ರೈತರ ಅಜ್ಞಾನದಿಂದ ಭೂ ಫಲವತ್ತತೆ ಹಾಳು
Team Udayavani, Nov 23, 2018, 11:10 AM IST
ರಾಯಚೂರು: ಭಾರತದಲ್ಲಿ ಇರುವಂಥ ವಾತಾನುಕೂಲ ಸ್ಥಿತಿ ಮತ್ಯಾವ ದೇಶದಲ್ಲೂ ಇಲ್ಲ. ಆದರೆ, ನಮ್ಮ ರೈತರಲ್ಲಿನ ಅಜ್ಞಾನದಿಂದ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ಗದಗ-ವಿಜಯಪುರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದಜಿ ವಿಷಾದಿಸಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿವಿಯ 10ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಸಂಸ್ಕೃತಿಯ ತಾಯಿ ಇದ್ದಂತೆ. ಬೇರೆ ಯಾವ ಭೂ ಭಾಗದಲ್ಲೂ ಇಲ್ಲದಂಥ ಪೂರಕ ವಾತಾವರಣ ನಮ್ಮ ದೇಶದಲ್ಲಿದೆ. ಆದರೆ, ಹೇಗೆ ಕೃಷಿ ಮಾಡಬೇಕು ಎಂಬ ಪರಿಕಲ್ಪನೆ ಇಲ್ಲದೇ ಇಂದು ದೇಶದ ಕೃಷಿ ವಲಯ ಸೊರಗುತ್ತಿದೆ. ಅಧಿಕ ಇಳುವರಿ ಬರಲಿ ಎಂಬ ಕಾರಣಕ್ಕೆ ಮನಸೋ ಇಚ್ಛೆ ರಾಸಾಯನಿಕ ಸಿಂಪಡಿಸ ಲಾಗುತ್ತಿದೆ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ನೀರಾವರಿ ಯೋಜನೆಗಳ ಅನುಷ್ಠಾನವೇ ಸರಿಯಾಗಿ ಆಗುತ್ತಿಲ್ಲ ಎಂದು ವಿಷಾದಿಸಿದರು.
ನಾವು ದೇಶಿ ಕೃಷಿ ಪದ್ಧತಿಯನ್ನು ಕಡೆಗಣಿಸುತ್ತಿದ್ದೇವೆ. ಕೃಷಿಯಲ್ಲಿ ಹೊಸ ಅನ್ವೇಷಣೆಗಳ ಅಗತ್ಯವಿಲ್ಲ. ಹಿರಿಯರು ಮಾಡಿದ ಕೃಷಿ ಪದ್ಧತಿಯನ್ನು ಮುಂದುವರಿಸಿದರೆ ಸಾಕು ಉತ್ತಮ ಇಳುವರಿ ಪಡೆಯಬಹುದು. ವೇದ ಪುರಾಣ, ಉಪನಿಷತ್‌ಗಳಲ್ಲಿ ಕೃಷಿ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಗುಣಮಟ್ಟದ ಆಹಾರೋತ್ಪಾದನೆಗೆ ಹೆಚ್ಚು ಗಮನ ಕೊಡಬೇಕು. ತಪ್ಪು ದಾರಿಯಲ್ಲಿ ಸಾಗುತ್ತಿರುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಹೊಣೆ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಪದವೀಧರರ ಮೇಲಿದೆ ಎಂದರು.
ತಮಿಳುನಾಡಿನ ಕೊಯಮತ್ತೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ| ಕೆ.ರಾಮಸ್ವಾಮಿ ವಿಶೇಷ ಉಪನ್ಯಾಸ ನೀಡಿ, ದೇಶದಲ್ಲಿ ಶೇ.54ರಷ್ಟು ಜನ ಕೃಷಿ ಅವಲಂಬಿತರಾಗಿದ್ದರೂ ಸರ್ಕಾರಗಳು ಕೃಷಿಯನ್ನು ಸಂಪೂರ್ಣ ಕಡೆಗಣಿಸಿವೆ. ಕೃಷಿ ಇಂದಿಗೂ ರಾಜ್ಯ ಪಟ್ಟಿಯಲ್ಲಿದ್ದು, ಸಮವರ್ತಿ ಪಟ್ಟಿಗೆ ಸೇರಿಸಿದಾಗ ಪ್ರಗತಿ ಕಾಣಬಹುದು. ಇಂದು ಹಳ್ಳಿಗಳಿಂದ ಜನರನ್ನು ಕೈಗಾರಿಕೆಗಳಿಗೆ ಕರೆ ತರಲು ರಸ್ತೆ, ಸಾರಿಗೆ ಸೌಲಭ್ಯ ಕಲ್ಪಿಸುವಂತಹ ಸ್ಥಿತಿ ಇದೆ ಎಂದು ವಿಷಾದಿಸಿದರು.
ಕೃಷಿಗೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲ. ಎಲ್ಲ ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ಅಧೀನದಲ್ಲೇ ಕೆಲಸ ಮಾಡುತ್ತಿವೆ. ಹೀಗಾಗಿ ಅವುಗಳಿಗೆ ನಿರೀಕ್ಷಿತ ಉತ್ತೇಜನ ಸಿಗುತ್ತಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಆಧರಿಸಿ ಆಹಾರೋತ್ಪಾದನೆ ಮಾಡುವಲ್ಲಿ ಕೃಷಿ ವಿವಿಗಳ ಪಾತ್ರ ಗಣನೀಯವಾದದ್ದು, ಅದು ಇನ್ನೂ ಉತ್ತಮ ರೀತಿಯಲ್ಲಿ ಆಗಬೇಕು ಎಂದರು.
ವಿವಿ ಕುಲಪತಿ ಡಾ| ಕೆ.ಎನ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ನಿರ್ದೇಶಕ ಡಾ| ಎಸ್.ಕೆ.ಮೇಟಿ ಪ್ರಾಸ್ತಾವಿಕ ಮಾತನಾಡಿದರು. ಕುಲಸಚಿವ ಗುತ್ತಿ ಜಂಬುನಾಥ ಅತಿಥಿಗಳನ್ನು ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯರಾದ ಡಾ| ಎಂ.ಶೇಖರಗೌಡ, ಹೇಮಾವತಿ ಲಂಕೇಶ, ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ ಪರಸರೆಡ್ಡಿ, ವಿಶ್ರಾಂತ ಕುಲಪತಿ ಬಿ.ವಿ.ಪಾಟೀಲ ಸೇರಿದಂತೆ ಇತರರಿದ್ದರು.
ಯುವಕರು ಕೃಷಿ ಕ್ಷೇತ್ರದತ್ತ ಚಿತ್ತ ಹರಿಸಬೇಕು. ಯಾರಿಗೆ ಕೃಷಿ ಭೂಮಿ ಇರುತ್ತದೆಯೋ ಅವರು ಕಡ್ಡಾಯವಾಗಿ ಕೃಷಿಯನ್ನೇ ವೃತ್ತಿಯನ್ನಾಗಿ ಸ್ವೀಕರಿಸಬೇಕು. ಅಂದಾಗ ಈ ಕ್ಷೇತ್ರ ಬಲಗೊಳ್ಳಲಿದೆ. ಪ್ರಯೋಗಾತ್ಮಕ ಪದ್ಧತಿಯಿಂದ ಉತ್ತಮ ಆದಾಯ ಗಳಿಸುವಂಥ ಕ್ಷೇತ್ರವನ್ನಾಗಿ ಪರಿವರ್ತಿಸುವ ಶಕ್ತಿ ವಿದ್ಯಾವಂತರಿಗಿದೆ.
ಸ್ವಾಮಿ ನಿರ್ಭಯಾನಂದಜಿ, ಸ್ವಾಮಿ ವಿವೇಕಾನಂದ ಆಶ್ರಮ, ವಿಜಯಪುರ.
ಗಮನ ಸೆಳೆದ ಡ್ರೋಣ್
ಕೃಷಿ ವಿವಿಯ 10ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಡ್ರೋನ್ ಗಮನ ಸೆಳೆಯಿತು. ಯಂತ್ರೋಪಕರಣ ಮತ್ತು ತಾಂತ್ರಿಕ ವಿಭಾಗದ ಆರು ವಿದ್ಯಾರ್ಥಿಗಳ ತಂಡ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸುವ ತಂತ್ರಜ್ಞಾನ ರೂಪಿಸಲಾಗಿದೆ. ಇದರಿಂದ ಕುಳಿತಲ್ಲಿಯೇ ಬೆಳೆಗೆ ಕ್ರಿಮಿನಾಶಕ ಸಿಂಪರಣೆ ಮಾಡಬಹುದು. ರಾಷ್ಟ್ರೀಯ ಕೃಷಿ ಯೋಜನೆ ಅನುದಾನದಡಿ 18 ಲಕ್ಷ ರೂ. ವೆಚ್ಚದಲ್ಲಿ ಈ ಯಂತ್ರ ರೂಪಿಸಲಾಗಿದೆ. ಆರಂಭಿಕ ಹಂತದಲ್ಲಿ ಒಂದು ಲೀಟರ್ ಸಾಮರ್ಥ್ಯ ಹೊಂದಿದ್ದು, ಹಂತ ಹಂತವಾಗಿ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಇದೆ. ಬ್ಯಾಟರಿ ಚಾಲಿತ ಯಂತ್ರ ಇದಾಗಿದ್ದು, ಎರಡೂವರೆ ಎಕರೆಗೆ ಕ್ರಿಮಿನಾಶಕ ಸಿಂಪರಣೆ ಮಾಡಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ
ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್ ಸೇರಿ ಮೂವರ ದುರ್ಮರಣ
Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್
Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್ 5 ವಿದ್ಯುತ್ ಘಟಕ ಸ್ಥಗಿತ
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.