ಮೃತದೇಹ ಸಿಗೋದು ಡೌಟು
Team Udayavani, Nov 24, 2018, 6:00 AM IST
ಪೋರ್ಟ್ ಬ್ಲೇರ್: ಅಂಡಮಾನ್ ಸಮೀಪದ ಸೆಂಟಿನೆಲ್ ದ್ವೀಪದಲ್ಲಿ ಇತ್ತೀಚೆಗೆ ಆದಿವಾಸಿಗಳಿಂದ ಹತ್ಯೆಗೀಡಾದ ಅಮೆರಿಕದ ಧರ್ಮ ಪ್ರಚಾರಕ ಜಾನ್ ಅಲೆನ್ ಚೌ ಮೃತ ದೇಹದ ಅವಶೇಷಗಳನ್ನು ಆದಷ್ಟು ಬೇಗನೇ ಪಡೆಯುವ ಒತ್ತಡದಲ್ಲಿ ಪೊಲೀಸ್ ಇಲಾಖೆ ಸಿಲುಕಿದೆ. ನ. 17ರಂದು ಜಾನ್ ಹತ್ಯೆಯಾಗಿದ್ದು, ಈಗಾಗಲೇ ಅವರನ್ನು ದ್ವೀಪದ ಸಾಗರ ತೀರದ ಒಂದು ಕಡೆ ಆದಿವಾಸಿಗಳು ಹೂತಿದ್ದು, ಕೆಲ ದಿನಗಳ ನಂತರ ಆ ದೇಹ ಹೊರ ತೆಗೆದು ಅದರ ಅವಶೇಷಗಳನ್ನು ಶಾಶ್ವತವಾಗಿ ದ್ವೀಪದಿಂದ ನಿರ್ಮೂಲನೆ ಮಾಡುವ ಕ್ರಮವನ್ನು ಕೆಲ ಆದಿವಾಸಿಗಳು ಹೊಂದಿರುತ್ತಾರೆಂದು ನಾನಾ ಆದಿವಾಸಿ ಸಂಪ್ರದಾಯಗಳ ಬಗ್ಗೆ ಜ್ಞಾನವುಳ್ಳ ತಜ್ಞರು ಹೇಳಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈಗ ಹೊಸತೊಂದು ಯೋಜನೆ ರೂಪಿಸಲಾಗಿದ್ದು, ಮಾನವ ಶಾಸ್ತ್ರಜ್ಞರು ಹಾಗೂ ಆದಿವಾಸಿ, ಬುಡಕಟ್ಟು ಸಂಪ್ರದಾಯಗಳ ತಜ್ಞರುಳ್ಳ ಸುಮಾರು 15-20 ಜನರ ತಂಡವೊಂದನ್ನು ಕರಾವಳಿ ರಕ್ಷಣಾ ಪಡೆಯ ನೌಕೆಯಲ್ಲಿ ಸಕಲ ಭದ್ರತೆಯೊಂದಿಗೆ ದ್ವೀಪಕ್ಕೆ ತೆರಳಿ, ಆದಿವಾಸಿಗಳ ಜತೆಗೆ ಸಂಪರ್ಕಕ್ಕಾಗಿ ಪ್ರಯತ್ನಿಸಲು ತೀರ್ಮಾನಿಸಲಾಗಿದೆ. ಈ ತಂಡದಲ್ಲಿ, ಜಾನ್ ಅವರನ್ನು ದ್ವೀಪದವರೆಗೆ ಕೊಂಡೊಯ್ದಿದ್ದ ಕಾರಣಕ್ಕೆ ಬಂಧನಕ್ಕೊಳಗಾಗಿರುವ ಏಳು ಮೀನುಗಾರರೂ ಇರಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.