ಚಲನಚಿತ್ರ ಬಾಲನಟರೊಂದಿಗೆ ಸಂವಾದ
Team Udayavani, Nov 23, 2018, 3:15 AM IST
ನೆಹರೂನಗರ: ‘ಕನಸುಗಳು’ ಕಾರ್ಯಕ್ರಮದ ಪ್ರಯುಕ್ತ ವಿವೇಕಾನಂದ ಪ. ಪೂ. ಕಾಲೇಜಿನಲ್ಲಿ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಲನ ಚಿತ್ರದ ಬಾಲನಟರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಚಲನಚಿತ್ರದ ಬಾಲನಟರಾದ ರಂಜನ್ (ಪ್ರವೀಣ), ಸಂಪತ್ (ಮಮ್ಮುಟ್ಟಿ), ಸಪ್ತಾ ಪಾವೂರ್ (ಪಲ್ಲವಿ) ಹಾಗೂ ಆತಿಶ್ (ಅರುಣ) ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು. ಚಲನಚಿತ್ರ ಕ್ಷೇತ್ರದ ತಮ್ಮ ಅನುಭವಗಳನ್ನು, ಮೆಚ್ಚಿದ ಘಟನೆಗಳನ್ನು ನೆನಪಿಸಿಕೊಂಡು, ಅಭಿಪ್ರಾಯ ಹಂಚಿಕೊಂಡರು.
ಬಾಲನಟ ರಂಜನ್ ಮಾತನಾಡಿ, ಪ್ರಪಂಚದಲ್ಲಿ ಯಾರೂ ದಡ್ಡರಿಲ್ಲ. ಪ್ರತಿಯೊಬ್ಬರೊಳಗೂ ಪ್ರತಿಭೆ ಇದ್ದೇ ಇರುತ್ತದೆ. ಅವುಗಳನ್ನು ಜಗತ್ತಿಗೆ ತಿಳಿಸಲು ಸೂಕ್ತವಾದ ವೇದಿಕೆ, ಅವಕಾಶಗಳು ಬೇಕು. ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕಿಗೆ ಹೊಸ ಅರ್ಥ ಉಂಟಾಗುತ್ತದೆ ಎಂದರು. ಬಾಲನಟಿ ಸಪ್ತಾ ಪಾವೂರ್ ಮಾತನಾಡಿ, ಆಸಕ್ತಿ ಇರುವ ಯಾವುದಾದರೂ ಚಟುವಟಿಕೆಗಳಲ್ಲಿ ಸಾಧನೆಯನ್ನು ಮಾಡುತ್ತಾ ಹೋದಂತೆ ಉಳಿದ ವಿಚಾರಗಳಲ್ಲೂ ತನ್ನಿಂದ ತಾನೇ ಆಸಕ್ತಿ ಮೂಡುತ್ತದೆ. ಅದು ಬದುಕಿಗೆ ಒತ್ತಡ ಎನಿಸುವುದಿಲ್ಲ ಎಂದರು.
ಸಂಪತ್ ಮಾತನಾಡಿ, ಪ್ರತಿಯೊಂದು ಮಗುವಿಗೂ ಶಾಲೆ ಕುರಿತು ಅಭಿಮಾನ ಇರುತ್ತದೆ. ವಿದ್ಯೆಯು ವ್ಯಕ್ತಿಗೆ ಹೊಂದಾಣಿಕೆಯ ಪಾಠವನ್ನು ಹೇಳಿಕೊಡುತ್ತದೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯಬೇಕಿದ್ದರೆ ಕಠಿನ ಪರಿಶ್ರಮ ಅಗತ್ಯ. ಕನಸುಗಳನ್ನು ಸಾಧನೆಯ ಹಾದಿಯಲ್ಲಿ ಅಳವಡಿಸಿಕೊಂಡರೆ ನಿಜವಾದ ಸುಖ ಸಿಗುತ್ತದೆ ಎಂದರು.
ಉಪನ್ಯಾಸಕ ಹರೀಶ ಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.