71 ರನ್ನಿಗೆ ಉದುರಿ 71 ರನ್ ಸೋಲುಂಡ ವಿಂಡೀಸ್
Team Udayavani, Nov 24, 2018, 6:00 AM IST
ನಾರ್ತ್‌ಸೌಂಡ್: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಈಗ ಮಾಜಿ ಆಗಿದೆ. ಆಸ್ಟ್ರೇಲಿಯ ಎದುರಿನ ಮೊದಲ ಸೆಮಿಫೈನಲ್‌ನಲ್ಲಿ ಬ್ಯಾಟಿಂಗ್ ಮರೆತಂತೆ ಆಡಿದ ಆತಿಥೇಯ ತಂಡ 71 ರನ್ನಿಗೆ ಆಲೌಟ್ ಆಗಿ 71 ರನ್ನುಗಳ ಭಾರೀ ಸೋಲನ್ನು ಮೈಮೇಲೆ ಎಳೆದುಕೊಂಡು ಕೂಟದಿಂದ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 5 ವಿಕೆಟಿಗೆ 142 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 17.3 ಓವರ್‌ಗಳಲ್ಲಿ ಇದರ ಸರಿ ಅರ್ಧದಷ್ಟು ಮೊತ್ತಕ್ಕೆ ಕುಸಿಯಿತು. ನಾಯಕಿ ಸ್ಟಫಾನಿ ಟಯ್ಲರ್ (16) ಹೊರತು ಪಡಿಸಿದರೆ ಉಳಿದವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ. ಕಾಂಗರೂ ಪಡೆ ಸಾಂ ಕ ದಾಳಿ ಮೂಲಕ ಯಶಸ್ಸು ಕಂಡಿತು. ಬೌಲಿಂಗಿಗೆ ಇಳಿದ ಎಲ್ಲ 6 ಮಂದಿ ವಿಕೆಟ್ ಬೇಟೆಯಾಡಿ ಆತಿಥೇಯರ ಮೇಲೆ ಮುಗಿಬಿದ್ದರು. ನೆಚ್ಚಿನ ತಂಡವಾಗಿದ್ದ ವಿಂಡೀಸಿನ ಈ ಆಘಾತಕಾರಿ ನಿರ್ಗಮನ ತವರಿನ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಆಸ್ಟ್ರೇಲಿಯದ ಇನ್‌ಫಾರ್ಮ್ ಓಪನರ್ ಅಲಿಸ್ಸಾ ಹೀಲಿ ಸರ್ವಾಧಿಕ 46 ರನ್ ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನಾಯಕಿ ಮೆಗ್ ಲ್ಯಾನಿಂಗ್ 31, ರಶೆಲ್ ಹೇನ್ಸ್ ಔಟಾಗದೆ 25 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-20 ಓವರ್‌ಗಳಲ್ಲಿ 5 ವಿಕೆಟಿಗೆ 142 (ಹೀಲಿ 46, ಲ್ಯಾನಿಂಗ್ 31, ಹೇನ್ಸ್ ಔಟಾಗದೆ 25, ಟಯ್ಲರ್ 20ಕ್ಕೆ 1, ಮ್ಯಾಥ್ಯೂಸ್ 24ಕ್ಕೆ 1). ವೆಸ್ಟ್ ಇಂಡೀಸ್-17.3 ಓವರ್‌ಗಳಲ್ಲಿ ಆಲೌಟ್ 71 (ಟಯ್ಲರ್ 16, ಪೆರ್ರಿ 2ಕ್ಕೆ 2, ಗಾರ್ಡನರ್ 15ಕ್ಕೆ 2, ಕಿಮ್ಮಿನ್ಸ್ 17ಕ್ಕೆ 2).
ಪಂದ್ಯಶ್ರೇಷ್ಠ: ಅಲಿಸ್ಸಾ ಹೀಲಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.