ಅಂತೂ ಯಕ್ಷಗಾನ ಪಠ್ಯಕ್ಕೆ ಮುದ್ರಣ ಭಾಗ್ಯ
Team Udayavani, Nov 23, 2018, 6:25 AM IST
ಶಿರಸಿ: ಯಕ್ಷಗಾನ ಪಠ್ಯ ರಚನೆಗೊಂಡು ಆರು ವರ್ಷಗಳ ಬಳಿಕ ಮುದ್ರಣಕ್ಕೆ ಸಮ್ಮತಿ ಸಿಕ್ಕಿದೆ. ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಂ. ರಾಘವೇಂದ್ರ ಅವರು (ಏಕ ಕಡತ ಸಂಖ್ಯೆ ಕ.ಪ.ಪು.ಸಂ/ ಯಪಪುರ 01/2011-12) ಉಲ್ಲೇಖದಡಿ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕರಿಗೆ ನ.16ರಂದು ಪತ್ರ ಬರೆದು ಆದೇಶಿಸಿದ್ದಾರೆ.
ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಲ್ಲಿ ಯಕ್ಷಗಾನ ಪಠ್ಯವನ್ನು 5 ಸಾವಿರ ಸಂಖ್ಯೆಯಲ್ಲಿ ಮುದ್ರಿಸಲು ಸೂಚಿಸಿದ್ದಾರೆ. ಈ ಮೂಲಕ ಬಾಕಿ ಉಳಿದಿದ್ದ ಆಗಬೇಕಾದ ಕಾರ್ಯಕ್ಕೆ ಚಾಲನೆ ಸಿಕ್ಕಂತಾಗಿದ್ದು, ಯಕ್ಷ ಪ್ರಿಯರಲ್ಲಿ ಹರ್ಷ ತಂದಿದೆ.
ಬಡಗು, ತೆಂಕು, ಬಡಾಬಡಗು ಯಕ್ಷಗಾನ ನಾಡಿನ ಜನಪ್ರಿಯ ಕಲೆಗಳು. ಆದರೆ, ಇದಕ್ಕೆ ಸಂಬಂಧಿಸಿ ಸಂಗೀತ ಮಾದರಿಯಲ್ಲಿ ಪಠ್ಯಗಳು ರಚನೆ ಆಗಿರಲಿಲ್ಲ. ಜಾನಪದ, ಶಾಸ್ತ್ರೀಯ ಎಂಬ ಗೊಂದಲದ ಮಧ್ಯೆ ಶಾಸ್ತ್ರೀಯ ಕಲೆಯ ಮಾನ್ಯತೆಗೆ ಪಠ್ಯ ರಚನೆಯ ಅಗತ್ಯತೆ ಕೂಡ ಇತ್ತು. ಯಕ್ಷಗಾನ ಒಂದೇ ಆದರೂ ಒಂದೊಂದು ಕಡೆ ಒಂದೊಂದು ಮಾದರಿಯಲ್ಲಿ ಪಾಠ ಮಾಡುವ ರೂಢಿಯಲ್ಲಿತ್ತು. ಏಕ ಸೂತ್ರ ಅಳವಡಿಕೆ ಮಾಡಿ ಅದಕ್ಕೊಂದು ಶಾಸ್ತ್ರೀಯ ರೂಪ ನೀಡಬೇಕೆಂಬ ಆಗ್ರಹಗಳೂ ವ್ಯಕ್ತವಾಗುತ್ತಲೇ ಇದ್ದವು.
ಆಗಿದ್ದು ಆಗಲೇ!: ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಯಕ್ಷಗಾನಕ್ಕೂ ಪಠ್ಯ ರಚನೆಯ ಪ್ರಸ್ತಾಪಕ್ಕೆ ಒಂದು ರೂಪ ಕೊಡುವ ಪ್ರಯತ್ನ ನಡೆಯಿತು.
ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತ್, ಸದಾನಂದ ಐತಾಳ, ಪ್ರಕಾಶ ಮೂಡಿತ್ತಾಯ ಹಾಗೂ ಇತರನ್ನೊಳಗೊಂಡ ತಜ್ಞರ ಸಮಿತಿ ಯಕ್ಷಗಾನ ಪಠ್ಯಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಒಂದು ರೂಪ ನೀಡಿತ್ತು.ಆದರೆ, ಸರ್ಕಾರಗಳು ಬದಲಾದಂತೆ ಕಡತ ಕೂಡ ಮುಂದುವರಿಯಲಿಲ್ಲ. ಈಗ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ವಿದ್ವಾಂಸ ಪ್ರೊ.ಎಂ.ಎ.ಹೆಗಡೆ ದಂಟ್ಕಲ್ ಅವರು ಬಂದ ಬಳಿಕ ಇದಕ್ಕೆ ಚಾಲನೆ ಸಿಕ್ಕಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಮೋದ ಮಧ್ವರಾಜ್ ಕಡತ ಹುಡುಕಿಸಿ ಪಠ್ಯಪುಸ್ತಕ ಮುದ್ರಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ.
ಏನಿದೆ ಇಲ್ಲಿ?: ತೆಂಕು ಬಡಗು ಸೇರಿ ಯಕ್ಷಗಾನ ಕಲಿಕೆಗೆ ಅವಕಾಶ ಆಗುವ ಸೂತ್ರಗಳು ಇಲ್ಲಿವೆ. ಸಂಗೀತ ಪರೀಕ್ಷೆಯ ಮಾದರಿಯಲ್ಲಿ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಿಗೆ ಅಗತ್ಯವಾದ ಪಠ್ಯಗಳು ಆಸಕ್ತರ ಕೈಗೆ ಸಿಗಲಿವೆ. ಈಗಾಗಲೇ ಹಲವಡೆ ಯಕ್ಷಗಾನ ತರಬೇತಿ ನೀಡುತ್ತಿರುವ ಕೇಂದ್ರಗಳಿಗೆ, ವಾರಕ್ಕೊಂದು ತರಗತಿ ನಡೆಸುವ ಶಾಲೆಗಳಿಗೆ, ಯಕ್ಷಗಾನ ಅಕಾಡೆಮಿ ನಡೆಸುತ್ತಿರುವ ತರಬೇತಿ ಶಿಬಿರಗಳಿಗೆ ಅನುಕೂಲ ಆಗಲಿದೆ. ನಾಡಿನ ಎಲ್ಲೆಡೆ ಒಂದೇ ಮಾದರಿಯ ಪಠ್ಯ ಸಿಗಲಿದೆ. ಇದಕ್ಕೆ ಅಗತ್ಯವಾದ ಕೆಲವು ಮೂಲ ಸೌಕರ್ಯ, ಕಲಿಕಾ ಸಾಮಗ್ರಿಗಳನ್ನೂ ಇಲಾಖೆ ಒದಗಿಸಬೇಕಾಗಬಹುದಾಗಿದೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪಠ್ಯ ರಚನೆಯ ಬಳಿಕ ಕಲಿಕಾ ಹಾಗೂ ಪರೀûಾ ವಿಧಾನಗಳಿಗೆ ಆದ್ಯತೆ ನೀಡಬೇಕಾಗಿದೆ. ಸೀನಿಯರ್, ಜೂನಿಯರ್ ಬಳಿಕ ವಿದ್ವತ್ ಪರೀಕ್ಷೆಗಳಿಗೂ ಪಠ್ಯ ರಚನೆ ಮಾಡಬೇಕಿದೆ. ಯಕ್ಷಗಾನ ಕಲಿತೇ ಕಲಾವಿದರು ಆದವರು ಇಲ್ಲ. ಹಾಗೆ ಕೇಂದ್ರಗಳಲ್ಲಿ ಕಲಿತವರಿಗೆ ಪ್ರಮಾಣ ಪತ್ರ ಕೂಡ ಇಲ್ಲ. ಆದರೆ, ಅವರು ನಡೆಸುವ ಕಲಿಕಾ ಕೇಂದ್ರಗಳಿಗೂ ಮಾನ್ಯತೆ ನೀಡಿ ಯಕ್ಷಗಾನ ಸೀಮೋಲ್ಲಂಘನಕ್ಕೆ ಮುಂದಾಗಬೇಕಿದೆ.
ಯಕ್ಷಗಾನ ಪಠ್ಯ ಮುದ್ರಣಕ್ಕೆ ಹೊರಟಿದ್ದು ಖುಷಿಯಾಗಿದೆ. ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ಯಕ್ಷಗಾನ ಪ್ರಿಯರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ.
– ಪ್ರೊ.ಎಂ.ಎ.ಹೆಗಡೆ ದಂಟ್ಕಲ್, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ
ಕಲಿಕೆಯ ದೃಷ್ಟಿಯಿಂದ ಇಂಥ ಪಠ್ಯ ರಚನೆ ಆಗಿದ್ದು, ಈಗಲಾದರೂ ಮುದ್ರಣಕ್ಕೆ ಹೋಗಿದ್ದು ಸಂತಸ ಮೂಡಿಸಿದೆ. ಇದು ಎಲ್ಲ ಆಸಕ್ತರ ಕೈಗೆ ಸಿಕ್ಕು ಅಧ್ಯಯನಕ್ಕೆ ಅನುಕೂಲವಾಗಲಿ.
– ಕೇಶವ ಹೆಗಡೆ ಕೊಳಗಿ, ಪ್ರಸಿದ್ಧ ಭಾಗವತರು
– ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.