ಹಳದಿ ಕೊಕ್ಕಿನ ನೀಲಿ ಮೆಗಪಿ ಹಕ್ಕಿ

Team Udayavani, Nov 24, 2018, 5:50 AM IST

2-aa.jpg

ಈ ಮೆಗಪಿ ಹಕ್ಕಿಗಳು ಬಟ್ಟಲಿನಾಕಾರದ ಗೂಡಿನಲ್ಲಿ ಮಧ್ಯೆ ನಾರು ಬಳಸಿ ಮೆತ್ತನೆ ಹಾಸನ್ನು ಹಾಕುತ್ತದೆ.Yellow Billed Blue Magpie  ((Urocissa flavirrostris) (Blyth)  R- Pigeon+  ಒಂದು ಸಲಕ್ಕೆ 3-4 ಮೊಟ್ಟೆ ಇಡುತ್ತದೆ. ಕಾವು ಕೊಡುವುದು, ಮರಿಗಳ ರಕ್ಷಣೆಯ ಕೆಲಸವನ್ನು ಗಂಡು -ಹೆಣ್ಣು ಸೇರಿ ನಿರ್ವಹಿಸುತ್ತದೆ. 

ಮರಹಕ್ಕಿ, ಬಿಳಿಹೊಟ್ಟೆ ಕದಗ , ಕಾಗೆ ಗುಂಪಿಗೆ ಸೇರಿದ ವಿಶೇಷ ಗುಣವುಳ್ಳ ಹಕ್ಕಿಯೇ ಈ ಉದ್ದ ಬಾಲದ ಮೆಗೆಪೈ ಉರುಫ್ ಮೆಗೆಪಿ ಹಕ್ಕಿ.  ಇದರ ಬಾಲ ತುಂಬಾ ಉದ್ದ ಇದೆ. ಅಂದರೆ ಸುಮಾರು 46 ಸೆಂ.ಮೀ. ಉದ್ದ ಇದೆ. ಬಾಲದ ಮೇಲೆ ಎರಡು ಉದ್ದದ ಗೆರಿಗಳಿವೆ. ಈ ಹಕ್ಕಿ ಗರಿ ಬಿಚ್ಚಿ ನಿಂತರೆ, ಅದು ತೆರೆದರೆ ನವಿಲನ್ನು ನೆನಪಿಸುತ್ತದೆ. ಬಾಲದ ಅಡಿಯಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಗರಿಯ ಜೊತೆಗೆ ಬಾಲದಲ್ಲಿ ಮೇಲಿನಿಂದ ಕೆಳಗಡೆಗೆ ಸಮಾನಾಂತರವಾಗಿ -ಕಪ್ಪು ಬಣ್ಣದ ಪಟ್ಟಿ ಕೂಡ ಇದೆ.  ಈ ಕಪ್ಪು ಪಟ್ಟಿ ಸುಮಾರು ಒಂದು ಇಂಚಿನಷ್ಟಿರುತ್ತದೆ. ಇಡೀ ಹಕ್ಕಿ ಆಕರ್ಷಕವಾಗಿ ಕಾಣುವುದು ಇದೇ ಕಾರಣಕ್ಕೆ.  ಹೊಟ್ಟೆ ಮತ್ತು ತಲೆಯ ಮೇಲಿರುವ ಬಿಳೀಬಣ್ಣದಿಂದಲೇ ಇದು ಮೆಗಪಿ ಹಕ್ಕಿ ಅಂಥ ಗುರುತಿಸಲು ಸುಲಭವಾಗಿರುವುದು. 

ಇದು ‘ಕಾರ್ವಿಡಿಯಾ’ ಕುಟುಂಬಕ್ಕೆ ಸೇರಿದೆ. ಈ ಕುಟುಂಬದಲ್ಲಿ  ಮೆಗೆಪಿ ಹಕ್ಕಿಗೆ ಮಾತ್ರ ಹಳದಿ ಚುಂಚು ಇರುವುದು. ಇದು ಗುಬ್ಬಚ್ಚಿಯಂತೆ ಶಾಂತ ಸ್ವಭಾವದ ಹಕ್ಕಿ. ತೈವಾನ್‌ನಲ್ಲಿ ಕಾಣುವ ಮೆಗೆಪಿ ಹಕ್ಕಿಯು ಹಳದಿ ಕೊಕ್ಕು ಮತ್ತು ಕಿತ್ತಳೆ ಬಣ್ಣದಿಂದ ಕೂಡಿದೆ.  ಇದರ ಉಪ ಪ್ರಬೇಧದ ಹಕ್ಕಿ ಸಿಕ್ಕಿದೆ.  ಅದೇರೀತಿ ಚುಂಚು ಮಾತ್ರ ತಿಳಿಗೆಂಪಿನಿಂದ ಕೂಡಿದೆ.  

ಬಣ್ಣವನ್ನು ಆಧರಿಸಿಯೇ ಈ ಹಕ್ಕಿಗಳಲ್ಲಿ ಎರಡು ಉಪಜಾತಿಗಳಿವೆ ಎಂದು ವಿಂಗಡಿಸಲಾಗಿದೆ.  ಹಿಮಾಲಯದ ದೊಡ್ಡ ಮರಗಳಿರುವ ಭಾಗದಲ್ಲಿ ಈ ತಳಿಯ ಹಕ್ಕಿ ಇದೆ. ಇದಲ್ಲದೇ ಕೆಲವು ಭಾಗದಲ್ಲಿ ಬಿಳಿ ಮತ್ತು ಕಪ್ಪು ಛಾಯೆಯ ಹಕ್ಕಿ ಸಹ ಕಂಡಿದ್ದು ದಾಖಲಾಗಿದೆ. ಮೂರು ಸಾವಿರ ಅಡಿಗೂ ಎತ್ತರದ ಪರ್ವತ, ಅಲ್ಲಿನ ಮರಗಳಿರುವ ಜಾಗದಲ್ಲಿ ಗೂಡು ಕಟ್ಟಿ ಮರಿಮಾಡುತ್ತವೆ.  

 ಹಳದಿ ಚುಂಚಿನ ಮೆಗೆಪಿ ಹಕ್ಕಿ ಸಿಗುವ ಜಾಗದಲ್ಲೇ, ಕೆಂಪು ಚುಂಚಿನ ಮೆಗೆಪಿ ಹಕ್ಕಿ ಸಹ ಇರುತ್ತದೆ. 
ತೇರಿ-ಗರ್ವಾಲಿ, ಕುಮಾನ್‌, ನೇಪಾಳದಲ್ಲಿ ಕೆಂಪು ಚುಂಚಿರುವ ಮತ್ತು ನೆತ್ತಿಯ ಕೆಳಗಿರುವ ಬಿಳಿಬಣ್ಣದ ಮೆಗಪಿಗಳೇ ಹೆಚ್ಚು.  ಮರದಿಂದ ಮರಕ್ಕೆ ಹಾರುವಾಗ ಇದರ ರೆಕ್ಕೆಗಳು ಬಣ್ಣದ ಬೀಸಣಿಕೆಯಂತೆ ಕಾಣುತ್ತವೆ.  ರೆಕ್ಕೆಯಲ್ಲಿರುವ ತಿಳಿನೀಲಿ, ಬಿಳಿ, ಬದನೆಕಾಯಿ ಬಣ್ಣ ಮಿಶ್ರಿತ ಹೊಳೆವ ನೀಲಿ ಬಣ್ಣ ಮತ್ತು ರೆಕ್ಕೆಯ ಅಡಿಯಲ್ಲಿರುವ ತಿಳಿ ಬಿಳಿ ಸಹ ಎದ್ದು ಕಾಣುತ್ತದೆ.  ಗಾಳಿಯಲ್ಲಿ ಹಾರುವಾಗ  ಉದ್ದದ ಬಾಲ  ಗಾಳಿಪಟದ ಬಾಲಂಗೋಚಿಯಂತೆ ಕಾಣಿಸುತ್ತದೆ. ಹುಲ್ಲುಗಾವಲ್ಲಿ ಇರುವ -ಹುಲ್ಲು ಬಣ್ಣದ ಮಿಡತೆ ಇತ್ಯಾದಿಗಳನ್ನು ಇದು ಸ್ವಲ್ಪ ದೂರ ಹಾರಿ- ಗಾಬರಿಗೊಳಿಸಿ, ಅದರ ಮೇಲೆ ಜಿಗಿದು ಹಿಡಿದು ತಿನ್ನುತ್ತದೆ. ಚಿಕ್ಕ ಮೃದ್ವಂಗಿ, ಕೆಲವು ಚಿಕ್ಕ ಹಕ್ಕಿಗಳ ಮೊಟ್ಟೆ, ದುರ್ಬಲ ಮರಿಗಳನ್ನು ಸಹ ಇದು ಕಬಳಿಸುವುದಿದೆ. ಇದು ಸಾಮಾನ್ಯವಾಗಿ 4 ಇಲ್ಲವೇ 10ರ ಗುಂಪಿನಲ್ಲೂ ಕಾಣಸಿಗುತ್ತದೆ. ಒಣ ಹವೆ ಹೆಚ್ಚಿರುವ ಭಾಗದಲ್ಲೇ ಹೆಚ್ಚಾಗಿ ವಾಸವಿರುತ್ತದೆ.  ಎತ್ತರದ ಮರದ ಟಿಸಿಲಿನಲ್ಲಿ ಬಟ್ಟಲಿನ ಆಕಾರದ ಗೂಡು ನಿರ್ಮಿಸಿ ಅದರ ಹೊರಮೈಗೆ ಮಣ್ಣಿನಂಥ ಪದಾರ್ಥದಿಂದ ಗಿಲಾವು ಮಾಡಿ ಭದ್ರ ಪಡಿಸುತ್ತದೆ.  ಮೇ ಯಿಂದ ಜುಲೈ ಇದು ಮರಿಮಾಡುವ ಸಮಯ. ಬಟ್ಟಲಿನಾಕಾರದ ಗೂಡಿನಲ್ಲಿ ಮಧ್ಯೆ ನಾರು ಬಳಸಿ ಮೆತ್ತನೆ ಹಾಸನ್ನು ಹಾಕುತ್ತದೆ. ಒಂದು ಸಲಕ್ಕೆ 3-4 ಮೊಟ್ಟೆ ಇಡುತ್ತದೆ. ಕಾವು ಕೊಡುವುದು, ಮರಿಗಳ ರಕ್ಷಣೆಯ ಕೆಲಸವನ್ನು ಗಂಡು -ಹೆಣ್ಣು ಸೇರಿ ನಿರ್ವಹಿಸುತ್ತದೆ. 

ಟಾಪ್ ನ್ಯೂಸ್

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Congress: ಸಚಿವ ಸಂಪುಟ ಬದಲಾವಣೆ ಸಿಎಂ ವಿವೇಚನೆಗೆ: ಡಾ| ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Dharamstshala: ಗ್ರಾಮಾಭಿವೃದ್ಧಿ ದೇಶದುದ್ದಗಲಕ್ಕೂ ಹರಡಬೇಕಿದೆ: ಸಚಿವ ಪರಮೇಶ್ವರ

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

Udupi: ಗೀತಾರ್ಥ ಚಿಂತನೆ 109: ದೇವರ ಇಚ್ಛೆ ಏನು?

1-MGM

Udupi MGM; ಡಿ.1ರಂದು ಪ್ರಾಕ್ತನ ವಿದ್ಯಾರ್ಥಿಗಳ ಅಮೃತ ಸಮ್ಮಿಲನ ಕಾರ್ಯಕ್ರಮ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.