ವ್ಯಕ್ತಿಗತ ವಿಷಯಗಳು. ಇನ್ನು ಪಕ್ಷದ ಬಗ್ಗೆ ಹೇಳುವುದಾದರೆ ಮೊದಲಿಗೆ ಬರುವುದು ಚುನಾವಣಾ ಪ್ರಣಾಳಿಕೆ. ಇತ್ತೀಚಿನ ದಿನಗಳಲ್ಲಿ ಇದೊಂದು ಅನಿವಾರ್ಯ ಪ್ರಹಸನದಂತೆ ಭಾಸವಾಗುತ್ತದೆ. ಅಂದರೆ ದೇಶದ, ರಾಜ್ಯದ ಅಥವಾ ಒಂದು ನಿರ್ದಿಷ್ಟ ಪ್ರದೇಶದ, ಜನರ ಅವಶ್ಯಕತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ರೂಪಿತವಾದ ಕಾರ್ಯ ಯೋಜನೆಗಳು ಇರುವ ಬದಲಿಗೆ ಉಚಿತಗಳ ಆಮಿಷ ತುಂಬಿದ, ಯಾವುದೇ ಸ್ಪಷ್ಟ ವಿವರಣೆ ಇಲ್ಲದ, ಒಮ್ಮೆ ಓದಿ ಅಥವಾ ಓದದೇ ಮೂಲೆಗೆ ಬಿಸುಡುವ ರದ್ದಿ ಕಾಗದದಂತೆ ಆಗಿದೆ. ಉಚಿತ ಅಕ್ಕಿ, ಉಚಿತ ಬಸ್‌ ಪಾಸ್‌, ಉಚಿತ ಸಮವಸ್ತ್ರ, ಉಚಿತ ಲ್ಯಾಪ್‌ಟಾಪ್‌ ಹೀಗೆ ಉಚಿತಗಳ ಸರಮಾಲೆಯ ಭ್ರಮಾಲೋಕದ ಬದಲು ಸ್ಪಷ್ಟ ಯೋಜನೆಗಳನ್ನು ಕೊಡಬೇಕು. ಉದಾ: ಐದು ವರ್ಷಗಳಲ್ಲಿ ಐದು ಕೋಟಿ ಉದ್ಯೋಗ ಎಂದರೆ ಸಾಲದು, ಹೇಗೆ, ಎಲ್ಲಿ, ಯಾವ ರೀತಿ ಎಂದು ವಿವರಿಸಿ. ಶಾಲಾ ಕಾಲೇಜು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಎಲ್ಲಿ, ಎಷ್ಟು ಸ್ಥಾಪಿಸುತ್ತೀರಿ ಎಂದು ತಿಳಿಸಿ. ಇದನ್ನು ಪ್ರಾದೇಶಿಕ ಮಾನದಂಡದಡಿ ಪರಿಗಣಿಸಿ. ಜಾತಿ ಮತಗಳ ಆಧಾರದಲ್ಲಿ ಅಲ್ಲ. ಮಾತ್ರವಲ್ಲದೆ ಇವುಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ವೆಚ್ಚ ಮತ್ತು ಸಂಪನ್ಮೂಲಗಳ ಸ್ಪಷ್ಟ ಮಾಹಿತಿ ಕೊಡಿ. ಇದೆಲ್ಲದಕ್ಕಿಂತ ಇವುಗಳಲ್ಲಿ ಕಾರ್ಯಗತಗೊಳಿಸಲು ತಪ್ಪಿದರೆ ಅಂತಹ ಆಶ್ವಾಸನೆ ನೀಡಿದವರನ್ನು ವಚನಭಂಗದ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡುವಂತಹ ಕಾಯಿದೆ ಬರಬೇಕು.

ಚುನಾವಣಾ ವರ್ಷದಲ್ಲಿ ಆಡಳಿತಾರೂಢ ಪಕ್ಷದ ಸರಕಾರ ವಾರ್ಷಿಕ ಆಯವ್ಯಯದ ನೆಪದಲ್ಲಿ ಭರವಸೆಗಳನ್ನು ನೀಡುವ ಪರಿಪಾಠ ನಿಲ್ಲಬೇಕು. ಪುನರಪಿ ಆಯ್ಕೆಯಾಗುವ ನಿರೀಕ್ಷೆಯಲ್ಲಿ ಯೋಜನೆಗಳನ್ನು ಪ್ರಕಟಿಸುವ ಪದ್ಧತಿ ನಿಲ್ಲಬೇಕು. ಸರಕಾರಕ್ಕೆ ಪೂರ್ಣಾವಧಿ ಇಲ್ಲದಿದ್ದರೆ ಪೂರ್ಣ ಪ್ರಮಾಣದ ಆಯವ್ಯಯ ಮಂಡನೆಗೆ ಅವಕಾಶ ಇರಬಾರದು. 

ಇನ್ನು ಬಹುಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾ ವಣೋತ್ತರ ಮೈತ್ರಿ ಒಂದು ಕೆಟ್ಟ ಪದ್ಧತಿ. ವಿಭಿನ್ನ ದೃಷ್ಟಿಕೋನದ, ತದ್ವಿರುದ್ಧ ಯೋಜನೆಗಳನ್ನು ಮುಂದಿಟ್ಟುಕೊಂಡು ಆಯ್ಕೆಯಾದ ಪಕ್ಷಗಳು ಚುನಾವಣೆಯ ನಂತರ ಮೈತ್ರಿಯ ಹೆಸರಿನಲ್ಲಿ ಒಂದುಗೂಡಿ ಸರಕಾರ ರಚಿಸಿ ಆಡಳಿತಕ್ಕೆ ಮುಂದಾಗುವುದು ಕೆಟ್ಟ ಪದ್ಧªತಿ. ಇದರ ಬದಲಿಗೆ ಮರುಚುನಾವಣೆಯೋ, ಎರಡೂ ಪಕ್ಷಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಮಾತ್ರ ಒಂದಿಷ್ಟು ಅವಧಿಗೆ ಅಳವಡಿಸಿಕೊಂಡರೆ ಅರ್ಥಪೂರ್ಣವೆನಿಸೀತು. 

ಮಂತ್ರಿಮಂಡಳ ರಚನೆಗೆ ಸಂಖ್ಯಾಮಿತಿ, ಪಕ್ಷಾಂತರ ನಿಷೇಧ ಕಾಯಿದೆಗಳು ಉತ್ತಮ ಬೆಳವಣಿಗೆಯೇ ಆದರೂ ಇವುಗಳಲ್ಲೂ ಇರುವ ಕೆಲವು ಚಿಕ್ಕ ಪುಟ್ಟ ದೋಷಗಳ ಲಾಭ ಪಡೆದು ಜನಾದೇಶವನ್ನು ಬುಡಮೇಲು ಮಾಡಿದ ಉದಾಹರಣೆಗಳಿವೆ. ಮಂತ್ರಿಗಳ ಸಂಖ್ಯೆ ಮಿತಿಗೊಳಿಸಿದರೆ ಸಮಾನಾಂತರ ಸೌಲಭ್ಯವುಳ್ಳ ಸಂಸದೀಯ ಕಾರ್ಯದರ್ಶಿ ಹು¨ªೆ ಸೃಷ್ಟಿಸಿ ಅದಕ್ಕೆ ಶಾಸಕರನ್ನು ನೇಮಿಸುವುದು, ಯಾವುದೇ ಲಾಭ ಗಳಿಸದಿದ್ದರೂ ನಿಗಮ-ಮಂಡಳಿಗಳೆಂಬ ಬಿಳಿಯಾನೆಗಳಿಗೆ ನೇಮಕಾತಿ ಮಾಡಿ ತೆರಿಗೆದಾರರ ಹಣವನ್ನು ಪೋಲು ಮಾಡುವುದು ಇತ್ಯಾದಿ. 

ಇದೆಲ್ಲದಕ್ಕಿಂತ ಶೋಚನೀಯವೆಂದರೆ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಆಯ್ಕೆಯಾದ ಶಾಸಕರು ಕುದುರೆ ವ್ಯಾಪಾರಕ್ಕೆ ತೊಡಗಿ ಆಯ್ಕೆ ಮಾಡಿದ ಮತದಾರರ ಅನುಮತಿ ಇಲ್ಲದೆ ರಾಜೀನಾಮೆ ನೀಡಿ, ಒಟ್ಟು ಸದಸ್ಯರ ಸಂಖ್ಯೆಯನ್ನೇ ಕಡಿಮೆಗೊಳಿಸಿ ಜನಾದೇಶವನ್ನು ಬುಡಮೇಲು ಮಾಡುವ ಚಾಳಿ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವದ ಅಣಕವಲ್ಲದೇ ಇನ್ನೇನು? 

ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದಲ್ಲಿ ಕನಿಷ್ಟ ಈ ನಿಯಮಗಳು ತ್ವರಿತವಾಗಿ ಜಾರಿಗೆ ಬರಬೇಕು. ಇಲ್ಲವಾದರೆ ಪ್ರಜಾತಂತ್ರ ವ್ಯವಸ್ಥೆ ಅರ್ಥಹೀನವೆನಿಸುವ ದಿನಗಳು ದೂರವಿಲ್ಲ.

ಮೋಹನದಾಸ ಕಿಣಿ 

ಟಾಪ್ ನ್ಯೂಸ್

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

PM Modi: ಶಿವ ದೇಗುಲ ವಿವಾದದ ಮಧ್ಯೆ ಅಜ್ಮೇರ್ ದರ್ಗಾಗೆ ಮೋದಿ ಚಾದರ್‌ ಅರ್ಪಣೆ

PM Modi: ಶಿವ ದೇಗುಲ ವಿವಾದದ ಮಧ್ಯೆ ಅಜ್ಮೇರ್ ದರ್ಗಾಗೆ ಮೋದಿ ಚಾದರ್‌ ಅರ್ಪಣೆ

ರಾಜ್ಯಕ್ಕೆ ನಡ್ಡಾ ಆಗಮನ: ರಾಜ್ಯ ನಾಯಕರ ಜತೆ ಚರ್ಚೆ

BJP: ರಾಜ್ಯಕ್ಕೆ ನಡ್ಡಾ ಆಗಮನ: ರಾಜ್ಯ ನಾಯಕರ ಜತೆ ಚರ್ಚೆ

ಮಾಸಿಕ ಗೌರವಧನದ ಆಧಾರದಲ್ಲಿ ತಜ್ಞ ವೈದ್ಯರ ನೇಮಕಕ್ಕೆ ತೀರ್ಮಾನ

Health Department: ಮಾಸಿಕ ಗೌರವಧನದ ಆಧಾರದಲ್ಲಿ ತಜ್ಞ ವೈದ್ಯರ ನೇಮಕಕ್ಕೆ ತೀರ್ಮಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Supreme Court: ತೀರ್ಪಿನಲ್ಲಿ ಲವ್‌ ಜೆಹಾದ್‌ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಕಾರ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

ಪ್ರಧಾನಿ ಭೇಟಿಯಾದ ದಿಲ್ಜೀತ್‌ ವಿರುದ್ಧ ರೈತರ ಆಕ್ರೋಶ

1-medi

Mangaluru; ಮೆಡಿಕಲ್‌ ಶಾಪ್‌ನಲ್ಲಿ ಸುಲಿಗೆ ಮಾಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.