ಇಷ್ಟಾರ್ಥ ಸಿದ್ದಿಗೆ ಹೆಸರು ವಾಸಿ ಪಂಚ ಪಕ್ಷಿ ಮಾರುತಿ ಕ್ಷೇತ್ರ


Team Udayavani, Nov 24, 2018, 5:45 AM IST

2556.jpg

ಅಮೃತಘಳಿಗೆಯ ಕಾಲದಲ್ಲಿ ನಿರ್ಮಾಣವಾದ ದೇಗುಲ ಎಂಬ ಹೆಗ್ಗಳಿಕೆ ಪಂಚಪಕ್ಷಿ ಮಾರುತಿ ಕ್ಷೇತ್ರಕ್ಕಿದೆ. ವಿಜಯನಗರದ ಅರಸರ ಕಾಲದ್ದೆಂದು ಹೇಳಲಾಗುವ ಈ ದೇವಾಲಯ, ಹಿಂದೂ-ಮುಸ್ಲಿಂ ಭಾವೈಕ್ಯತೆಯ ತಾಣವೂ ಆಗಿದೆ…

ಪಂಚ ಪಕ್ಷಿಶಾಸ್ತ್ರದ ಆಧಾರದ ಮೇಲೆ ನಿಮ್ಮ ಅಮೃತ ಗಳಿಗೆಯಲ್ಲಿ ತುಂಬಿದ ಕಾಯಿ ತಂದು ದರ್ಶನ ಮಾಡಿ, ದೇವರಲ್ಲಿ ಬೇಡಿಕೆ ಸಲ್ಲಿಸಿ, ಕಾಯಿಯನ್ನು ದೇಗುಲದಲ್ಲಿಟ್ಟು, ಎಡಗಡೆಯಿಂದ 5 ಬಾರಿ ಪ್ರದಕ್ಷಿಣೆ ಹಾಕಬೇಕು. ಒಟ್ಟು 41 ದಿನಗಳ ಒಳಗೆ 3 ಬಾರಿ ದರ್ಶನ ಮಾಡಿದರೆ, ನೀವು ಅಂದುಕೊಂಡ ಕೆಲಸ ಆಗುವುದು ಶತಸಿದ್ಧ. ಆಗ ನೀವಿಟ್ಟ ಕಾಯಿ ಹೊಡೆಯಿಸಿ, ಬಲಗಡೆಯಿಂದ 5 ಬಾರಿ ದರ್ಶನ ಮಾಬೇಕು. ಆರೋಗ್ಯ, ಉದ್ಯೋಗ, ಸಂತಾನ ಫ‌ಲ.. ಇತ್ಯಾದಿ ಸಮಸ್ಯೆಗಳ ನಿವಾರಣೆಗೆ ಈ ಮಾರುತೇಶ್ವರನಲ್ಲಿ ನಂಬಿಕೆ ಇಟ್ಟು, ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಬೇಡಿಕೊಂಡರೆ ಸರ್ವ ಸಮಸ್ಯೆಗಳೂ ನಿವಾರಣೆ ಆಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಇಂಥ ದಿವ್ಯ ಶಕ್ತಿ,  ಶ್ರೀ ಪಂಚಪಕ್ಷಿ$ ಮಾರುತೇಶ್ವರನಿಗಿದೆ.  ಈತ ಇರುವುದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಎಸ್‌. ಗಂಗನಹಾಳ ಎಂಬಲ್ಲಿ.

ರಾಜ್ಯ-ಹೊರ ರಾಜ್ಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಂಚ ಪಕ್ಷಿ ಮಾರುತೇಶ್ವ ದೇವರಿಗಿದ್ದಾರೆ. 
ಹೀಗೆ ಸಾವಿರಾರು ಭಕ್ತರ  ಇಷ್ಟಾರ್ಥ, ಕೋರಿಕೆಗಳನ್ನು ಈಡೇರಿಸುವ ಪಂಚಪಕ್ಷಿ$ ಮಾರುತಿ ಮೂಲತಃ ಉದ್ಭವ ಮೂರ್ತಿ. ದಕ್ಷಿಣಾಭಿಮುಖವಾಗಿ ನಿಂತಿರುವ ಈ ಪಂಚಪಕ್ಷಿ ಮಾರುತಿ ದೇಗುಲ, ಮೂಲತಃ ವಿಜಯನಗರದ ಕೃಷ್ಣ ದೇವರಾಯ ಕಾಲದ್ದು. ತಾತಾ ತಿರುಮಲಾಚಾರ್ಯರು ನಿರ್ಮಿಸಿದ್ದು. ಕಾಲಾ ನಂತರದಲ್ಲಿ ಇದು ಅವಸಾನ ಹೊಂದಿತ್ತು. ಗಂಗನಹಾಳದ ಶುಕುರ್‌ಭಾಷ ಶರಣರ ಶಿಷ್ಯ ದಿ. ರುದ್ರಗೌಡ ಶರಣರು ಇದರ ಪುನರ್‌ ನಿರ್ಮಾತೃಗಳು!. ಪಂಚಪಕ್ಷಿ$ ಸಮಯ ಅಂದರೆ ಅಮೃತ ಗಳಿಗೆಯಲ್ಲಿ ಮಾತ್ರ ಈ ದೇಗುಲ ನಿರ್ಮಾಣ ಮಾಡಿದ್ದು. ಈ ಗಳಿಗೆಯಲ್ಲಿ ಮೊದಲನೆಯದಾಗಿ ವಿಶ್ವವಿಖ್ಯಾತ ಜಗನ್ನಾಥ ಪುರಿ ದೇಗುಲ ಕಟ್ಟಲಾಗಿದೆ. ಅದನ್ನು ಬಿಟ್ಟರೆ, ಅಮೃತ ಗಳಿಗೆಯಲ್ಲಿ ನಿರ್ಮಾಣವಾಗಿರುವ ದೇವಾಲಯ ಇದೊಂದೇ ಎನ್ನುತ್ತದೆ ಇತಿಹಾಸ.  ಹೀಗಾಗಿ, ದೇಗುಲದ ಕಟ್ಟಡ ಕಾರ್ಯ ಪೂರ್ಣಗೊಳ್ಳಲಿಕ್ಕೆ 11 ವರ್ಷಗಳೇ ಬೇಕಾಯಿತಂತೆ. ಈ ದೇಗುಲದ ಆವರಣದಲ್ಲಿ ಈ ಗುರು-ಶಿಷ್ಯರ ಸಮಾಗಮ ಸನ್ನಿಧಿ ಇದ್ದು, ಇದಕ್ಕೆ ನಿತ್ಯವೂ ಪೂಜೆ-ಪುನಸ್ಕಾರಗಳು ಸಲ್ಲುತ್ತವೆ. ಆ ಕಾರಣದಿಂದ ಈ ದೇವಾಲಯವು  ಹಿಂದೂ-ಮುಸ್ಲಿàಂ ಭಾವೈಕ್ಯತೆಯ ತಾಣವೂ ಆಗಿದೆ. ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ದರ್ಶನಕ್ಕೆ ಬರುವುದು ವಿಶೇಷ.

ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಮಹಾಮಂಗಳಾರತಿ ನಡೆಯುತ್ತದೆ. ಪ್ರತಿ ಶನಿವಾರ, ಅಮಾವಾಸ್ಯೆ, ಹುಣ್ಣಿಮೆ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಆಗ ವಿಶೇಷ ಅಲಂಕಾರ ಇರುತ್ತೆ. ಕಾರ್ತಿಕ ಮಾಸದ ಚಟ್ಟಿ ಅಮಾವಾಸ್ಯೆಯಲ್ಲಿ ರಥೋತ್ಸವ ಜರುಗುತ್ತದೆ. ಪ್ರತಿ ಶನಿವಾರ ದೇಗುಲದ ಆವರಣದಲ್ಲಿ ಉತ್ಸವ ಮೂರ್ತಿಯ ಪಲ್ಲಕ್ಕಿಯ ಪ್ರದಕ್ಷಿಣೆ, ಜಾತ್ರೆ ಸಂದರ್ಭದಲ್ಲಿ ಊರಲ್ಲಿ ಪಲ್ಲಕ್ಕಿ ಹೋಗುವ  ಸಂಪ್ರದಾಯ ಇದೆ. ಭಕ್ತರ ಕಾರ್ಯಸಿದ್ಧಿ ಆದರೆ ದೇವರಿಗೆ ಬೆಳ್ಳಿ, ದವಸ-ಧಾನ್ಯ, ಹಣವನ್ನು ಕಾಣಿಕೆ ಆಗಿ ನೀಡುತ್ತಾರೆ. ಭಕ್ತರು ಪುಷ್ಪಾಲಂಕಾರ,  ದೀಡ್‌ ನಮಸ್ಕಾರ ಸೇವೆ ಮಾಡುತ್ತಾರೆ. ದೇಗುಲದ ಆವರಣದಲ್ಲಿ ಸುಂದರವಾದ ಈಶ್ವರ ದೇಗುಲವೂ ಇದೆ. ನಿತ್ಯ ಮಠದಲ್ಲಿ ಅನ್ನ ದಾಸೋಹ ನಡೆಯುತ್ತದೆ. ಭಕ್ತರು ಜವಳ, ನಾಮಕರಣ… ಮಂಗಳ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ. “ಪಂಚಪಕ್ಷಿ ಟ್ರಸ್ಟ್‌, ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತದೆ. 

ಸಾರಿಗೆ ಸೌಲಭ್ಯ
ಲಿಂಗಸೂರು-ಗಂಗಾವತಿ ಮುಖ್ಯ ಹೆದ್ದಾರಿಯಿಂದ ಸುಮಾರು 4 ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಕೊಪ್ಪಳ ಕಡೆಯಿಂದ ಬರುವವರು ಗಂಗನಹಾಳ ಕ್ರಾಸ್‌ಗೆ, ಸಿಂಧನೂರು ಕಡೆಯಿಂದ ತಾವರಗೇರಾಗೆ ಬಂದರೆ ಸರಕಾರಿ ಬಸ್ಸು ಮತ್ತು ಖಾಸಗಿ ವಾಹನಗಳು ಸಿಗುತ್ತವೆ. 

ಸ್ವರೂಪಾನಂದ ಎಂ.ಕೊಟ್ಟೂರು

ಟಾಪ್ ನ್ಯೂಸ್

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.