ಶೇಕ್ ಎಂಬ ಮಾದರಿ ಶಿಕ್ಷಕ
Team Udayavani, Nov 24, 2018, 6:00 AM IST
ವಿಜಯಪುರ ಜಿಲ್ಲೆಯ ದೇವರ ನಿಂಬರಗಿಯ ಸತ್ಯ ಸಾಯಿಬಾಬಾ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ. ಕೆ. ಶೇಖ್ ಹಲವು ವಿಷಯಗಳಲ್ಲಿ ಎಲ್ಲರಿಗೂ ಮಾದರಿಯಾಗಬಲ್ಲ ವ್ಯಕ್ತಿ. ಇವರು ನಾಣ್ಯ ಸಂಗ್ರಹ, ವಿಶೇಷ ಚಿತ್ರ ಸಂಗ್ರಣೆಯಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದಾರೆ.
ಮೇಲಾಗಿ ಶೇಖ್ ಮೂಲತ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದವರು. ಎಂಟು ಮಕ್ಕಳಲ್ಲಿ ಕೊನೆಯವರು. ಕುಟುಂಬದಲ್ಲಿ ಇವರು ಒಬ್ಬರೇ ಶಿಕ್ಷಣ ಪಡೆದವರು ಎನ್ನುವ ಹೆಗ್ಗಳಿಕೆ ಬೇರೆ ಇದೆ.
60 ದೇಶದ ನಾಣ್ಯ ಸಂಗ್ರಹಣೆ
ಅಮೆರಿಕಾ, ಶ್ರೀಲಂಕಾ, ನೇಪಾಳ, ಇಂಡೋನೇಷಿಯಾ ಹೀಗೆ ಸುಮಾರು 60 ದೇಶದ ನಾಣ್ಯಗಳ ಸಂಗ್ರಹ ಮಾಡಿದ್ದಾರೆ. 180ಕ್ಕೂ ಅಪರೂಪ ನೋಟುಗಳೂ ಇವರಲ್ಲಿವೆ. 200 ವರ್ಷದಷ್ಟು ಹಳೆಯ ಅಂದರೆ 1818 ಕಾಲದ ನಾಣ್ಯಗಳನ್ನು ಕೂಡಿಟ್ಟಿದ್ದಾ ರೆ. ನಮ್ಮ ದೇಶದ ನಯಾ ಪೈಸೆ, ಆಣೆಗಳು, ತೂತಿನ ನಾಣ್ಯಗಳು ಕೆನಡಾ ಮತ್ತು ನೇಪಾಳದ ಪ್ಲಾಸ್ಟಿಕ್ ನೋಟುಗಳು ಇವರಲ್ಲುಂಟು. 50 ದೇಶದ ಅಂಚೆ ಚೀಟಿ ಮತ್ತು ಜಗತ್ತಿನ ಅತೀ ವಿಶೇಷ ಚಿತ್ರಗಳನ್ನೂ ಸಂಗ್ರಹಿಸಿದ್ದಾ ರೆ.
ವಿಜ್ಞಾನ ಮಾದರಿಗಳ ಪ್ರಯೋಗ :
ಶೇಖ್, ನಾಣ್ಯ ಸಂಗ್ರಹಣೆಯ ಜೊತೆಗೆ ಶಾಲೆಯಲ್ಲಿ ಹಲವು ವಿಜ್ಞಾನದ ಮಾದರಿ ತಯಾರಿಸಿ¨ªಾರೆ. ವಿದ್ಯಾರ್ಥಿಗಳಿಗೆ ರಾಜ್ಯದ ರಾಜಧಾನಿ ಹೆಸರನ್ನು ಸುಲಭವಾಗಿ ತಿಳಿಯಲು ಮ್ಯಾಜಿಕ… ಮ್ಯಾಚಿಂಗ್ ಬೋರ್ಡ್ ತಯಾರಿಸಿದ್ದಾರೆ. ಹೆಲಿಕಾಪ್ಟರ್ ಮಾದರಿ, ತಾಜ್ ಮಹಲ್, ಕೆಂಪುಕೋಟೆ, ತಮ್ಮ ಸ್ವಂತ ಶಾಲೆಯ ಕಟ್ಟಡ, ಗಾಂಧಿ ಚರಕ ಸೇರಿದಂತೆ ಹಲವು ಮಾದರಿ ತಯಾರಿಸಿದ್ದಾರೆ. ಟ್ಯಾಕ್ಟರ್ ಟ್ಯೂಬ, ದಪ್ಪ ತಂತಿ, ಬಳಸಿ ಎಸೆದ ಪ್ಲಾಸ್ಟಿಕ್ ಚಮಚ, ಚೆಂಡನ್ನು ಬಳಸಿ 15-8 ಅಡಿಯ ಡೈನೋಸಾರನ್ನು ತಯಾರಿಸಿದ್ದಾ ರೆ. ಇವೆಲ್ಲ ಮಾದರಿಗಳನ್ನು ಕೇವಲ 250 ರೂ.ಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಿರುವುದು ವಿಶೇಷ.
ರೇವಣ್ಣಾ ಅರಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.