ಅನಿಲ ಸಾಗಾಟ: ಪಾಲನೆಯಾಗದ ಜಿಲ್ಲಾಡಳಿತದ ಮಾರ್ಗಸೂಚಿ!


Team Udayavani, Nov 23, 2018, 4:40 AM IST

gas-tanker-23-11.jpg

ಮಹಾನಗರ: ನಂತೂರು ಸರ್ಕಲ್‌ನಲ್ಲಿ ಬುಧವಾರ ಗ್ಯಾಸ್‌ ಟ್ಯಾಂಕರ್‌ವೊಂದು ಪಲ್ಟಿಯಾಗಿದ್ದರೂ ಅನಿಲ ಸೋರಿಕೆಯಾಗದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನಿಲ ಸಾಗಾಟ ಮಾಡಬೇಕಾದರೆ ಅನುಸರಿಸಬೇಕಾಗಿದ್ದ ನಿಯಮಗಳ ಪಾಲನೆ ಮಾಡದಿರುವುದು ಬೆಳಕಿಗೆ ಬಂದಿದೆ. 2013ರಲ್ಲಿ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಗ್ಯಾಸ್‌ ಟ್ಯಾಂಕರ್‌ ದುರಂತ ಸಂಭವಿಸಿ ಎಂಟು ಮಂದಿ ಅಗ್ನಿ ಅವಘಡಕ್ಕೆ ಬಲಿಯಾಗಿದ್ದರು. ಈ ದುರ್ಘ‌ಟನೆ ಬಳಿಕ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಯಾವುದೇ ಗ್ಯಾಸ್‌ ಟ್ಯಾಂಕರ್‌ಗಳು ಅನಿಲ ಸಾಗಾಟ ಮಾಡಬೇಕಾದರೆ, 10 ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ತೈಲ ಕಂಪೆನಿಗಳು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿತ್ತು. 

ಮಂಗಳೂರು ಎಚ್‌ಪಿಸಿಎಲ್‌, ಬಿಪಿಸಿಎಲ್‌, ಐಒಸಿ, ಎಂಆರ್‌ಪಿಎಲ್‌ ಸಹಿತ ಪ್ರಮುಖ ತೈಲ ಮತ್ತು ಅನಿಲ ಕಂಪೆನಿಗಳನ್ನು ಹೊಂದಿರುವ ಕೇಂದ್ರ. ಮಂಗಳೂರು ಸಹಿತ ದಕ್ಷಿಣ ಕನ್ನಡ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66, 75 ಹಾಗೂ 169ರಲ್ಲಿ ದಿನಂಪ್ರತಿ 1800ಕ್ಕೂ ಅಧಿಕ ಟ್ಯಾಂಕರ್‌ಗಳು ಚಲಿಸುತ್ತಿವೆ. 8 ಟನ್‌ಗಳಿಂದ 18 ಟನ್‌ವರೆಗೆ ಎಲ್‌ಪಿಜಿ ಹಾಗೂ ಇತರ ಅಪಾಯಕಾರಿ ಅನಿಲಗಳು ಹಾಗೂ ರಾಸಾಯನಿಕಗಳನ್ನು ಸಾಗಿಸುತ್ತಿವೆ.

ಜಿಲ್ಲಾಡಳಿತದ‌ 10 ಮಾರ್ಗಸೂಚಿ
ಪೆರ್ನೆ ದುರಂತದಿಂದ ಎಚ್ಚೆತ್ತುಕೊಂಡಿದ್ದ ಜಿಲ್ಲಾಡಳಿತವು ಆಗ ಎಲ್ಲ ಎಲ್‌ಪಿಜಿ ಸರಬರಾಜು ಕಂಪೆನಿಗಳ ಸಭೆ ಕರೆದು ಸುಮಾರು 10 ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ತೈಲ ಕಂಪೆನಿ ಹಾಗೂ ಗ್ಯಾಸ್‌ ಟ್ಯಾಂಕರ್‌ ಮಾಲಕರಿಗೆ ನಿರ್ದೇಶನ ನೀಡಿತ್ತು. ಆ ಪ್ರಕಾರ, ಅನಿಲ ಸಾಗಾಟ ಮಾಡುವ ವೇಳೆ ಪ್ರತಿಯೊಂದು ಟ್ಯಾಂಕರ್‌ನಲ್ಲಿ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್‌ ಕಡ್ಡಾಯವಾಗಿ ಇರಬೇಕು. ಇದಕ್ಕೆ ಪೂರಕವಾದ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ಇನ್ನು ಟ್ಯಾಂಕರ್‌ಗೂ ವೇಗ ನಿಯಂತ್ರಣಕ್ಕೆ ಸ್ಪೀಡ್‌ ಬ್ರೇಕರ್‌ ಅಳವಡಿಸಿರಬೇಕು. ವಾಹನಗಳ ಚಲನ-ವಲನಗಳನ್ನು ಗಮನಿಸಲು ಜಿಪಿಎಸ್‌ ವ್ಯವಸ್ಥೆ ಕೂಡ ಹೊಂದಿರಬೇಕು. ಅಲ್ಲದೆ, ಈ ಜಿಪಿಎಸ್‌ ವ್ಯವಸ್ಥೆ ಪೊಲೀಸ್‌ ಅಧೀಕ್ಷಕರ ಕಚೇರಿಗೂ ಸಂಪರ್ಕಿಸಿರಬೇಕು. ತುರ್ತು ಕಾರ್ಯಾಚರಣೆ ತಂಡವನ್ನು ಕೂಡ ಸನ್ನದ್ದಗೊಳಿಸಿರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ತೈಲ ಕಂಪೆನಿಗಳು ಅನಿಲ ಸಾಗಾಟ ವಾಹನದ ಮೇಲೆ ಹೆಚ್ಚು ನಿಗಾ ವಹಿಸಬೇಕು. ಕಂಪೆನಿಗಳು ಹಾಗೂ ಸಾಗಾಟದಾರ ಸಂಸ್ಥೆಗಳು ಹೆಚ್ಚುವರಿ ತುರ್ತು ಕಾರ್ಯಾಚರಣೆ ವಾಹನ ವ್ಯವಸ್ಥೆಗೊಳಿಸಬೇಕು. ಬುಲೆಟ್‌ ಟ್ಯಾಂಕರ್‌ಗಳು (ದೊಡ್ಡ ಟ್ಯಾಂಕರ್‌) ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಚರಿಸಬಾರದು ಎಂಬ ನಿಯಮ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿದೆ.

ಬುಧವಾರ ನಂತೂರು ಸರ್ಕಲ್‌ನಲ್ಲಿ ಸಂಭವಿಸಿದ ದುರ್ಘ‌ಟನೆಯಲ್ಲಿಯೂ ಜಿಲ್ಲಾಡಳಿತದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅನಿಲ ಸಾಗಾಟವಾಗುತ್ತಿರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಿರುವಾಗ, ಒಂದುವೇಳೆ, 18 ಟನ್‌ನಷ್ಟು ಎಲ್‌ಪಿಜಿ ತುಂಬಿದ್ದ ಗ್ಯಾಸ್‌ ಟ್ಯಾಂಕರ್‌ ಉರುಳಿ ಅನಿಲ ಸೋರಿಕೆಯಿಂದ ಅನಾಹುತ ಸಂಭವಿಸುತ್ತಿದ್ದರೆ, ಅದಕ್ಕೆ ಯಾರು ಹೊಣೆಯಾಗಬೇಕಾಗಿತ್ತು ಎನ್ನುವ ಗಂಭೀರ ಪ್ರಶ್ನೆ ಎದುರಾಗುತ್ತದೆ. ಅಷ್ಟೇಅಲ್ಲ, ಪೆರ್ನೆ ಗ್ಯಾಸ್‌ಟ್ಯಾಂಕರ್‌ ದುರಂತದಿಂದ ಸಂಬಂಧಪಟ್ಟ ಇಲಾಖೆಯವರಾಗಲಿ ಅಥವಾ ಅದಕ್ಕೆ ಹೊಣೆಯಾಗಬೇಕಾದ ತೈಲ ಕಂಪೆನಿಗಳು ಇನ್ನು ಕೂಡ ಪಾಠ ಕಲಿತಿಲ್ಲ ಎನ್ನುವುದು ಬಯಲಾಗಿದೆ.

ಈ ಮಾರ್ಗಸೂಚಿಗಳು ಪಾಲನೆಯಾಗದಿದ್ದರೆ, ಅಂಥಹ ಅನಿಲ ಸಾಗಾಟದಾರರ ಮೇಲೆ ಪೊಲೀಸರು ಕಠಿನ ಕ್ರಮಗಳನ್ನು ಜರಗಿಸಬೇಕು. ಈ ಬಗ್ಗೆ ಆರ್‌ಟಿಒ ಇಲಾಖೆ ನಿರಂತರ ತಪಾಸಣೆಗಳನ್ನು ಕೈಗೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸುವ ಟ್ಯಾಂಕರ್‌ಗಳನ್ನು ವಶ ಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಇನ್ನೊಂದೆಡೆ, ಇಂಥಹ ಹೆಚ್ಚಿನ ಅಪಘಾತಗಳು ಹೆದ್ದಾರಿಯ ತೀವ್ರ ತಿರುವುಗಳಲ್ಲಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಸೂಕ್ತ ಯೋಜನೆ ರೂಪಿಸುವಂತೆ ರಾ.ಹೆ. ಇಲಾಖೆಗೂ ಸೂಚಿಸಲಾಗಿತ್ತು. ಆದರೆ, ಬಹುತೇಕ ಸಂದರ್ಭಗಳಲ್ಲಿ ಟ್ಯಾಂಕರ್‌ಗಳು ಅನಿಲ ಸಹಿತ ಸುಲಭವಾಗಿ ಬೆಂಕಿ ಹತ್ತಿಕೊಳ್ಳಬಹುದಾದ ವಸ್ತುಗಳ ಸಾಗಾಟದಲ್ಲಿ ಈ ರೀತಿಯ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಲಾಗಿರುತ್ತದೆ ಎನ್ನುವುದು ಕಟು ಸತ್ಯ. ನಂತೂರು ಘಟನೆಯಲ್ಲಿಯೂ ಗ್ಯಾಸ್‌ ಟ್ಯಾಂಕರ್‌ ರಾತ್ರಿ ವೇಳೆಯಲ್ಲಿ ಅನಿಲ ಸಾಗಾಟ ಮಾಡಿದ್ದು ಜಿಲ್ಲಾಡಳಿತದ ಮಾರ್ಗಸೂಚಿ ಪ್ರಕಾರ ತಪ್ಪು.

ಅತೀ ವೇಗ, ನಿಯಮಗಳ ಉಲ್ಲಂಘನೆ
ಜಿಲ್ಲೆಯಲ್ಲಿ ಸಂಭವಿಸಿರುವ ಹೆಚ್ಚಿನ ಗ್ಯಾಸ್‌ ಟ್ಯಾಂಕರ್‌ ಅಪಘಾತಗಳಿಗೆ ಅತೀ ವೇಗ ಹಾಗೂ ನಿಯಮಗಳ ಪಾಲನೆ ಯಾಗದಿರುವುದು ಕಾರಣ ಎಂಬುದು ಕಂಡುಬಂದಿದೆ. ಹೆಚ್ಚಿನ ಅಪಘಾತಗಳು ತಿರುವುಗಳಲ್ಲಿ ಆಗಿದ್ದು, ಅತಿವೇಗದಿಂದ ಚಲಾಯಿಸಿಕೊಂಡು ಬರುವ ಟ್ಯಾಂಕರ್‌ಗಳಿಗೆ ತಿರುವುಗಳಲ್ಲಿ ವೇಗ ನಿಯಂತ್ರಿಸಲಾರದೆ ಉರುಳಿ ಬೀಳುತ್ತಿವೆ. ಟ್ಯಾಂಕರ್‌ಗಳು ಅನಿಲ ತುಂಬಿಸಿಕೊಂಡು ಹಗಲು ಹೊತ್ತು ಸಂಚಾರ ನಡೆಸಬೇಕು ಎಂಬ ನಿಯಮವಿದೆ ಎನ್ನುತ್ತಾರೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಜಿಲ್ಲಾ ಮುಖ್ಯ ಅಧಿಕಾರಿ ಟಿ.ಎನ್‌. ಶಿವಶಂಕರ್‌.

ಸಾಮಾನ್ಯವಾಗಿ ಹೆಚ್ಚಿನ ಟ್ಯಾಂಕರ್‌ಗಳಲ್ಲಿ ಎರಡು ಚಾಲಕರು ಇರುವುದಿಲ್ಲ. ಕೆಲವು ಟ್ಯಾಂಕರ್‌ಗಳಲ್ಲಿ ಕ್ಲೀನರ್‌ ಕೂಡ ಇರುವುದಿಲ್ಲ. ರಾತ್ರಿ ವೇಳೆ ಅಪಘಾತಗಳು ಸಂಭವಿಸಿದರೆ ಅದು ಗಮನಕ್ಕೆ ಬರುವುದು ತಡವಾಗಿ. ಹಾಗಾಗಿ ಭಾರಿ ಅನಾಹುತಗಳಿಗೆ ಕಾರಣವಾಗುವುದನ್ನು ತಪ್ಪಿಸಲು ಹಗಲು ಹೊತ್ತು ಮಾತ್ರ ಸಂಚಾರ ಮಾಡುವ ನಿಯಮ ಮಾಡಲಾಗಿದೆ. 

ಅನಿಲ ಸೋರಿಕೆಯಾದರೆ ತುರ್ತು ಕ್ರಮಗಳು
ಟ್ಯಾಂಕರ್‌ಗಳಲ್ಲಿ ಮೇಲ್ಗಡೆ ಹಾಗೂ ಕೆಳಗಡೆ ವಾಲ್ವ್ ಗಳಿದ್ದು, ಹಿಂದುಗಡೆ ಗೇಜ್‌ಗಳಿರುತ್ತವೆ. ತೀವ್ರ ಅಪಘಾತಕ್ಕೀಡಾದರೆ ಮಾತ್ರ ಈ ವಾಲ್ವ್ ಗಳಿಗೆ ಹಾನಿಯಾಗುತ್ತವೆ. ಆದರೆ, ಅನಿಲದ ಟ್ಯಾಂಕ್‌ಗಳಿಗೆ ತೂತು ಆಗುವ ಸಾಧ್ಯತೆ ತೀರಾ ಕಡಿಮೆ. ಎಲ್‌ಪಿಜಿ ಗಾಳಿಗಿಂತ ಭಾರವಾದ ಕಾರಣ ಕೆಳ ಭಾಗದಲ್ಲಿ ಚಲಿಸುತ್ತದೆ. ಸೋರಿಕೆಯಾದರೆ ಸುಮಾರು 100 ಮೀ. ದೂರದಲ್ಲಿ ಬೆಂಕಿ ಇದ್ದರೂ ಹತ್ತಿಕೊಳ್ಳುತ್ತದೆ. ವಾಲ್ವ್ ಗಳಿಂದ ಅನಿಲ ಸೋರಿಕೆ ಕಂಡುಬಂದರೆ ಪ್ರಥಮವಾಗಿ ಆ ಪ್ರದೇಶದಲ್ಲಿ ವಾಹನಗಳ ಸಂಚಾರ, ಪರಿಸರದ ಮನೆಗಳಿಂದ ಜನರನ್ನು ತೆರವುಗೊಳಿಸುವುದು, ಕೈಗಾರಿಕೆಗಳನ್ನು ಸ್ಥಗಿತಗೊಳಿಸುವುದು, ವಿದ್ಯುತ್‌ ಸಂಪರ್ಕ ನಿಲ್ಲಿಸಬೇಕು. ಅಗ್ನಿಶಾಮಕ ದಳಕ್ಕೆ ತತ್‌ಕ್ಷಣ ಮಾಹಿತಿ ನೀಡಬೇಕು. ಆಯಿಲ್‌ ಕಂಪೆನಿಗಳಲ್ಲಿರುವ ತುರ್ತು ಕಾರ್ಯಾಚರಣೆ ಪಡೆಗೆ ಮಾಹಿತಿ ರವಾನಿಸಬೇಕು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಅನಿಲ ಸೋರಿಕೆ ಇದ್ದರೆ ನೀರು ಹಾಯಿಸಿ ಅದನ್ನು ದುರ್ಬಲಗೊಳಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿದ್ದರೆ ಅವರಲ್ಲಿರುವ ಕಿಟ್‌ ಮೂಲಕ ವಾಲ್ವ್ ಗಳಲ್ಲಿನ ಸೋರಿಕೆ ನಿಲ್ಲಿಸುತ್ತಾರೆ. ಇನ್ನೂ ತೀವ್ರ ಪ್ರಮಾಣದಲ್ಲಿದ್ದರೆ ತುರ್ತು ಕಾರ್ಯಾಚರಣೆ ಪಡೆಯವರು ಸೋರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಾರೆ. ಅದರಲ್ಲಿರುವ ಅನಿಲವನ್ನು ಬೇರೆ ವಾಹನಕ್ಕೆ ವರ್ಗಾಯಿಸಲಾಗುತ್ತದೆ. ಇದಕ್ಕೆ ಸುಮಾರು 3ರಿಂದ 4 ತಾಸು ಬೇಕಾಗುತ್ತದೆ. ಆ ಸಂದರ್ಭ ಅಗ್ನಿಶಾಮಕ ದಳದವರು ನೀರು ಹಾಯಿಸಿ ಅನಿಲ ಹರಡುವಿಕೆ ನಿಯಂತ್ರಿಸುವ ಕಾರ್ಯ ಮಾಡುತ್ತಾರೆ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಧಿಕಾರಿಯೊಬ್ಬರು ‘ಸುದಿನ’ಕ್ಕೆ ಮಾಹಿತಿ ನೀಡಿದ್ದಾರೆ.

ಮಾರ್ಗಸೂಚಿ ಪಾಲನೆಗೆ ಕ್ರಮ
ಗ್ಯಾಸ್‌ ಟ್ಯಾಂಕರ್‌ಗಳು ಸಂಚಾರದ ವೇಳೆ ಹೆಚ್ಚು ಜಾಗರೂಕತೆ ವಹಿಸಬೇಕಾದುದು ಅಗತ್ಯ. ಟ್ಯಾಂಕರ್‌ಗಳ ಸಂಚಾರ ಮತ್ತು ನಿರ್ವಹಣೆ ಕುರಿತು ಪ್ರಸ್ತುತ ಕೆಲವು ನಿಯಮಗಳಿವೆ. ಅವುಗಳು ಪಾಲನೆಯಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
– ಶಶಿಕಾಂತ್‌ ಸೆಂಥಿಲ್‌, ದ.ಕ.ಜಿಲ್ಲಾಧಿಕಾರಿ  

— ಕೇಶವ ಕುಂದರ್‌

ಟಾಪ್ ನ್ಯೂಸ್

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

4(1

Mangaluru: ಪಂಪ್‌ವೆಲ್‌-ಪಡೀಲ್‌ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.